Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ

ವೀಳ್ಯದೆಲೆಯ ಕೆಲವು ಪರಿಣಾಮಕಾರಿ ಪರಿಹಾರಗಳು ಹಣದ ಸಮಸ್ಯೆಯನ್ನು ಸುಲಭವಾಗಿ ಕೊನೆಗೊಳಿಸುತ್ತವೆ. ಇದಲ್ಲದೆ, ಈ ಕ್ರಮಗಳು ವ್ಯಾಪಾರವನ್ನು ಹೆಚ್ಚಿಸುವಲ್ಲಿ ಮತ್ತು ಮನೆಯ ಋಣಾತ್ಮಕತೆಯನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ.   

Written by - Yashaswini V | Last Updated : Jan 4, 2022, 11:45 AM IST
  • ಆರ್ಥಿಕ ಸಮಸ್ಯೆಯಿಂದ ಹೊರಬರಲು ವೀಳ್ಯದೆಲೆಯ ಈ ಪರಿಹಾರಗಳನ್ನು ಪ್ರಯತ್ನಿಸಿ
  • ವೀಳ್ಯದೆಲೆಯ ಈ ಪರಿಹಾರದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
  • ಎಂದಿಗೂ ತಲೆದೂರಲ್ಲ ಹಣದ ಸಮಸ್ಯೆ
Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ  title=
Villedele Parihara

Financial Crisis:  ಹಿಂದೂ ಧರ್ಮದಲ್ಲಿ ಪಾನ್‌ಗೆ ಅಂದರೆ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಅನೇಕ ದೇವ-ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ವೀಳ್ಯದೆಲೆಯನ್ನು ಪ್ರತಿ ಮಂಗಳಕರ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ದೇವ-ದೇವತೆಯರು ವೀಳ್ಯದೆಲೆಗಳನ್ನು ಬಳಸಿ  ವಿಷ್ಣುವನ್ನು ಪೂಜಿಸುತಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದಿನಿಂದ, ಪೂಜೆಯಲ್ಲಿ ದೇವರನ್ನು ಆವಾಹಿಸಲು ವೀಳ್ಯದೆಲೆಗಳನ್ನು ಬಳಸಲಾಗುತ್ತದೆ. ಧರ್ಮದ ಹೊರತಾಗಿ, ವೀಳ್ಯದೆಲೆಯ ಅನೇಕ ಉಪಯೋಗಗಳನ್ನು ಜ್ಯೋತಿಷ್ಯ ಮತ್ತು ತಂತ್ರದಲ್ಲಿ ಹೇಳಲಾಗಿದೆ. ವೀಳ್ಯದೆಲೆಯ ಈ ತಂತ್ರಗಳು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. 

ವೀಳ್ಯದೆಲೆ ಪರಿಹಾರಗಳು: 
ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸಲು ಪರಿಹಾರ: 

ಪೂಜೆಯಲ್ಲಿ ವೀಳ್ಯದೆಲೆಯನ್ನು (Betel Leaves Remedies) ಬಳಸುವುದರಿಂದ ದೇವತೆಗಳು ಸಂತೋಷಪಡುತ್ತಾರೆ. ಇದರಿಂದ ಮನೆಯ ಋಣಾತ್ಮಕತೆ ದೂರವಾಗಿ ಮನೆಯಲ್ಲಿ ಧನಾತ್ಮಕತೆ ತುಂಬುತ್ತದೆ. 

ಇದನ್ನೂ ಓದಿ- Money Plant Tips : ಮನೆಯಲ್ಲಿ ಮರೆತು ಕೂಡ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಬೇಡಿ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ

ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಪರಿಹಾರ: 
ದೋಷನಿವಾರಕ ಹನುಮಂತನು ಪ್ರಸನ್ನನಾಗಿದ್ದರೆ, ಹಣಕಾಸಿನ ಅಡಚಣೆಗಳು (Financial Crisis) ಸೇರಿದಂತೆ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಇದಕ್ಕಾಗಿ ಮಂಗಳವಾರ ಅಥವಾ ಶನಿವಾರ ಬೆಳಗ್ಗೆ ಹನುಮಾನ್ ದೇವಸ್ಥಾನಕ್ಕೆ ತೆರಳಿ ವೀಳ್ಯದೆಲೆ ಅರ್ಪಿಸುವುದು ಉತ್ತಮ ಪರಿಹಾರವಾಗಿ. ಇದರಿಂದ ಎಲ್ಲಾ ತೊಂದರೆಗಳಿಂದ ಹೊರಬರಬಹುದು ಎಂಬ ನಂಬಿಕೆ ಇದೆ.

ಇದನ್ನೂ ಓದಿ-  Vastu Tips: ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಧೂಪ ಬೆಳಗಿಸುವಾಗ ಈ ವಾಸ್ತು ಸಲಹೆ ಅನುಸರಿಸಿ

ವ್ಯಾಪಾರದಲ್ಲಿ ಲಾಭ ಪಡೆಯಲು ಪರಿಹಾರ: 
ಶನಿವಾರ ಬೆಳಗ್ಗೆ 5 ವೀಳ್ಯದೆಲೆ ಮತ್ತು 8 ವೀಳ್ಯದೆಲೆಗಳನ್ನು ತೆಗೆದುಕೊಂಡು ಅವುಗಳ ಕಡ್ಡಿಗಳನ್ನು ಒಂದೇ ದಾರದಲ್ಲಿ ಕಟ್ಟಿ ಅಂಗಡಿಯಲ್ಲಿ ಪೂರ್ವ ದಿಕ್ಕಿಗೆ ಕಟ್ಟಬೇಕು. ಮುಂದಿನ ಶನಿವಾರದಂದು ಹೊಸ ಎಲೆಗಳನ್ನು ನೆಡುವಾಗ, ಹಳೆಯ ಎಲೆಗಳನ್ನು ತೆಗೆದು ನದಿ ಅಥವಾ ಬಾವಿಗೆ ಹಾಕಿ. ಕನಿಷ್ಠ 5 ಶನಿವಾರದಂದು ಹೀಗೆ ಮಾಡಿದರೆ ವ್ಯಾಪಾರ ವೃದ್ಧಿಯಾಗುತ್ತದೆ ಎನ್ನಲಾಗುವುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News