/kannada/photo-gallery/after-90-years-special-yoga-on-rakshabandhan-day-lucky-zodiac-sign-232334 90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ 90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ 232334

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕೇಸ್‌ನಲ್ಲಿ ಮಾಜಿ ಸಚಿವನನ್ನ ಇಡಿ ಬಂಧಿಸಿದೆ. ಈ ನಡುವೆ ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿರೋ ನಾಗೇಂದ್ರರಿಗೆ ಅಧಿಕಾರಿಗಳು ನಿರಂತರವಾಗಿ ಡ್ರಿಲ್ ನಡೆಸಿದ್ದಾರೆ. ತನಗೆ ಸಂಬಂಧವಿಲ್ಲ ಅಂತಿರೋ ನಾಗೇಂದ್ರ ವಿರುದ್ದ ಇಡಿ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಿದೆ. ಮತ್ತೊಂದು ಇಡಿ ಬಂಧನದ ಭೀತಿಯಿಂದ ಶಾಸಕ ಬಸನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ.‌ಹಾಗಾದ್ತೆ ಇವತ್ತು ಏನೆಲ್ಲಾ ಬೆಳವಣಿಗೆಗಳು ನಡೆದಿವೆ ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಣ ಅವ್ಯವಹಾರದ ತನಿಖೆ ಸಾಕಷ್ಟು ಮುನ್ನೆಲೆಗೆ ಬಂದಿದೆ. ಒಂದ್ಕಡೆ ಎಸ್‌ಐಟಿ ಮತ್ತೊಂದ್ಕಡೆ ಇಡಿ ತನಿಖೆಯಲ್ಲಿ ಬೆನ್ನು ಬಿದ್ದಿದೆ. ಹೀಗೆ ಎಸ್ ಐಟಿ ನಾಗೇಂದ್ರನ್ನ ವಿಚಾರಣೆ ಮಾಡಿ ನೋಟೀಸ್ ಕೊಟ್ಟಿತ್ತು. ಆದ್ರೆ ಧಿಡೀರ್ ಅಂತ ರೇಡ್ ಮಾಡಿ ಎರಡು ದಿನ ಸುದೀರ್ಘ ಪರಿಶೀಲನೆ ನಡೆಸಿ ಇಡಿ ನಾಗೇಂದ್ರನ್ನ ಕಸ್ಟಡಿಗೆ ಪಡೆದಿತ್ತು. 

ಇದನ್ನೂ ಓದಿ:ಮುಡಾದಿಂದ ಹೆಚ್‌ಡಿ ದೇವೇಗೌಡರ ಕುಟುಂಬ 48 ನಿವೇಶನ ಪಡೆದ ಗುರುತರ ಆರೋಪ

ನೆನ್ನೆ ರಾತ್ರಿ ಅಧಿಕೃತವಾಗಿ ನಾಗೇಂದ್ರ ಬಂಧನ ಮಾಡಿ, ರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ. ಆ ಬಳಿಕ ಬೆಳಗ್ಗೆ 7 ಗಂಟೆ ವೇಳೆಗೆ ಯಲಹಂಕದಲ್ಲಿರೋ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಧೀಶರಾದ ಸಂತೋಷ್ ಗಜಾನನ ಹೆಗ್ಡೆಯವರ ಮನೆಯಲ್ಲಿ ನಾಗೇಂದ್ರನನ್ನ ಇಡಿ ಹಾಜರುಪಡಿಸಿದೆ. ಆ ಬಳಿಕ ಇಡಿ ಪರವಾಗಿ ಪಿಪಿ ಪ್ರಸನ್ನ ಕುಮಾರ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಲಾಗಿತ್ತು.
 
ಇದೇ ವೇಳೆ ನ್ಯಾಯಧೀಶರ ಮುಂದೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದು ಬೋರ್ಡ್ ಮಿಟೀಂಗ್ ಮೂಲಕ ಹಣ ವರ್ಗಾವಣೆ ಆಗಿದೆ. ನಾನು ಇಲಾಖೆ ಸಚಿವಾನಾಗಿದ್ದೆ ಅಷ್ಟೇ. ಅಕ್ರಮ ಹಣ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ಮೆಡಿಕಲ್ ಅವಶ್ಯಕತೆ ಇದೆ ಎಂದು ನ್ಯಾಯಧೀಶರ ಬಳಿ ನಾಗೇಂದ್ರ ಮನವಿ ಮಾಡಿದ್ದಾರೆ. ಮನವಿ ಹಿನ್ನೆಲೆ 24 ಗಂಟೆಗೊಮ್ಮೆ ಆರೋಗ್ಯ ತಪಾಸಣೆ ಕರೆದೊಯ್ಯುವಂತೆ ಇ.ಡಿ‌. ಗೆ ನ್ಯಾಯಧೀಶರು ಸೂಚನೆ ನೀಡಿದ್ರು.

