Glowing skin tips: ದುಬಾರಿ ಕ್ರೀಂ ಲೋಶನ್ ಬೇಡವೇ ಬೇಡ ! ಮನೆ ಮುಂದೆ ಬೆಳೆಯುವ ಈ ಎಲೆಯೇ ಸಾಕು ಮುಖದ ಕಾಂತಿ ಹೆಚ್ಚಿಸಲು!

Glowing skin with aloe vera and green tea :  ಈ ಜೆಲ್ ಅನ್ನು ಬಳಸಿ 2 ಫೇಸ್ ಮಾಸ್ಕ್ ಗಳನ್ನೂ ತಯಾರಿಸಬಹುದು. ಈ ಫೇಸ್  ಮಾಸ್ಕ್ ಗಳನ್ನು ಬಳಸುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು. 

Written by - Ranjitha R K | Last Updated : Jan 30, 2024, 03:33 PM IST
  • ಅಲೋವೆರಾ ಚರ್ಮ,ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ಈ ಜೆಲ್ ಅನ್ನು ಬಳಸಿ 2 ಫೇಸ್ ಮಾಸ್ಕ್ ಗಳನ್ನೂ ತಯಾರಿಸಬಹುದು.
  • ಅಲೋವೆರಾ ಎಷ್ಟು ಪ್ರಯೋಜನಕಾರಿ?
Glowing skin tips: ದುಬಾರಿ ಕ್ರೀಂ ಲೋಶನ್ ಬೇಡವೇ ಬೇಡ ! ಮನೆ ಮುಂದೆ ಬೆಳೆಯುವ ಈ ಎಲೆಯೇ ಸಾಕು ಮುಖದ ಕಾಂತಿ ಹೆಚ್ಚಿಸಲು! title=

Benefits of aloe vera gel with tea tree oil : ಅಲೋವೆರಾ ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಎಲೆಯನ್ನು ಒಡೆದರೆ ಸಿಗುವ ಜೆಲ್ ಅನ್ನು  ಜ್ಯೂಸ್ ಮಾಡಿ ಕುಡಿಯಲು ಮತ್ತು ಚರ್ಮಕ್ಕೆ ಲೇಪಿಸಲು ಬಳಸಲಾಗುತ್ತದೆ. ಅಲೋವೆರಾ ಜೆಲ್ ಅನ್ನು ಸರಿಯಾದ ವಿಧಾನದಲ್ಲಿ ಮುಖಕ್ಕೆ ಹಚ್ಚಿದರೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಂ, ಲೋಶನ್ ಬಳಸುವ ಅಗತ್ಯವೇ ಇರುವುದಿಲ್ಲ. ಈ ಜೆಲ್ ಅನ್ನು ಬಳಸಿ 2 ಫೇಸ್ ಮಾಸ್ಕ್ ಗಳನ್ನೂ ತಯಾರಿಸಬಹುದು. ಈ ಫೇಸ್  ಮಾಸ್ಕ್ ಗಳನ್ನು ಬಳಸುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು. 

ಅಲೋವೆರಾ ಎಷ್ಟು ಪ್ರಯೋಜನಕಾರಿ?
ಅಲೋವೆರಾದಲ್ಲಿ ಹಲವಾರು ಗುಣಲಕ್ಷಣಗಳಿವೆ.ಅಲೋವೆರಾವನ್ನು ಹಲವು ವಿಧಗಳಲ್ಲಿ ಬಳಸಬಹುದು.ನಮ್ಮ ತ್ವಚೆಯನ್ನು ಪೋಷಿಸುವ ಜೊತೆಗೆ, ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ.  

ಇದನ್ನೂ ಓದಿ : ತೆಂಗಿನೆಣ್ಣೆಯಲ್ಲಿ ಈ ಎರಡು ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!

- ಇದು ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
- ಇದು ಆಳವಾದ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
- ಅಲೋವೆರಾ ಜ್ಯೂಸ್ ಮಧುಮೇಹ ಹೊಂದಿರುವ ಜನರಿಗೆ ಪ್ರಯೋಜನಕಾರಿ.  
- ಇದರಲ್ಲಿರುವ ಅಂಶಗಳು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು  ಗುಣಪಡಿಸಲು ಸಹಾಯ ಮಾಡುತ್ತದೆ. 

ಅಲೋವೆರಾದೊಂದಿಗೆ ಗ್ರೀನ್ ಟೀ :
ಅಲೋವೆರಾವನ್ನು  ಹಾಗೆಯೇ ನೇರವಾಗಿ ಮುಖಕ್ಕೆ ಹಚ್ಚಬಹುದು ಅಥವಾ ಗ್ರೀನ್ ಟೀ ಯೊಂದಿಗೆ ಮಿಶ್ರಣ ಮಾಡಿ ಫೇಸ್ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಹಚ್ಚಬಹುದು. ಈ ರೀತಿ ಗ್ರೀನ್ ಟೀ ಜೊತೆ ಆಲೋವಿರಾ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Weight Loss Tips: ಹಣ್ಣಿನ ಜ್ಯೂಸ್ ಸೇವನೆಯಿಂದ ತೂಕ ಇಳಿಕೆಯಾಗುತ್ತಾ? ಸರಿಯಾದ ವಿಧಾನ ಗೊತ್ತಿರಲಿ!

ಈ ರೀತಿ ಮಾಸ್ಕ್ ತಯಾರಿಸಿ :
- ಮೊದಲನೆಯದಾಗಿ, 1 ಟೀಚಮಚ ಅಲೋವೆರಾದಲ್ಲಿ ಅರ್ಧ ಟೀಚಮಚ ಗ್ರೀನ್ ಟೀ  ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ. 
- ಬೇಕಾದರೆ ಈ ಮಿಶ್ರಣವನ್ನು ರಾತ್ರಿಯಿಡೀ ಮುಖದ ಮೇಲೆ ಹಾಗೆಯೇ ಬಿಡಬಹುದು. 

ಅಲೋವೆರಾದಲ್ಲಿ  ಟೀ ಟ್ರೀ ಆಯಿಲ್ ಮಿಶ್ರಣ ಮಾಡಿ :
ಹೊಳೆಯುವ  ತ್ವಚೆ ನಿಮ್ಮದಗಬೇಕಾದರೆ 1 ಟೀಚಮಚ ಅಲೋವೆರಾ ಜೆಲ್ ಗೆ  2-3 ಹನಿಗಳ ಟೀ ಟ್ರೀ ಎಣ್ಣೆಯನ್ನು ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. 

(ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News