ವರದ ಚತುರ್ಥಿ 2022: ಇಲ್ಲಿವೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಗಣೇಶ ಮಂತ್ರಗಳು

ಪುಷ್ಯ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವರದ ಚತುರ್ಥಿ ಎಂದು ಆಚರಿಸಲಾಗುತ್ತದೆ. 2022ರಲ್ಲಿ ವರದ ಚತುರ್ಥಿಯನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ದುಃಖ ಮತ್ತು ಸಂಕಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Jan 5, 2022, 03:08 PM IST
  • ಪುಷ್ಯ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವರದ ಚತುರ್ಥಿ ಎಂದು ಆಚರಿಸಲಾಗುತ್ತದೆ
  • ಈ ದಿನ ಗಣಪತಿಯನ್ನು ಪೂಜಿಸುವುದರಿಂದ ದುಃಖ & ಸಂಕಟಗಳು ದೂರವಾಗುತ್ತವೆಂಬ ನಂಬಿಕೆ ಇದೆ
  • ಪೂಜಾ ಸಮಯದಲ್ಲಿ ಗಣಪತಿ ಮಂತ್ರ ಪಠಿಸುವುದರಿಂದ ಉದ್ಯೋಗ & ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ
ವರದ ಚತುರ್ಥಿ 2022: ಇಲ್ಲಿವೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಗಣೇಶ ಮಂತ್ರಗಳು title=
ಜ.6ರಂದು ವರದ ಚತುರ್ಥಿಯನ್ನು ಆಚರಿಸಲಾಗುತ್ತದೆ

ನವದೆಹಲಿ: ಪ್ರತಿ ತಿಂಗಳ ಚತುರ್ಥಿಯನ್ನು ಗಣೇಶನಿಗೆ ಸಮರ್ಪಿಸಲಾಗುತ್ತದೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟಿ ಎಂದು ಆಚರಿಸಲಾಗುತ್ತದೆ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಇದಲ್ಲದೆ ಪುಷ್ಯ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವರದ ಚತುರ್ಥಿ(Varada Sankashti Chaturthi) ಎಂದು ಆಚರಿಸಲಾಗುತ್ತದೆ. 2022ರಲ್ಲಿ ವರದ ಚತುರ್ಥಿಯನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಈ ದಿನ ಗಣಪತಿ(Lord Ganesha)ಯನ್ನು ಪೂಜಿಸುವುದರಿಂದ ದುಃಖ ಮತ್ತು ಸಂಕಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ವರದ ಚತುರ್ಥಿ ಶುಭ ಮುಹೂರ್ತ

ಪಂಚಾಂಗದ ಪ್ರಕಾರ ಈ ಬಾರಿಯ ವರದ ಚತುರ್ಥಿ(Sankashti Chaturthi)ಯ ಉಪವಾಸವನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸಲು ಮಧ್ಯಾಹ್ನ 11:15 ರಿಂದ 12.29 ರವರೆಗೆ ಶುಭ ಮುಹೂರ್ತ. ಇದಲ್ಲದೆ ಚೋಘಡಿಯ ಮುಹೂರ್ತದಲ್ಲಿಯೂ ಗಣಪತಿಯನ್ನು ಪೂಜಿಸಬಹುದು.

ಇದನ್ನೂ ಓದಿ: Coconut: ಪೂಜೆಗೆ ಬಳಸುವ ತೆಂಗಿನಕಾಯಿಯನ್ನು ಮಹಿಳೆಯರು ಏಕೆ ಒಡೆಯಬಾರದು? ಇಲ್ಲಿದೆ ಕಾರಣ

ವರದ ಚತುರ್ಥಿ ಪೂಜಾ ವಿಧಾನ

ವರದ ಚತುರ್ಥಿಯ ದಿನದಂದು ಗಣಪತಿ(Lord Ganesha)ಯನ್ನು ಪೂಜಿಸಲು ಬೆಳಿಗ್ಗೆ ಎದ್ದು ಶುದ್ಧ ನೀರಿನಲ್ಲಿ ಕೆಲವು ಹನಿ ಗಂಗಾಜಲವನ್ನು ಬೆರೆಸಿದ ನಂತರ ಸ್ನಾನ ಮಾಡಿ. ಸ್ನಾನದ ನಂತರ ಉಪವಾಸ ಮತ್ತು ಪೂಜೆಯ ಪ್ರತಿಜ್ಞೆ ಮಾಡಿ. ನಂತರ ಗಣಪತಿಯನ್ನು ಕ್ರಮಬದ್ಧವಾಗಿ ಪೂಜಿಸಿ. ಪೂಜೆಯ ಸಮಯದಲ್ಲಿ ಗಣೇಶನಿಗೆ ಹೂವು, ಹಣ್ಣು, ಲಡ್ಡು ಇತ್ಯಾದಿಗಳನ್ನು ಅರ್ಪಿಸಿ. ಹಣ್ಣುಗಳನ್ನು ತಿನ್ನುವ ಮೂಲಕವೂ ಉಪವಾಸ ಮಾಡಬಹುದು. ಸಂಜೆ ಆರತಿಯ ನಂತರ ಉಪವಾಸವನ್ನು ಆಚರಿಸಿ.

ವರದ ಚತುರ್ಥಿಯ ಪೂಜಾ ಮಂತ್ರ

1) ವಕ್ರತುಂಡ ಮಹಾಕಾಯ

ಸೂರ್ಯಕೋಟಿ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ

ಸರ್ವ ಕಾರ್ಯೇಷು ಸರ್ವದಾ ||

===========================================

2) ಗಜಾನನಂ ಭೂತಗಣಾದಿ ಸೇವಿತಂ|

ಕಪಿತ್ಥ ಜಂಬೂ ಫಲಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶ ಕಾರಣಂ

ನಮಾಮಿ ವಿಘ್ನೇಶ್ವರ ಪಾದಪಂಕಜಝ||

================================================

3) ‘ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ

ವರ ವರದ ಸರ್ವಜನ ಮೇ ವಶಮಾನಯ ಸ್ವಾಹಾ’

==================================================

4) ಓಂ ವಕ್ರತುಂಡೈಕ ದಂಷ್ಟ್ರಾಯ ಕ್ಲೀಂ ಹ್ರೀಂ ಶ್ರೀಂ ಗಂ ಗಣಪತೇ

ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ||

ಇದನ್ನೂ ಓದಿ: Shani Dev: ಶನಿಯ ನಿಧಾನಗತಿಯ ಚಲನೆಗೂ, ರಾವಣನಿಗೂ ಇದೆಯೇ ನಂಟು!

ಪೂಜೆಯ ಸಮಯದಲ್ಲಿ ಮೇಲೆ ತಿಳಿಸಿದ ಮಂತ್ರಗಳನ್ನು ಪಠಿಸುವುದರಿಂದ(Lord Ganesha Mantra) ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. ಹಾಗೆಯೇ ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News