WFH ಅವಧಿಯಲ್ಲಿ ಮ್ಯಾಟರ್ನಿಟಿ ಲೀವ್ ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು

Big Descision - ಶಿಶುಪಾಲನಾ ರಜೆಯಿಂದ (Maternity Leave) ಉದ್ಯೋಗಿಗೆ ಪರಿಹಾರ ನೀಡಲು ನಿರಾಕರಿಸಿರುವ ರಾಜ್ಯ ಕರ್ನಾಟಕ ಹೈಕೋರ್ಟ್ (Karnataka High Court), ವರ್ಕ್ ಫ್ರಮ್ ಹೋಮ್ (Work From Home) ಗೆ ಸಂಬಂಧಿಸಿದಂತೆ ಮಹತ್ವದ ಟಿಪ್ಪಣಿ ಮಾಡಿದೆ.  

Written by - Nitin Tabib | Last Updated : Mar 28, 2022, 09:38 PM IST
  • ರಾಜ್ಯ ಹೈಕೋರ್ಟ್ ನ ಮಹತ್ವದ ತೀರ್ಪು
  • ವರ್ಕ್ ಫ್ರಮ್ ಹೋಂ ಅವಧಿಯಲ್ಲಿ ಮ್ಯಾಟರ್ನಿಟಿ ಲೀವ್ ಗೆ ಸಂಬಂಧಿಸಿದಂತೆ ಹೇಳಿದ್ದೇನು?
  • ಕೆಲಸದ ನೇಚರ್ ಆಧರಿಸಿ WFH ಅವಧಿಯಲ್ಲಿ ಸಿಗಲಿದೆ ರಜೆ
WFH ಅವಧಿಯಲ್ಲಿ ಮ್ಯಾಟರ್ನಿಟಿ ಲೀವ್ ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು title=
Karnataka High Court

ನವದೆಹಲಿ: Big Descision - DRDO ಅಡಿಯಲ್ಲಿನ ಸೆಮಿಕಂಡಕ್ಟರ್ ಟೆಕ್ನಾಲಜಿ ಮತ್ತು ಅಪ್ಲೈಡ್ ರಿಸರ್ಚ್ ಸೆಂಟರ್‌ನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗೆ ಶಿಶುಪಾಲನಾ ರಜೆಯಿಂದ ಪರಿಹಾರವನ್ನು ನೀಡಲು ನಿರಾಕರಿಸುವ ಸಂದರ್ಭದಲ್ಲಿ ಕರ್ನಾಟಕ ಹೈ ಕೋರ್ಟ್ (High Court) ಮಹತ್ವದ ಟಿಪ್ಪಣಿಯೊಂದನ್ನು ಮಾಡಿದೆ.

ಇದನ್ನೂ ಓದಿ-HD Kumaraswamy : ತಾಯಿಗೆ IT ನೊಟೀಸ್ ನೀಡಿರುವ ಬಗ್ಗೆ ಆತಂಕ ಇಲ್ಲ : ಎಚ್‌ಡಿ ಕುಮಾರಸ್ವಾಮಿ

ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಏನು?
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ನ್ಯಾಯಪೀಠ, ಹೆರಿಗೆ ರಜೆ ಮುಗಿದ ನಂತರ, ಮಹಿಳಾ ಉದ್ಯೋಗಿಯ ಕೆಲಸದ ಸ್ವರೂಪ (Nature Of Work) ಅನುಮತಿಸಿದರೆ ಮಾತ್ರ ಮಹಿಳಾ ಉದ್ಯೋಗಿಗೆ ಮನೆಯಿಂದಲೇ ಕೆಲಸದ ಸೌಲಭ್ಯವನ್ನು ನೀಡಬಹುದು ಎಂದು ಹೇಳಿದೆ. 

ಇದನ್ನೂ ಓದಿ-‘ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ’

ಆಗಸ್ಟ್ 2020ರಲ್ಲಿ ಅರ್ಜಿದಾರ ಮಹಿಳೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು.ಫೆಬ್ರುವರಿ 2021ರವರೆಗೆ ಅವರು ಮ್ಯಾಟರ್ನಿಟಿ ರಜೆಯ ಲಾಭ ಪಡೆದುಕೊಂಡಿದ್ದರು. ಇದಾದ ಬಳಿಕ ಏಪ್ರಿಲ್ ವರೆಗೆ ಅವರು ತಮ್ಮ ವೈಯಕ್ತಿಕ ರಜೆಯನ್ನು ಬಳಸಿಕೊಂಡಿದ್ದರು. ಕೋವಿ-19 ಅವಧಿಯಲ್ಲಿ ಇತರ ನೌಕರರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿತ್ತು ಎಂಬ ತರ್ಕವನ್ನು ಮಹಿಳೆ ನ್ಯಾಯಾಲಯದಲ್ಲಿ ಮಂಡಿಸಿದ್ದರು.

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News