Bathing Tips: ಈ ಮೂರು ಕೆಲಸ ಮಾಡಿದ ಬಳಿಕ ಸ್ನಾನ ಮಾಡಬೇಡಿ, ಇಲ್ದಿದ್ರೆ ಶರೀರ...!

Bathing Ayurvedic Rules: ದಿನನಿತ್ಯ ಸ್ನಾನ ಮಾಡುವುದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಸ್ನಾನವು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. (Lifestyle News In Kannada).  

Written by - Nitin Tabib | Last Updated : Mar 9, 2024, 01:26 PM IST
  • ಸ್ನಾನವು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
  • ಈ ಎಲ್ಲಾ ಪ್ರಯೋಜನಗಳ ಹೊರತಾಗಿಯೂ, ನೀವು ಕೆಲವು ಸಂದರ್ಭಗಳಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.
  • ನೀವು ಈ ನಿಯಮಗಳನ್ನು ಪಾಲಿಸದಿದ್ದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು.
Bathing Tips: ಈ ಮೂರು ಕೆಲಸ ಮಾಡಿದ ಬಳಿಕ ಸ್ನಾನ ಮಾಡಬೇಡಿ, ಇಲ್ದಿದ್ರೆ ಶರೀರ...! title=

Bathing Tips: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ನಾನಕ್ಕೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಕೇವಲ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಅಲ್ಲ, ಆಧ್ಯಾತ್ಮಿಕ ದೃಷ್ಟಿಯಿಂದಲೂ ಸಾಕಷ್ಟು ಮಹತ್ವವನ್ನು ಹೊಂದಿದೆ. ಆಯುರ್ವೇದದಲ್ಲಿ ಸಹ ಸ್ನಾನವನ್ನು ವಿಶ್ರಾಂತಿ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ, ಸ್ನಾನವು ನಿಮ್ಮ ಎಲ್ಲಾ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ನಿಮಗೆ ಉತ್ತಮ ನಿದ್ರೆಯನ್ನು ಕರುಣಿಸುತ್ತದೆ. ಇದರೊಂದಿಗೆ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೇಹದಿಂದ ಕೊಳಕು, ಬೆವರು ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ, ಇದರಿಂದ ತಾಜಾತನ ಹಾಗೂ ಆರೋಗ್ಯಕರ ಅನುಭವ ನಿಮ್ಮದಾಗುತ್ತದೆ. ಸ್ನಾನ ಮಾಡುವುದರಿಂದ ಚರ್ಮದ ನಿಶ್ಕ್ರೀಯ ಜೀವಕೋಶಗಳು ಹೋಗುತ್ತವೆ ಮತ್ತು ಚರ್ಮವು ಮೃದುವಾಗಿರುತ್ತದೆ. ಇದರೊಂದಿಗೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ನಾನವು (Ayurdveda Rules For Taking Bath) ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸ್ನಾನವು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ಪ್ರಯೋಜನಗಳ ಹೊರತಾಗಿಯೂ, ನೀವು ಕೆಲವು ಸಂದರ್ಭಗಳಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ನೀವು ಈ ನಿಯಮಗಳನ್ನು ಪಾಲಿಸದಿದ್ದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಆಯುರ್ವೇದ ವೈದ್ಯೆ ಡಾ.ವರಲಕ್ಷ್ಮಿ ಯನಮಂದ್ರ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. (Lifestyle News In Kannada).

1. ಆಹಾರ ಸೇವಿಸಿದ ತಕ್ಷಣ ಸ್ನಾನ ಮಾಡಬಾರದು
ಊಟ ಮಾಡಿದ ಬಳಿಕ ಅದನ್ನು ಜೀರ್ಣಿಸಿಕೊಳ್ಳಲು ದೇಹದೊಳಗೆ ಶಾಖ ಉತ್ಪತ್ತಿಯಾಗುತ್ತದೆ. ಆದರೆ ಸ್ನಾನದ ನಂತರ, ಈ ಶಾಖ ಹೊಟ್ಟೆಯಿಂದ ಬಾಹ್ಯ ಅಂಗಗಳಿಗೆ ಚಲಿಸಲು ಆರಂಭಿಸುತ್ತದೆ, ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಆಯುರ್ವೇದದ ಪ್ರಕಾರ, ಊಟ ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ 'ವಾತ' ಎಂಬ ಶಕ್ತಿಯ ಅಂಶವು ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಅಜೀರ್ಣ, ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡಬಹುದು. ವಾಸ್ತವದಲ್ಲಿ, ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ಒಂದು ನಿರ್ದಿಷ್ಟ ತಾಪಮಾನವನ್ನು ನಿರ್ವಹಿಸಬೇಕಾಗುತ್ತದೆ. ಸ್ನಾನವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ತಾಪಮಾನದಲ್ಲಿನ ಹಠಾತ್ ಬದಲಾವಣೆಯಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ಕುಂಠಿತಗೊಳ್ಳುತ್ತದೆ. ಇದರೊಂದಿಗೆ, ಜೀರ್ಣಕಾರಿ ಕಿಣ್ವಗಳು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ತಿಂದ ತಕ್ಷಣ ಸ್ನಾನ ಮಾಡುವುದರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳವಾಗಬಹುದು, ಇದು ಹೃದ್ರೋಗಿಗಳಿಗೆ ಅಪಾಯಕಾರಿ ಎಂದು ಅನೇಕ ಸಂಶೋಧನೆಗಳು ತೋರಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಊಟದ ಬಳಿಕ ನೀವು ಕನಿಷ್ಟ 30 ನಿಮಿಷದಿಂದ 1 ಗಂಟೆಯ ನಂತರ ಸ್ನಾನ ಮಾಡಬೇಕು.

ಇದನ್ನೂ ಓದಿ-Moringa For Cholesterol: ರಕ್ತ ನಾಳಗಳಲ್ಲಿನ ಜಿಡ್ಡು ತೊಲಗಿಸಲು ಈ ಗಿಡದ ಕಚ್ಚಾ ಎಲೆ ಅಗೆಯಿರಿ!

2. ಜ್ವರ ಇರುವ ಸಂದರ್ಭದಲ್ಲಿ ಸ್ನಾನ ಮಾಡಬಾರದು
ಜ್ವರದ ಸಮಯದಲ್ಲಿ ನೀವು ಸ್ನಾನ ಮಾಡುವುದನ್ನು ತಪ್ಪಿಸಬೇಕು. ಜ್ವರದ ಸಮಯದಲ್ಲಿ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ(bath as per hindu mythology). ವಿಶೇಷವಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸಬಹುದು, ಇದು ಜ್ವರವನ್ನು ಉಲ್ಬಣಗೊಳಿಸಬಹುದು. ಆಯುರ್ವೇದದ ಪ್ರಕಾರ, ಜ್ವರದ ಸಮಯದಲ್ಲಿ, ದೇಹದ ಶಾಖವನ್ನು ಹೊರಹಾಕಲು ಸಹಾಯ ಮಾಡಲು ಚರ್ಮದ ಕಡೆಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಆದರೆ ನೀವು ಸ್ನಾನ ಮಾಡುವಾಗ, ರಕ್ತದ ಹರಿವು ಚರ್ಮದಿಂದ ದೂರ ಹೋಗುತ್ತದೆ, ಇದರಿಂದಾಗಿ ಕಡಿಮೆ ರಕ್ತವು ಆಂತರಿಕ ಅಂಗಗಳನ್ನು ತಲುಪುತ್ತದೆ. ಇದು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ, ಜ್ವರದ ಸಂದರ್ಭದಲ್ಲಿ, ಯಾವಾಗಲೂ ಉಗುರು ಬೆಚ್ಚಗಿನ ನೀರಿನಿಂದ ಸ್ಪಾಂಜ್ ಬಾಥ್ ತೆಗೆದುಕೊಳ್ಳಿ ಅಥವಾ ಒದ್ದೆಯಾದ ಬಟ್ಟೆಯಿಂದ ದೇಹವನ್ನು ಒರೆಸಿಕೊಳ್ಳಿ.

ಇದನ್ನೂ ಓದಿ-Black Eye Beans For Diabetics: ಈ ಬೇಳೆಕಾಳಿನ ನಿಯಮಿತ ಸೇವನೆ ಕೂಡ ಮಧುಮೇಹ ನಿಯಂತ್ರಿಸುತ್ತದೆ!

3. ಅಜೀರ್ಣ ಸಮಸ್ಯೆಗಳು ಹೆಚ್ಚಾಗಬಹುದು
ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಸ್ನಾನ ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಮಲಬದ್ಧತೆಯಿಂದಾಗಿ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ನೀವು ಆಹಾರವನ್ನು ಸೇವಿಸಿದಾಗ, ರಕ್ತದ ಹರಿವು ನಿಮ್ಮ ಹೊಟ್ಟೆ ಮತ್ತು ಕರುಳಿಗೆ ಅದನ್ನು ಜೀರ್ಣಿಸಿಕೊಳ್ಳಲು ಕೇಂದ್ರೀಕರಿಸುತ್ತದೆ. ಸ್ನಾನವು ಈ ಹರಿವನ್ನು ಕಡಿಮೆ ಮಾಡುತ್ತದೆ. ಇದು ಅಜೀರ್ಣ, ಹೊಟ್ಟೆ ನೋವು ಮತ್ತು ಊತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ ಸಾಮಾನ್ಯವಾಗಿ ಮಲಬದ್ಧತೆ ಉಂಟಾಗುತ್ತದೆ. ತಿಂದ ತಕ್ಷಣ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಮತ್ತಷ್ಟು ನಿಧಾನವಾಗುತ್ತದೆ. ಆದ್ದರಿಂದ, ಮಲಬದ್ಧತೆಯ ಸಮಯದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News