Astrology - ಅಕ್ಟೋಬರ್ ತಿಂಗಳಲ್ಲಿ (October 2021), ಅನೇಕ ದೊಡ್ಡ ಗ್ರಹಗಳ ರಾಶಿ ಪರಿವರ್ತನೆ (Planetary Transit 2021) ನಡೆಯಲಿದೆ. ಅಕ್ಟೋಬರ್ 2 ರಂದು, ಶುಕ್ರ ಮತ್ತು ಬುಧ ರಾಶಿ ಪರಿವರ್ತನೆ ನಡೆದಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆ ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ (Zodiac Signs)ಮೇಲೆ ನೀವು ಕಾಣಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ (Jyotishya Shastra) ಕೂಡ ಉಲ್ಲೇಖಿಸಲಾಗಿದೆ. ಯಾವ ರಾಶಿಯವರ ಪಾಲಿಗೆ ಅಕ್ಟೋಬರ್ ತಿಂಗಳು ಅತ್ಯಂತ ಶುಭಕರವಾಗಿರುತ್ತದೆ ತಿಳಿದುಕೊಳ್ಳೋಣ ಬನ್ನಿ. ಮುಂಬರುವ 27 ದಿನಗಳು ಕೆಳಗಿನ ನಾಲ್ಕು ರಾಶಿಗಳಿಗೆ (Horoscope) ವರದಾನ ಸಾಬೀತಾಗಲಿದೆ.
ಮೇಷ ರಾಶಿ - ತಿಂಗಳ ಆರಂಭ ಆತ್ಮವಿಶ್ವಾಸದಿಂದ ಕೂಡಿರಲಿದೆ. ಆದರೆ, ಅತಿ ಉತ್ಸಾಹ ಬೇಡ. ನಿಮ್ಮ ಸ್ವಭಾವದ ಮೇಲೆ ನಿಯಂತ್ರಣವಿರಲಿ. ಕುಟುಂಬ ಸದಸ್ಯರ ಜೊತೆಗೆ ಸುಮಧುರ ಸಂಬಂಧ ಕಾಯ್ದುಕೊಳ್ಳಿ. ನೌಕರಿಗಾಗಿ ಸಾಕ್ಷಾತ್ಕಾರ ಇತ್ಯಾದಿ ಕೆಲಸಗಳು ಸಫಲ ಸಾಬೀತಾಗಲಿವೆ. ಆಪ್ತ ಸ್ನೇಹಿತನ ಸಹಕಾರ ಸಿಗಲಿದೆ. 17 ಅಕ್ಟೋಬರ್ ನಂತರ ನೀವು ಬೇರೊಂದು ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ಉದ್ಯಮದ ಸ್ಥಿತಿಗತಿ ತೃಪ್ತಿದಾಯಕ ಇರಲಿದೆ.
ಕರ್ಕ ರಾಶಿ - ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಆದರೆ ತಾಳ್ಮೆಯಿಂದಿರಿ. ತಾಳ್ಮೆ ಹೊಂದಲು ಪ್ರಯತ್ನಿಸಿ. ವ್ಯಾಪಾರ ಪರಿಸ್ಥಿತಿಗಳು ಸುಧಾರಿಸುತ್ತವೆ. ಲಾಭದ ಅವಕಾಶಗಳಿರುತ್ತವೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳನ್ನು ಕೂಡ ಗಮನಿಸಲಾಗುತ್ತಿದೆ. ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬೇಕಾಗಬಹುದು. ಕುಟುಂಬ ಬೆಂಬಲ ಸಿಗಲಿದೆ. ಅಕ್ಟೋಬರ್ 23 ರ ನಂತರ ವಾಹನ ಸುಖದಲ್ಲಿ ವೃದ್ಧಿಯಾಗಲಿದೆ. ವಿದೇಶ ಪ್ರಯಾಣದ ಯೋಗ ಗಮನಿಸಲಾಗುತ್ತಿದೆ.
ಕನ್ಯಾ ರಾಶಿ - ಈ ತಿಂಗಳು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿರಲಿದೆ. ಯಾವುದಾದರೊಂದು ಅಜ್ಞಾತ ಭಯ ನಿಮ್ಮನ್ನು ಕಾಡಲಿದೆ. ತಿಂಗಳ ಆರಂಭದಲ್ಲಿ ತೀರ್ಥಕ್ಷೇತ್ರದ ಭೇಟಿ ಸಂಭವಿಸಲಿದೆ. ಯಾತ್ರೆ ಸುಖಕರವಾಗಿರಲಿದೆ. ಅಕ್ಟೋಬರ್ 5ರ ನಂತರ ಜೀವನ ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಳೆ ಸ್ನೇಹಿತನ ಆಗಮನ, ನೌಕರಿಯಲ್ಲಿ ಬಡ್ತಿಯ ಅವಕಾಶ, ಆಸ್ತಿಯಿಂದ ಧನಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Navratri 2021 : ನವರಾತ್ರಿಯ ಮೊದಲು ತಿಳಿದಿರಲಿ ಈ ನಿಯಮಗಳು : ಯಾರು ಉಪವಾಸ ಮಾಡಬಾರದು?
ಮಕರ ರಾಶಿ - ಅಕ್ಟೋಬರ್ 4ರವರೆಗೆ ಧೈರ್ಯದಲ್ಲಿ ಕೊರತೆ ಹಾಗೂ ಮಾತಿನಲ್ಲಿ ಕಠಿಣತೆ ಇರಲಿದೆ. ನಂತರ ನಿಮ್ಮಲ್ಲಿ ಆತ್ಮ ವಿಶ್ವಾಸ ತುಂಬಿರಲಿದೆ. ವಾಚನ-ಪಠಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ಪ್ರಯಾಣ ಸಂಭವ. 17 ಅಕ್ಟೋಬರ್ ವರೆಗೆ ನೌಕರಿಯಲ್ಲಿ ಬಡ್ತಿಯ ಅವಕಾಶ ಇರಲಿದೆ. ಅಧಿಕಾರಿಗಳು ಹಾಗೂ ಅಧಿಕಾರದ ಸಹಕಾರ ಸಿಗಲಿದೆ. 24 ಅಕ್ಟೋಬರ್ ಬಳಿಕ ವಾಹನ ಪ್ರಾಪ್ತಿ ಸಾಧ್ಯತೆ.
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)
ಇದನ್ನೂ ಓದಿ-ನೀವು 1 ತಿಂಗಳು ಬ್ರಷ್ ಮಾಡದಿದ್ದರೆ ಏನಾಗುತ್ತದೆ? ಹಲ್ಲುಗಳ ಸ್ಥಿತಿ ಹೀಗಿರುತ್ತದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.