ತೆಂಗಿನೆಣ್ಣೆಯಲ್ಲಿ ಈ ಎರಡು ವಸ್ತುಗಳನ್ನು ಸೇರಿಸಿ ಹಚ್ಚಿದರೆ ಕೆಲವೇ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಪರಿಹಾರ

Benefits of Coconut Oil For Hair:ತೆಂಗಿನ ಎಣ್ಣೆಯು ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಕೂದಲನ್ನು ಆರೋಗ್ಯಕರವಾಗಿ  ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ ಕೊಬ್ಬರಿ ಎಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ  ಕೂದಲು ಉದುರುವ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ.

Written by - Ranjitha R K | Last Updated : Aug 2, 2022, 02:45 PM IST
  • ಪ್ರತಿಯೊಬ್ಬ ವ್ಯಕ್ತಿಯು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾನೆ.
  • ಮಾಲಿನ್ಯ, ದೈನಂದಿನ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಇದಕ್ಕೆ ಕಾರಣ.
  • ಕೂದಲು ಉದುರುವುದನ್ನು ತಡೆಯಲು ತೆಂಗಿನ ಎಣ್ಣೆಯಲ್ಲಿ ಈ ವಸ್ತುಗಳನ್ನು ಮಿಶ್ರಣ ಮಾಡಿ
ತೆಂಗಿನೆಣ್ಣೆಯಲ್ಲಿ ಈ ಎರಡು ವಸ್ತುಗಳನ್ನು ಸೇರಿಸಿ ಹಚ್ಚಿದರೆ ಕೆಲವೇ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಪರಿಹಾರ   title=
Hair fall remedies (file photo)

Benefits of Coconut Oil For Hair : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾನೆ.  ಹೆಚ್ಚುತ್ತಿರುವ ಮಾಲಿನ್ಯ, ದೈನಂದಿನ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಇದಕ್ಕೆ ಒಂದು ಕಾರಣ. ಇದರಿಂದ ಜನರ ಕೂದಲು ಒಣಗಿ ನಿರ್ಜೀವವಾಗುತ್ತದೆ. ಆದರೆ ತೆಂಗಿನ ಎಣ್ಣೆಯು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಕೂದಲನ್ನು ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ ಕೊಬ್ಬರಿ ಎಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ  ಕೂದಲು ಉದುರುವ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ. 

ಕೂದಲು ಉದುರುವುದನ್ನು ತಡೆಯಲು ತೆಂಗಿನ ಎಣ್ಣೆಯಲ್ಲಿ ಈ ವಸ್ತುಗಳನ್ನು ಮಿಶ್ರಣ ಮಾಡಿ :
1. ದಾಸವಾಳದ ಹೂವುಗಳು :
ದಾಸವಾಳದ ಹೂವುಗಳು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು  ಕೂದಲಿಗೆ ಹೊಳಪು ನೀಡುವುದರ ಜೊತೆಗೆ, ಬುಡದಿಂದ ಕೂದಲನ್ನು ಬಲಗೊಳಿಸುತ್ತದೆ.  ಇದಕ್ಕಾಗಿ ಮೊದಲನೆಯದಾಗಿ, ಈ ಹೂವುಗಳಿಂದ ದಳಗಳನ್ನು ಬೇರ್ಪಡಿಸಿ, ನಂತರ ಅದನ್ನು ನೀರಿನಿಂದ ಚೆನ್ನಾಗಿ ತೊಳೆದು ಗಟ್ಟಿಯಾಗುವವರೆಗೆ ಬಿಸಿಲಿನಲ್ಲಿ ಒಣಗಿಸಿ. ನಂತರ ಅವುಗಳನ್ನು ಚೆನ್ನಾಗಿ ಪುಡಿ ಮಾಡಿ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ದಾಸವಾಳದ ಹೂವಿನ ಪುಡಿ ಹಾಕಿದ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಹೀಗೆ ಬಿಸಿ  ಮಾಡಿದ ಎಣ್ಣೆ ತಣ್ಣಗಾದ ಮೇಲೆ ಗಾಜಿನ ಬಾಟಲಿಗೆ ಹಾಕಿ. ಇದನ್ನು ವಾರಕ್ಕೆ 4 ಬಾರಿ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಅಲ್ಲದೆ, ಬಿಳಿ ಕೂದಲನ್ನು ನೈಸರ್ಗಿಕವಾಗಿ  ಕಪ್ಪಾಗಿಸಲು ಸಹ ಇದನ್ನು ಬಳಸಬಹುದು.

ಇದನ್ನೂ ಓದಿ : Skin Care Tips: ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ

2. ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ಈ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ಕಾರಣ ಕೂದಲು ಉದುರುವುದನ್ನು ತಡೆಯುತ್ತದೆ. ಇದರಿಂದ ಕೂದಲು ಬೇರಿನಿಂದ ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಪ್ರೊಟೀನ್ ಕೂಡ ಇರುವುದರಿಂದ ಕೂದಲಿನ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಇದನ್ನು ಎಣ್ಣೆಯಲ್ಲಿ ಬೆರೆಸಲು ಮೊದಲು ಕರಿಬೇವಿನ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ನಂತರ ತೆಂಗಿನ ಎಣ್ಣೆಯಲ್ಲಿ ಹಾಕಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ.  ತಣ್ಣಗಾದಾಗ ಮೇಲೆ ಅದನ್ನು ಒಂದು ಸೀಸೆಯಲ್ಲಿ ಹಾಕಿ ಇಟ್ಟುಕೊಳ್ಳಿ. ವಾರಕ್ಕೆ 3 ಬಾರಿ ಹೀಗೆ ಮಾಡುತ್ತಾ ಬಂದರೆ ಅಪೇಕ್ಷಿತ ಫಲಿತಾಂಶ ಸಿಗುತ್ತದೆ.

ಇದನ್ನೂ ಓದಿ : Men Health Tips: ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿಪಡೆಯಲು ಬಯಸುವ ಪುರುಷರು ಈ ಉಪಾಯಗಳನ್ನು ಅನುಸರಿಸಿ

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News