ಪಿಸ್ತಾ ತಿನ್ನುವ ಮುನ್ನ ಎಚ್ಚರ! ಒಳ್ಳೆಯದು ಎಂದು ಅತಿಯಾಗಿ ತಿಂದರೆ ಬಾಧಿಸುತ್ತೆ ಈ ಮಾರಕ ಕಾಯಿಲೆ

Side Effects Of Pista: ಪಿಸ್ತಾದ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ, ನಿಮಗೆ ಗೊತ್ತಾ, ಈ ರುಚಿಕರವಾದ ಒಣ ಹಣ್ಣು ಕೆಲವರಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

Written by - Bhavishya Shetty | Last Updated : May 11, 2024, 08:56 PM IST
    • ಪಿಸ್ತಾ ಅತ್ಯಂತ ರುಚಿಕರವಾದ ಒಣ ಹಣ್ಣುಗಳಲ್ಲಿ ಒಂದಾಗಿದೆ
    • ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು
    • ಪಿಸ್ತಾದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ
ಪಿಸ್ತಾ ತಿನ್ನುವ ಮುನ್ನ ಎಚ್ಚರ! ಒಳ್ಳೆಯದು ಎಂದು ಅತಿಯಾಗಿ ತಿಂದರೆ ಬಾಧಿಸುತ್ತೆ ಈ ಮಾರಕ ಕಾಯಿಲೆ title=
Side Effects Of Pista

Side Effects Of Pista: ಪಿಸ್ತಾ ಅತ್ಯಂತ ರುಚಿಕರವಾದ ಒಣ ಹಣ್ಣುಗಳಲ್ಲಿ ಒಂದಾಗಿದೆ. ಇದು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಐಸ್ ಕ್ರೀಮ್‌, ಮಿಠಾಯಿ, ಸಿಹಿತಿಂಡಿಗಳು ಹೀಗೆ ಅನೇಕ ಆಹಾರ ಪದಾರ್ಥಗಳಲ್ಲಿ ಪಿಸ್ತಾವನ್ನು ಬಳಸಲಾಗುತ್ತದೆ.

ಪಿಸ್ತಾದ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ, ನಿಮಗೆ ಗೊತ್ತಾ, ಈ ರುಚಿಕರವಾದ ಒಣ ಹಣ್ಣು ಕೆಲವರಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ:  21 ವರ್ಷ, 700 ವಿಕೆಟ್, ಅಗಾಧ ನೆನಪು… ಕ್ರಿಕೆಟ್ ಲೋಕದ GOAT ಜೇಮ್ಸ್ ಆಂಡರ್ಸನ್ ನಿವೃತ್ತಿ ಘೋಷಣೆ

ಪಿಸ್ತಾವು ಫೈಬರ್’ನಿಂದ ಸಮೃದ್ಧವಾಗಿದೆ. ಹೊಟ್ಟೆಗೆ ಪ್ರಯೋಜನಕಾರಿ ಜೊತೆಗೆ ಜಠರಗರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಫೈಬರ್ ಹೊಂದಿರುವುದರಿಂದ ಅತಿಸಾರ, ಹೊಟ್ಟೆ ನೋವು ಮತ್ತು ಹೊಟ್ಟೆ ಸೆಳೆತವನ್ನು ಉಂಟುಮಾಡಬಹುದು. ಆದ್ದರಿಂದ ಹೆಚ್ಚು ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಪಿಸ್ತಾ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಡ್ರೈ ಫ್ರೂಟ್’ಗಳಲ್ಲಿ ಒಂದು. ಆದರೆ ಇದನ್ನು ಹೆಚ್ಚಾಗಿ ಸೇವಿಸಿದರೆ ತೂಕವನ್ನು ಹೆಚ್ಚಳವಾಗುತ್ತದೆ.

ಪಿಸ್ತಾದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಹೆಚ್ಚಿನ ಪೊಟ್ಯಾಸಿಯಮ್ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅನ್ನು ಸೇವಿಸಬಾರದು. ಹಾಗೆಯೇ, ಪಿಸ್ತಾ ಅತಿಯಾಗಿ ತಿನ್ನುವುದು ಹೃದಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಹೆಚ್ಚಾಗಿ ಸೇವನೆ ಮಾಡುವ ಪಿಸ್ತಾಗಳಲ್ಲಿ ಹುರಿಯಲಾಗುತ್ತದೆ. ಹೀಗಾಗಿ ಇದರಲ್ಲಿ ಉಪ್ಪಿನಂಶವೂ ಹೆಚ್ಚಾಗಿರುತ್ತದೆ. ಹೆಚ್ಚುವರಿ ಸೋಡಿಯಂ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ,

ಇದನ್ನೂ ಓದಿ: ಮುಖದ ಮೇಲೆ ಹೀಗೊಂದು ಸಂಕೇತ ಕಂಡರೆ ನಿಮ್ಮ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ! ಕೂಡಲೇ ಎಚ್ಚರ ವಹಿಸಿ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News