ಗ್ರಾಮಸ್ಥರು ಮತ್ತು ಅರ್ಚಕರ ನಡುವೆ ಬಗೆಹರಿಯದ ಭೂಮಿ ವಿವಾದ. ಆಂಜನೇಯ ದೇವಸ್ಥಾನ ಸರ್ಕಾರಕ್ಕೆ ಸೇರಿದ್ದು ಎಂದು ಗ್ರಾಮಸ್ಥರ ವಾದ. ಮುಜರಾಯಿ ಇಲಾಖೆಗೆ ದೇವಸ್ಥಾನ ಬಿಟ್ಟು ಕೊಡಲು ಅರ್ಚಕರ ಹಿಂದೇಟು.
ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆ. ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ರಿಂದ ದೂರು ದಾಖಲು. ಪ್ರಶ್ನೆಪತ್ರಿಕೆ ಲೀಕ್ ಎಂದು ತಪ್ಪಾಗಿ ಭಾವಿಸಿ ಗೊಂದಲ ಸೃಷ್ಠಿ ಆರೋಪ.
Nikhil Kumaraswamy: ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಬೆಟ್ಟಿಂಗ್ನಿಂದ ಎಷ್ಟೋ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ.
Basavanagudi Kadalekai Parishe: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಈ ವರ್ಷ ರೈತರು ಮತ್ತು ವ್ಯಾಪಾರಿಗಳಿಗೆ ಶುಲ್ಕ ರಹಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಈ ಪರಿಷೆಯಲ್ಲಿ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲವೆಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ, ಅಸ್ಥಿರ ಪರಿಸ್ಥಿತಿ ಮರುಕಳಿಸಿದ ಕಾರಣ ಭಾನುವಾರ ಬೆಳಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ತಮ್ಮ ಮಹಾರಾಷ್ಟ್ರ ಪ್ರಚಾರವನ್ನು ರದ್ದುಗೊಳಿಸಿದರು ಹಾಗೂ ಮುಂಬೈನಿಂದ ದಿಲ್ಲಿಗೆ ಮರಳಿದರು. ಬಳಿಕ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸತತ ಸಭೆ ನಡೆಸಿದರು ಎಂದು ಮೂಲಗಳು ಹೇಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.