ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ?! ಆಟವಾಡುವಾಗ ವಿಕ್ಸ್ ಮುಚ್ಚಳ ನುಂಗಿ 14 ತಿಂಗಳ ಹೆಣ್ಣು ಮಗು ಸಾವು!!

Toddler tragically died in Rajasthan: ಮಗು ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮಗು ಸಾವನ್ನಪ್ಪಿದೆ ಅಂತಾ ಆರೋಪಿಸಿದರು.

Written by - Puttaraj K Alur | Last Updated : Dec 17, 2024, 10:47 PM IST
  • ರಾಜಸ್ಥಾನದಲ್ಲಿ ಆಟವಾಡುತ್ತಿದ್ದಾಗ ವಿಕ್ಸ್ ಮುಚ್ಚಳ ನುಂಗಿ ಮಗು ಸಾವನ್ನಪ್ಪಿದೆ
  • ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಸಕಾಲದಲ್ಲಿ ಮಗುವಿಗೆ ಸಿಗದ ಚಿಕಿತ್ಸೆ
  • ಉಸಿರುಗಟ್ಟಿ ಸಾವನ್ನಪ್ಪಿದ 14 ತಿಂಗಳ ಹೆಣ್ಣು ಮಗು, ವೈದ್ಯರ ವಿರುದ್ಧ ಆಕ್ರೋಶ
ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ?! ಆಟವಾಡುವಾಗ ವಿಕ್ಸ್ ಮುಚ್ಚಳ ನುಂಗಿ 14 ತಿಂಗಳ ಹೆಣ್ಣು ಮಗು ಸಾವು!!  title=
ವಿಕ್ಸ್ ಮುಚ್ಚಳ ನುಂಗಿ ಮಗು ಸಾವು!

14-Month-Old Toddler Dies: ಆಟವಾಡುತ್ತಿದ್ದಾಗ ವಿಕ್ಸ್ ಮುಚ್ಚಳವನ್ನು ನುಂಗಿ ಮಗುವೊಂದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 14 ತಿಂಗಳ ಹೆಣ್ಣು ಮಗು ಆಟವಾಡುತ್ತಿರುವುದನ್ನು ಪೋಷಕರು ಗಮನಿಸಿರಲಿಲ್ಲ. 

ವಿಕ್ಸ್ ಮುಚ್ಚಳವನ್ನು ನುಂಗಿದ ಕೂಡಲೇ ಪೋಷಕರು ಮಗುವನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲವಂತೆ. ವೈದ್ಯರು ಇರದ ಕಾರಣ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕುಟುಂಬಸ್ಥರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಈ ವೇಳೆ ಮಾರ್ಗಮಧ್ಯೆಯೇ ಮಗು ಪ್ರಾಣಬಿಟ್ಟಿದೆ. 

ಇದನ್ನೂ ಓದಿ: ಮಕ್ಕಳಾಗುತ್ತದೆ ಎನ್ನುವ ಮಾಂತ್ರಿಕ ಮಾತು ನಂಬಿ ಜೀವಂತ ಕೋಳಿ ಮರಿ ನುಂಗಿ ಪ್ರಾಣ ಬಿಟ್ಟ ವ್ಯಕ್ತಿ !ದೇಹದಿಂದ ಜೀವಂತವಾಗಿಯೇ ಹೊರ ಬಂತು ಕೋಳಿ ಮರಿ

ಮಗು ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮಗು ಸಾವನ್ನಪ್ಪಿದೆ ಅಂತಾ ಆರೋಪಿಸಿದರು. ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯ ಗೇಟ್‌ಗೆ ಬೀಗ ಜಡಿದು ವೈದ್ಯಕೀಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. 

ಆಸ್ಪತ್ರೆಯಲ್ಲಿ ವೈದ್ಯರು ಇದ್ದಿದ್ದರೆ ಸಕಾಲದಲ್ಲಿ ಚಿಕಿತ್ಸೆ ದೊರೆತು ಮಗುವಿನ ಪ್ರಾಣ ಉಳಿಯುತ್ತಿತ್ತು. ಆದರೆ ಪ್ರಾಣ ಉಳಿಸಬೇಕಾದ ವೈದ್ಯರೇ ಆಸ್ಪತ್ರೆಯಲ್ಲಿ ಇರದ ಕಾರಣ ಪುಟ್ಟ ಮಗುವಿನ ಪ್ರಾಣ ಹೋಗಿದೆ. ಮಗುವಿನ ಸಾವಿನಿಂದ ಇಡೀ ಕುಟುಂಬವೇ ತೀವ್ರ ದುಃಖದಲ್ಲಿದೆ. ಕರ್ತವ್ಯಲೋಪ ಎಸಗಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಶಬರಿಮಲೆ ಸನ್ನಿಧಾನದ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ಮಾಲಾಧಾರಿ! ಕಾರಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News