Maha Kumbh Stampede: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಮಾಸದ ಅಮಾವಾಸ್ಯೆ/ ಮೌನಿ ಅಮಾವಾಸ್ಯೆಯ ಇಂದು (ಜನವರಿ 29 ಬುಧವಾರ) ಸಂಗಮ್ನಲ್ಲಿ 'ಪುಣ್ಯ ಸ್ನಾನ'ದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದಾರೆ.
ಭಾರತದ ಮೂರು ಪವಿತ್ರ ನದಿಗಳು ಒಟ್ಟಿಗೆ ಸೇರುವ ಈ ಸಂಗಮದಲ್ಲಿ ಮೌನಿ ಅಮಾವಾಸ್ಯೆಯಂದು ಪುಣ್ಯ ಸ್ನಾನಕ್ಕಾಗಿ ಕೋಟ್ಯಾಂತರ ಭಕ್ತಾಧಿಗಳು ಕೂಡ ನೆರೆದಿದ್ದಾರೆ. ಈ ಸಂದರ್ಭದಲ್ಲಿ 'ಸಂಗಮ್'ನಿಂದ ಸುಮಾರು ಒಂದು ಕಿಲೋಮೀಟರ್ ವರೆಗೂ ಜನಸಂದಣಿ ಮಧ್ಯೆ ಬ್ಯಾರಿಕೇಡ್ಗಳು ಮುರಿದು ಕೆಲವು ಮಹಿಳೆಯರು ಪ್ರಜ್ಞಾಹೀನರಾಗಿ ಬಿದ್ದಿದ್ದು ಕಾಲ್ತುಳಿತ ಉಂಟಾಗಿದೆ.
#WATCH | #MahaKumbh2025 | Prayagraj, Uttar Pradesh: Drone visuals from the Ghats of Triveni as a huge number of devotees reach for the Amrit Snan on the occasion of Mauni Amavasya.
Source: Mela Administration pic.twitter.com/FoQrbprWGK
— ANI (@ANI) January 29, 2025
ಈ ದುರ್ಘಟನೆಯ ಬಳಿಕ ಮಹಾ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ ಎಂದು ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದಾರೆ.
#WATCH | #MahaKumbh2025 | Prayagraj, Uttar Pradesh: President of Akhil Bharatiya Akhara Parishad, Ravindra Puri says, "... Due to the excessive crowd, we had put our snan on hold. Now that the crowd has reduced and the ghats meant for our snan are being vacated, so it seems that… pic.twitter.com/btu4p7Dvfv
— ANI (@ANI) January 29, 2025
ಇದನ್ನೂ ಓದಿ- ಯಾರಾದರೂ ಕುಂಭಮೇಳಕ್ಕೆ ಹೋಗುವವರಿದ್ದೀರಾ? ಈ ಅಂಶಗಳನ್ನು ಗಮನದಲ್ಲಿಡಿ!
#WATCH | Devotees take holy dip in river Ganga and offer prayers at Har ki Pauri in Haridwar on Mauni Amavasya pic.twitter.com/R2Ddiue1AD
— ANI (@ANI) January 29, 2025
ಇನ್ನೂ ಈ ದುರ್ಘಟನೆಯಲ್ಲಿ ಕಾಲ್ತುಳಿತದಿಂದ ಗಾಯಗೊಂಡವರನ್ನು ಮಹಾ ಕುಂಭಮೇಳದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ಬೈಲಿ ಆಸ್ಪತ್ರೆ ಮತ್ತು ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಹಿಂದೂ ಧರ್ಮದಲ್ಲಿ ಮೌನಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡುವುದಕ್ಕೆ ಬಹಳ ಮಹತ್ವವಿದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ 2025 ನಡೆಯುತ್ತಿರುವುದರಿಂದ ಇಲ್ಲಿನ 'ಅಮೃತ್ ಸ್ನಾನ'ದಲ್ಲಿ ಮಿಂದೇಳಲು ಸುಮಾರು 10ಕೋಟಿ ಭಕ್ತರು ನೆರೆದಿದ್ದಾರೆ.
ಇದನ್ನೂ ಓದಿ- Maha Kumbh: ಪ್ರಯಾಗರಾಜ್ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!
ಕುಂಭಮೇಳಸ ಸಂಪ್ರದಾಯಗಳ ಪ್ರಕಾರ, ಸನ್ಯಾರಿ, ಬೈರಾಗಿ, ಉದಾಸೀನ್ ಎಂಬ ಮೂರು ಪಂಗಡಗಳಿಗೆ ಸೇರಿದ ಅಖಾರಾಗಲು ಸಂಗಮ ಘಾಟ್ಗೆ ಮೆರವಣಿಗೆಯಲ್ಲಿ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.