ಇದನ್ನೂ ಓದಿ:ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣ: ಬೊಮ್ಮಾಯಿ, ಶ್ರೀರಾಮುಲು ಮೇಲೂ ತನಿಖೆ ನಡೆಸಲು ಒತ್ತಾಯ

ಇದೇ ವೇಳೆ ಪಿಪಿ ವಾದಿಸಿದ್ದು, ನಾಗೇಂದ್ರರನ್ನ ಹೆಚ್ಚಿನ ವಿಚಾರಣೆ ಮಾಡಬೇಕು. ಬಹುಕೋಟಿ ಹಗರಣ ಆಗಿದೆ. ಹಣ ವರ್ಗಾವಣೆ ಮಾಹಿತಿ ಕಲೆ ಹಾಕಬೇಕಿದೆ. ಫಲಾನುಭವಿಗಳನ್ನ ಪತ್ತೆ ಹಚ್ಚಬೇಕಿದೆ. ಅವ್ಯವಹಾರ ಯಾವ ರೀತಿ ಆಗಿದೆ ಅನ್ನೋ ವಿಚಾರಣೆ ನಡೆಸಬೇಕಿದೆ. ಇಲಾಖೆಗೆ ಸಚಿವರಾಗಿದ್ದರಿಂದ ಹೆಚ್ಚಿನ ವಿಚಾರಣೆ ಅಗತ್ಯ ಇದೆ. ಹೀಗಾಗಿ 14ದಿನ ಕಸ್ಟಡಿಗೆ ಪಿಪಿ ಕೇಳಿದ್ದು, ನ್ಯಾಯಧೀಶರು ಜುಲೈ 18 ರ ತನಕ ಇ.ಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇನ್ನು ಹಗರಣದಲ್ಲಿ ಬಂಧನಕ್ಕೊಳಗಾಗಿರೋ ಆರೋಪಿಗಳ ಹೇಳಿಕೆ ಹಾಗೂ ದಾಳಿ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ನಾಗೇಂದ್ರ ವಿಚಾರಣೆ ನಡೆಸಲಾಗ್ತಿದೆ..ಹಾಗೇ ಸತ್ಯನಾರಾಯಣ ವರ್ಮ, ನೆಕ್ಕುಂಟಿ‌ ನಾಗರಾಜ್ ವಿಚಾರಣೆ ಯಲ್ಲಿ ಮಾಜಿ ಸಚಿವರ ಪಾತ್ರದ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.. ಸದ್ಯ ಇಡಿ ಅಧಿಕಾರಿಗಳ ವಿಚಾರಣೆ ಯಲ್ಲಿ ನನ್ನದೇನು ಪಾತ್ರವಿಲ್ಲ ಅಂತಷ್ಟೇ ಹೇಳುತ್ತಿದ್ದು,ನಾಗೇಂದ್ರರ ಹೇಳಿಕೆ, ವಿಚಾರಣೆಯ ಸಂಪೂರ್ಣ ದೃಶ್ಯ ಗಳನ್ನು ವಿಡಿಯೋ ರೆಕಾರ್ಡ್ ಮಾಡ್ಕೊಳ್ಳಲಾಗ್ತಿದೆ..

ಇದನ್ನೂ ಓದಿ:"ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರದ ಹಗರಣ ಬಯಲು ಮಾಡುವುದು ಅನಿವಾರ್ಯ"

ಇಡಿ ಅಧಿಕಾರಿಗಳಿಂದ ನಾಗೇಂದ್ರ ಕಸ್ಟಡಿಗೆ ಕೊಡಲು ರಿಮ್ಯಾಂಡ್ ನಲ್ಲಿ ಕೆಲ ವಿಚಾರಗಳನ್ನ ಉಲ್ಲೇಖಿಸಿರೋ ಮಾಹಿತಿ ಇದೆ.ನಾಗೇಂದ್ರ ಸೂಚನೆ ಪ್ರಕಾರ ಅಧಿಕಾರಿಗಳು ಹಣ ವರ್ಗಾವಣೆ ಮಾಡಿದ್ದರು ಎಂಬುದುರ ಬಗ್ಗೆ ಉಲ್ಲಖಿಸಲಾಗಿದ್ಯಂತೆ. ನಿಗಮದಿಂದ ಹಣ ವರ್ಗಾವಣೆ ಆಗ್ತಿರುವ ವಿಚಾರ ನಾಗೇಂದ್ರ ಗೆ ಗೊತ್ತಿತ್ತು..ಹಣದ ವರ್ಗಾವಣೆ ಆಗಿರುವ ರೀತಿ, ಅದು ಹೇಗೆ ಅವ್ಯವಹಾರಕ್ಕೆ ಕಾರಣವಾಗಿದೆ ಅನ್ನೋದ್ರ ಬಗ್ಗೆ ನಾಗೇಂದ್ರ ಅವರನ್ನು ವಿಚಾರಣೆ ನಡೆಸಬೇಕಿದೆ..

