ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಎನ್ಡಿಆರ್ಎಫ್ ತಂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೆ 2 ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಇದೀಗ ಈ ವಿಡಿಯೋವನ್ನು ಸ್ವತಃ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದ್ದು, ರಕ್ಷಣಾ ಸಿಬ್ಬಂದಿ ಧೈರ್ಯ, ತನ್ನ ಜೀವ ಹೋದರೂ ಸರಿ ಮಗುವಿನ ಪ್ರಾಣ ಉಳಿಯಲಿ ಎಂಬ ಮನೋಭಾವನ್ನು ನಿಜಕ್ಕೂ ಮೆಚ್ಚಲೇಬೇಕು. ರಭಸವಾಗಿ ಹರಿಯುತ್ತಿರುವ ನೀರಿನ ಮಧ್ಯೆ ಒಂದು ದಡದಿಂದ ಮತ್ತೊಂದು ದಡಕ್ಕೆ ಮಗುವನ್ನು ಕೈಯಲ್ಲಿ ಹಿಡಿದು, ಹಗ್ಗದ ಸಹಾಯದಿಂದ ಮತ್ತೊಂದು ದಡ ತಲುಪಿದ ಆ ದೃಶ್ಯ ನಿಜಕ್ಕೂ ಭಯ ಹುಟ್ಟಿಸುತ್ತದೆ.
ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಎರಡು ತಿಂಗಳ ಮಗುವನ್ನು ರಕ್ಷಿಸಿದ ಮಹತ್ವದ ಕ್ಷಣ.. #KodaguFloods #KarnatakaRains #Karnataka pic.twitter.com/TFMy4Yyrha
— CM of Karnataka (@CMofKarnataka) August 19, 2018
ಮತ್ತೊಂದೆಡೆ, ಮಡಿಕೇರಿ ಸಮೀಪದ ಜೋಡುಪಾಲದ ಗುಡ್ಡವೊಂದರಲ್ಲಿ ಮರದಡಿ ಆಶ್ರಯ ಪಡೆದಿದ್ದ ಮೂವರು ಕಾರ್ಮಿಕರನ್ನು ರಕ್ಷಣಾ ತಂಡ ಭಾನುವಾರ ಬೆಳಿಗ್ಗೆ ರಕ್ಷಿಸಿದೆ. ಇವರು ಜೋದುಪಲ್ದ ರಬ್ಬರ್ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಅಪಾಯದಲ್ಲಿದ್ದ ಕಾರ್ಮಿಕರನ್ನು ಹಗ್ಗದ ನೆರವಿನಿಂದ ತಲುಪಿ, ಗುಡ್ಡ ಏರಿ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಇದುವರೆಗೂ ಇಂದು 100ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ.