66ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ: ರಾಷ್ಟ್ರ ನಾಯಕರಿಂದ ಶುಭ ಹಾರೈಕೆ

H.D. Kumaraswamy: 66ನೇ ವರ್ಷಕ್ಕೆ ಸೋಮವಾರ ಕಾಲಿಟ್ಟ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಪ ರಾಷ್ಟ್ರಪತಿ ಶ್ರೀ ಜಗದೀಪ ಧನಕರ್ ಅವರು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರದ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.

Written by - Savita M B | Last Updated : Dec 16, 2024, 04:25 PM IST
  • ಉಪ ರಾಷ್ಟ್ರಪತಿ ಶ್ರೀ ಜಗದೀಪ ಧನಕರ್ ಅವರು ಬೆಳಗ್ಗೆ ಸಚಿವರಿಗೆ ದೂರವಾಣಿ ಕರೆ ಮಾಡಿ ಶುಭ ಕೋರಿದರು
  • ಸೋಮವಾರ ಬೆಳಗ್ಗೆಯೂ ಪ್ರಧಾನಿಗಳು ಸಚಿವರಿಗೆ ಶುಭ ಕೋರಿದ್ದಾರೆ.
66ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ: ರಾಷ್ಟ್ರ ನಾಯಕರಿಂದ ಶುಭ ಹಾರೈಕೆ title=

Union Minister H.D. Kumaraswamy: ಉಪ ರಾಷ್ಟ್ರಪತಿ ಶ್ರೀ ಜಗದೀಪ ಧನಕರ್ ಅವರು ಬೆಳಗ್ಗೆ ಸಚಿವರಿಗೆ ದೂರವಾಣಿ ಕರೆ ಮಾಡಿ ಶುಭ ಕೋರಿದರು. ಈ ವೇಳೆ ಸಚಿವರು ಉಪ ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರಿಗೆ ಭಾನುವಾರವೇ ಸಚಿವರಿಗೆ ಜನ್ಮದಿನ ಶುಭಾಶಯ ಪತ್ರ ಕಳಿಸಿ ಶುಭ ಕೋರಿದ್ದರು. ಸೋಮವಾರ  ಬೆಳಗ್ಗೆಯೂ ಪ್ರಧಾನಿಗಳು ಸಚಿವರಿಗೆ ಶುಭ ಕೋರಿದ್ದಾರೆ.

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ, ಗಜೇಂದ್ರ ಸಿಂಗ್ ಶೇಖಾವತ್, ಜೋಲ್ ಒರಂ, ಡಾ.ವೀರೇಂದ್ರ ಕುಮಾರ್, ಶರ್ಭಾನಂದ ಸೋನಾವಾಲ್, ರಾಮ್ ಮೋಹನ್ ನಾಯ್ಡು, ಮನೋಹರ್ ಲಾಲ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಡಾ.ಎಸ್.ಜೈಶಂಕರ್, ಕೇಂದ್ರದ ರಾಜ್ಯ ಸಚಿವರಾದ ವಿ.ಸೋಮಣ್ಣ, ಶ್ರೀನಿವಾಸ ಭೂಪತಿರಾಜು ವರ್ಮ, ಕಿಶನ್ ರೆಡ್ಡಿ ಅವರು ಕೇಂದ್ರ ಸಚಿವರಿಗೆ ಶುಭ ಕೋರಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಸರ್ಮ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹೆಚ್ಡಿಕೆ ಅವರಿಗೆ ಹಾರೈಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಡಾ.ಕೆ.ಸುಧಾಕರ್, ಸಂಸದ ಬಿ.ವೈ.ರಾಘವೇಂದ್ರ, ತೇಜಸ್ವಿ ಸೂರ್ಯ, ರಾಜ್ಯದ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಸಚಿವರಿಗೆ ಜನ್ಮದಿನ ಶುಭಾಶಯ ಕೋರಿದ್ದಾರೆ.

ತಂದೆ ಆಶೀರ್ವಾದ ಪಡೆದ ಸಚಿವರು:
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಎಕ್ಸ್ ಖಾತೆಯ ಮೂಲಕ ಬೆಳಗ್ಗೆಯೇ ಸಚಿವರನ್ನು ಆಶೀರ್ವದಿಸಿದ್ದರು. "ನನ್ನ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶಯಗಳು. ಭಗವಂತ ನಿಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ" ಎಂದು ತಿಳಿಸಿದ್ದಾರೆ.

ಶಿವನ ದೇಗುಲದಲ್ಲಿ ಪೂಜೆ, ವಿಶೇಷಚೇತನ ಮಕ್ಕಳ ಶಾಲೆಗೆ ಭೇಟಿ:
ಸೋಮವಾರ ಬೆಳಗ್ಗೆಯೇ ಸಚಿವ ಕುಮಾರಸ್ವಾಮಿ ಅವರು ನವದೆಹಲಿಯಲ್ಲಿರುವ  ಹೌಜ್ ಕಾಸ್ ನಲ್ಲಿರುವ ಶ್ರೀ ಶಿವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಭಿಷೇಕ ಮತ್ತು  ಪೂಜೆಯಲ್ಲಿ ಪಾಲ್ಗೊಂಡ ಸಚಿವರು, ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಆರ್.ಕೆ.ಪುರಂ ಸೆಕ್ಟರ್ 5ರಲ್ಲಿರುವ ರಾಷ್ಟ್ತ್ರೀಯ ವಿಶೇಷ ಚೇತನ ಮಕ್ಕಳ ಶಾಲೆಗೆ (National association for blind) ತೆರಳಿ ಮಕ್ಕಳ ಜತೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಚಿವರು ಮಕ್ಕಳಿಗೆ ಸ್ವೆಟರ್ ಗಳನ್ನು, ಸಿಹಿಯನ್ನು ಹಂಚಿ ಕೆಲ ಸಮಯ ಅಲ್ಲಿಯೇ ಕಳೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News