ತನಿಖೆಯ ಭಾಗವಾಗಿ ಕೆಲವು ಕಡೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಬೇಕಿದೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ..ಸದ್ಯ ಲಭ್ಯವಿರುವ ದಾಖಲೆ ಮತ್ತು ಸಾಕ್ಷ್ಯ ಮುಂದಿಟ್ಟುಕೊಂಡು ನಾಗೇಂದ್ರ ಪ್ರಶ್ನೆ ಮಾಡುವ ಅಗತ್ಯವಿದೆ ಎಂದು ರಿಮ್ಯಾಂಡ್ ನಲ್ಲಿ ಉಲ್ಲೇಖಿಸಲಾಗಿದ್ಯಂತೆ. ಈ ಮಧ್ಯೆ ನಾಗೇಂದ್ರ ಗೆ ಹೃದಯ ಸಂಬಂಧಿ ಸಮಸ್ಯೆ ಇರೋದ್ರಿಂದ 24 ಗಂಟೆಗೊಮ್ಮೆ ವೈದ್ಯಕೀಯ ತಪಾಸಣೆ ನಡೆಸಲು ನ್ಯಾಯಧೀಶರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರರಿಗೆ ಮನೆ ಭಾಗ್ಯ

ಯಸ್ ನಿನ್ನೆ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆಯುತ್ತಿದ್ದಂತೆ ದದ್ದಲ್ ಎಸ್ ಐಟಿ ವಿಚಾರಣೆಗೆ ಓಡೋಡಿ ಬಂದಿದ್ರು. ಸಂಜೆ ಸುಮಾರು 7 ಗಂಟೆವರೆಗೂ ಎಸ್ ಐಟಿ ವಿಚಾರಣೆಯಲ್ಲಿ ಭಾಗಿಯಾಗಿದ್ರು. ಎಸ್ ಐಟಿ ವಿಚಾರಣೆ ವೇಳೆಯೇ ಇಡಿ  ಅರೆಸ್ಟ್ ಮಾಡಬಹುದು ಎಂದು‌ ದದ್ದಲ್ ಆತಂಕಕ್ಕೊಳಗಾಗಿದ್ರು. ಇನ್ನೊಂದು ಕಡೆ ದದ್ದಲ್ ಹೊರ ಬರ್ತಿದ್ದಂತೆ ಇಡಿ ದದ್ದಲ್ ನ ವಶಕ್ಕೆ ಪಡೆಯೋ ಸಾಧ್ಯತೆಯಿತ್ತು. ಇದ್ರ ಜೊತೆಗೆ ಮಾಧ್ಯಮ ಕಣ್ತಪ್ಪಿಸಿ ಎಸ್ಕೇಪ್ ಆಗಲು ದದ್ದಲ್ ತಮ್ಮ ಇನ್ನೋವಾ ಕಾರನ್ನು ಮೊದಲೇ ಕಳುಹಿಸಿ ನಂತರ ಸಣ್ಣ ಕಾರ್ ನಲ್ಲಿ ಸಿಐಡಿ ಕಚೇರಿಯಿಂದ ಹೊರ ಬಂದು ಎಸ್ಕೇಪ್ ಆಗಿದ್ದಾರೆ. ಸದ್ಯ ದದ್ದಲ್ ಎಲ್ಲಿದ್ದಾರೆ ಎಂದು ಗೊತ್ತಾಗ್ತಿಲ್ಲ. ಸೋಮವಾರ ದದ್ದಲ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟೀಸ್ ‌ನೀಡಿದೆ.‌ಸೋಮವಾರ ದದ್ದಲ್ ಎಸ್ಐಟಿ ವಿಚಾರಣೆಗೆ ಬರ್ತಾರ ಇಲ್ಲ ಅಷ್ಟರಲ್ಲಿ ಇಡಿ ದದ್ದಲ್ ನ ವಶಕ್ಕೆ ಪಡೆಯುತ್ತಾರ ಎಂದು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Valmiki corporation scam former minister b nagendra reaction after ed arrest
News Source: 
Home Title: 

ಇಡಿ ಕಸ್ಟಡಿಯಲ್ಲಿ ನಾಗೇಂದ್ರ : ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದ ಮಾಜಿ ಮಂತ್ರಿ 

ಇಡಿ ಕಸ್ಟಡಿಯಲ್ಲಿ ನಾಗೇಂದ್ರ : ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದ ಮಾಜಿ ಮಂತ್ರಿ 
Caption: 
b nagendra
Yes
Is Blog?: 
No
Tags: 
Facebook Instant Article: 
Yes
Highlights: 
  • ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕೇಸ್‌
  • ನಾಗೇಂದ್ರರಿಗೆ ಇಡಿ ಅಧಿಕಾರಿಗಳು ನಿರಂತರವಾಗಿ ಡ್ರಿಲ್ ನಡೆಸಿದ್ದಾರೆ.
  • ಮಾದ್ಯಮ, ಇಡಿ ಕಣ್ತಪ್ಪಿಸಲು ಎಸ್‌ಐಟಿಯಿಂದ ಬೇರೆ ಕಾರಿನಲ್ಲಿ ಎಸ್ಕೇಪ್ ಆದ ದದ್ದಲ್
Mobile Title: 
ಇಡಿ ಕಸ್ಟಡಿಯಲ್ಲಿ ನಾಗೇಂದ್ರ : ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದ ಮಾಜಿ ಮಂತ್ರಿ 
Krishna N K
Publish Later: 
No
Publish At: 
Saturday, July 13, 2024 - 19:59
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
529