Morning Walk: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ

Morning Walk: ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಮುಂಜಾನೆ ಕನಿಷ್ಠ ಅರ್ಧಗಂಟೆ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. ಹಾಗಿದ್ದರೆ,  ಬೆಳಗಿನ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 

Written by - Yashaswini V | Last Updated : May 6, 2024, 10:29 AM IST
  • ಮಾರ್ನಿಂಗ್ ವಾಕ್ ಮಾಡುವುದರಿಂದ ಇದು ಚಯಾಪಚಯವನ್ನು ಸುಧಾರಿಸಿ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
  • ಇದರಿಂದಾಗಿ ದೇಹದಲ್ಲಿ ಶೇಖರವಾಗಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡುವಲ್ಲಿಯೂ ಇದು ಪ್ರಮುಖ ಪ್ರಾತ್ರ ವಹಿಸುತ್ತದೆ.
  • ಬೆಳಗಿನ ನಡಿಗೆಯು ಸ್ನಾಯುಗಳನ್ನು ಬಳಪಡಿಸುವುದರೊಂದಿಗೆ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ.
Morning Walk: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ  title=

Morning Walk Benefits: ವಾಕಿಂಗ್ ಅಥವಾ ನಡಿಗೆ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಕೂಡ ಕೊಡುಗೆ ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿ ವಯೋಮಾನದವರಿಗೂ ವಾಕಿಂಗ್ ಸುಲಭವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ವ್ಯಾಯಮವಾಗಿದೆ. ಅದರಲ್ಲೂ ಶಾಂತ ವಾತಾವರಣ, ತಾಜಾ ಗಾಳಿಯಲ್ಲಿ, ಸೂರ್ಯನ ಎಳೆ ಬಿಸಿಲಿನಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಮಾರ್ನಿಂಗ್ ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. 

ಹಾಗಿದ್ದರೆ, ಪ್ರತಿದಿನ ಬೆಳಿಗ್ಗೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಎಂದು ನೋಡುವುದಾದರೆ.... 

* ದೈಹಿಕ ಆರೊಗ್ಯ (Physical Health): 
ಮಾರ್ನಿಂಗ್ ವಾಕ್ (Morning Walk) ಮಾಡುವುದರಿಂದ ಇದು ಚಯಾಪಚಯವನ್ನು ಸುಧಾರಿಸಿ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಶೇಖರವಾಗಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡುವಲ್ಲಿಯೂ ಇದು ಪ್ರಮುಖ ಪ್ರಾತ್ರ ವಹಿಸುತ್ತದೆ. ಹೆಚ್ಚುವರಿಯಾಗಿ, ಇದು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಬೊಜ್ಜು (Obesity) -ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ, ಬೆಳಗಿನ ನಡಿಗೆಯು ಸ್ನಾಯುಗಳನ್ನು ಬಳಪಡಿಸುವುದರೊಂದಿಗೆ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. 

ಇದನ್ನೂ ಓದಿ- ಬೆಳಗ್ಗೆ ಬ್ರಷ್ ಮಾಡುವ ಮುನ್ನ ಈ ನೀರನ್ನು ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಬೊಜ್ಜು ಸಂಪೂರ್ಣವಾಗಿ ಕರಗುತ್ತೆ! ಬಳುಕುವ ಬಳ್ಳಿಯಂತಾಗುತ್ತೆ ಸೊಂಟ

* ಮಾನಸಿಕ ಆರೊಗ್ಯ (Mental Health): 
ಮಾರ್ನಿಂಗ್ ವಾಕ್ ಮಾಡುವುದರಿಂದ ಇದು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಹಿತವಾದ ಅನುಭವವನ್ನು ನೀಡುತ್ತದೆ. ಬೆಳಗಿನ ನಡಿಗೆಯು ದೈಹಿಕ ಚಟುವಟಿಕೆ ಮತ್ತು ನೈಸರ್ಗಿಕ ಬೆಳಕಿನ ಸಂಯೋಜನೆಯೊಂದಿಗೆ ನಮ್ಮ ಮೆದುಳಿನಲ್ಲಿ ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದನ್ನು "ಒಳ್ಳೆಯ ಭಾವನೆ" ಹಾರ್ಮೋನುಗಳು ಎಂದೂ ಕರೆಯುತ್ತಾರೆ. ಇದು ನರಪ್ರೇಕ್ಷಕಗಳಲ್ಲಿ ಒತ್ತಡ, ಆತಂಕ (Anxiety) ಮತ್ತು ಖಿನ್ನತೆಯ ಭಾವನೆಯನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿರಿಸಲು ಕೊಡುಗೆ ನೀಡುತ್ತದೆ. 

* ನಿದ್ರೆಯನ್ನು ಸುಧಾರಿಸುತ್ತದೆ (Improves Sleep): 
ಪ್ರತಿದಿನ ಮಾರ್ನಿಂಗ್ ವಾಕ್ ಮಾಡುವುದರಿಂದ ಮುಂಜಾನೆ ಸಮಯದಲ್ಲಿ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಇದು ನಿಮ್ಮ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಾತ್ರಿ ವೇಳೆ ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿ ಆಗಿರುವುದರ ಜೊತೆಗೆ ಬೆಳಿಗ್ಗೆ ಉಲ್ಲಾಸದಿಂದ ಇರಲು ಸಹಕಾರಿ ಆಗಿದೆ. 

ಇದನ್ನೂ ಓದಿ- ಆಕಸ್ಮಿಕ ಗರ್ಭಪಾತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ..!

* ಒಟ್ಟಾರೆ ಆರೊಗ್ಯ: 
ಮಾರ್ನಿಂಗ್ ವಾಕ್ ಮಾಡುವುದರಿಂದ ಬಿಳಿ ರಕ್ತ ಕಣಗಳು, ಪ್ರತಿಕಾಯಗಳು ಮತ್ತು ಇತರ ಪ್ರತಿರಕ್ಷಣಾ ಘಟಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಬೆಳಗಿನ ನಡಿಗೆಯು 
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಸೋಂಕುಗಳು ಮತ್ತು ರೋಗಗಳ ವಿರುದ್ಧ ದೇಹಕ್ಕೆ ರಕ್ಷಣೆ ದೊರೆಯುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News