30 ವರ್ಷಗಳ ನಂತರ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನೀಶ್ವರ

30 ವರ್ಷಗಳ ನಂತರ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶನಿಯು ಅಕ್ಟೋಬರ್ 23 ರವರೆಗೆ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ.  ಈ ಸಂದರ್ಭದಲ್ಲಿ ಮೂರು ರಾಶಿಯವರ ಮೇಲೆಗೆ ಶನಿ ಮಹಾತ್ಮ ವಿಶೇಷ ಕೃಪೆ ತೋರಲಿದ್ದಾನೆ. 

Written by - Ranjitha R K | Last Updated : Sep 20, 2022, 01:30 PM IST
  • ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೆ ವಿಶೇಷ ಸ್ಥಾನವಿದೆ
  • 30 ವರ್ಷಗಳ ಬಳಿಕ ಮಕರ ರಾಶಿ ಪ್ರವೇಶಿಸುತ್ತಿರುವ ಶನಿ
  • ಮೂರು ರಾಶಿಯವರ ಮೇಲಿರಲಿದೆ ಕೃಪಾ ದೃಷ್ಟಿ
30 ವರ್ಷಗಳ ನಂತರ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ   ಶನೀಶ್ವರ  title=
Shani Vakri 2022 effect (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ, ನವಗ್ರಹಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದರಲ್ಲೂ ಶನಿ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಈ ಗ್ರಹದಲ್ಲಾಗುವ ಸಣ್ಣ ಬದಲಾವಣೆ ಕೂಡಾ ಜನರ ಜಾತಕದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಯಾರ ಮೇಲೆ ಶನೀಶ್ವರ ಕೃಪೆ ಇರುತ್ತದೆಯೋ ಅವರಿಗೆ ಜೀವನದಲ್ಲಿ ಸೋಲೆಂಬುದೇ ಇರುವುದಿಲ್ಲ. ಯಾರ ಜಾತಕದಲ್ಲಿ ಶನಿ ದೆಸೆ ನಡೆಯುತ್ತಿರುತ್ತದೆಯೋ ಅವರು ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಪ್ರಸ್ತುತ ಶನಿದೇವ ತನ್ನದೇ ಆದ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 30 ವರ್ಷಗಳ ನಂತರ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶನಿಯು ಅಕ್ಟೋಬರ್ 23 ರವರೆಗೆ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ.  ಈ ಸಂದರ್ಭದಲ್ಲಿ ಮೂರು ರಾಶಿಯವರ ಮೇಲೆಗೆ ಶನಿ ಮಹಾತ್ಮ ವಿಶೇಷ ಕೃಪೆ ತೋರಲಿದ್ದಾನೆ. 

ಈ ರಾಶಿಯವರ ಮೆಲಿರಲಿದೆ ಶನಿಯ ಶುಭ ಪ್ರಭಾವ : 
ಮೇಷ ರಾಶಿ : ಮಕರ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯು, ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಮಾಡುವ ಎಲ್ಲಾ ಕೆಲಸದಲ್ಲಿಯೂ ಪ್ರಗತಿಯನ್ನು ಸಾಧಿಸಲಿರುವಿರಿ. ಆದಾಯ ಹೆಚ್ಚಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಬಡ್ತಿ, ವೇತನ ಹೆಚ್ಚಳದ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. 

ಇದನ್ನೂ ಓದಿ : Astrology: ನಿಂಬೆಹಣ್ಣು, ಮೆಣಸಿನಕಾಯಿ ಮನೆಯ ಹೊರಗೆ ಏಕೆ ಕಟ್ಟಬೇಕು ಗೊತ್ತಾ?

ಧನು ರಾಶಿ : ಅಕ್ಟೋಬರ್ ವರೆಗೆ ಶನಿದೇವ ಹಿಮ್ಮುಖ ಚಲನೆಯಲ್ಲಿದ್ದು, ಧನು ರಾಶಿಯವರಿಗೆ ಬಹಳಷ್ಟು ಲಾಭಗಲಾಗಳಿವೆ. ಹಣಕಾಸಿನ  ಪ್ರಯೋಜನಕಾರಿಯಾಗಲಿದೆ. ಆದಾಯ ಹೆಚ್ಚಲಿದೆ. ನಿರೀಕ್ಷೆಗೂ ಮೀರಿದ ಹಣವೂ ಲಭ್ಯವಾಗಲಿದೆ. ಪ್ರತಿ ಕ್ಷಣವೂ ಸಂತಸದಿನದ ಕೂಡಿರುತ್ತದೆ. ಹೂಡಿಕೆ, ಲಾಟರಿಯಿಂದ ಲಾಭ ಪಡೆಯಬಹುದು. ಕೈ ಸೇರದೇ ಉಳಿದಿರುವ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚಿದೆ. ರಾಜಕಾರಣಿಗಳು ದೊಡ್ಡ ಹುದ್ದೆಗಳನ್ನು ಪಡೆಯಬಹುದು. 

ಮೀನ ರಾಶಿ : ಹಿಮ್ಮುಖವಾಗಿ ಚಲಿಸುತ್ತಿರುವ  ಶನಿಯು ಮೀನ ರಾಶಿಯವರಿಗೆ ಬಹಳಷ್ಟು ಹಣವನ್ನು ನೀಡುತ್ತಾನೆ. ಅವರ ಆದಾಯದಲ್ಲಿ ಹೆಚ್ಚಳವಾಗುವ ಅವಕಾಶ ಹೆಚ್ಚಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.  ಎಂದೂ ಮರೆಯದಂಥಹ ಯಶಸ್ಸು ಈ ಸಮಯದಲ್ಲಿ ಸಿಗಲಿದೆ. 

ಇದನ್ನೂ ಓದಿ : October horoscope 2022 : ಅಕ್ಟೋಬರ್‌ನಲ್ಲಿ ಹೊಳೆಯಲಿದೆ ಈ ರಾಶಿಯವರ ಅದೃಷ್ಟ , ವೃತ್ತಿಜೀವನದಲ್ಲಿ ಸಿಗುವುದು ದೊಡ್ಡ ಯಶಸ್ಸು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News