Ugadi: ಯುಗಾದಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಘಾಟಿ ದೇವಾಲಯಲಕ್ಕೆ ಹೂವಿನ ಅಲಂಕಾರ

ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಶಿವಗಂಗೆ, ಬೈಲಾಂಜನೇಯ, ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.

Written by - Zee Kannada News Desk | Last Updated : Apr 2, 2022, 08:37 AM IST
  • ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷವಾಗಿ ಪೂಜೆ
  • ಇಂದು ಬೆಳಗ್ಗೆ ದೇವಾಯಲಕ್ಕೆ ದೀಪದ ಅಲಂಕಾರ, ಹೂವಿನ ಅಲಂಕಾರ
  • ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ "ಧಾರ್ಮಿಕ ದಿನಾಚರಣೆ" ಎಂಬ ಬಗ್ಗೆ, ಬ್ಯಾನರ್, ನಾಮಫಲಕ ಅಳವಡಿಸಲಾಗಿದೆ
Ugadi: ಯುಗಾದಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಘಾಟಿ ದೇವಾಲಯಲಕ್ಕೆ ಹೂವಿನ ಅಲಂಕಾರ title=
Ugadi in Ghati Subrahmanya Temple

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ ವಿಶೇಷ ಮತ್ತು ವಿಜೃಂಭಣೆಯಿಂದ ಯುಗಾದಿ ಹಬ್ಬವನ್ನು ಆಚರಿಸಲು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ವಿಡಿಯೋ ಸಂವಾದದ ಸಭೆಯಲ್ಲಿ ಸೂಚಿಸಿದ ಹಿನ್ನೆಲೆಯಲ್ಲಿ,  ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಶಿವಗಂಗೆ, ಬೈಲಾಂಜನೇಯ, ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯಗಳಲ್ಲಿ (Ghati Subrahmanya Temple) ವಿಶೇಷವಾಗಿ ಪೂಜೆ, ಪ್ರಾರ್ಥನೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುತ್ತಿದೆ. ಇಂದು ಬೆಳಗ್ಗೆ ದೇವಾಯಲಕ್ಕೆ ದೀಪದ ಅಲಂಕಾರ, ಹೂವಿನ ಅಲಂಕಾರ ಮಾಡಲಾಗಿದೆ. 

ಇದನ್ನೂ ಓದಿ- Shani Gochar: ಈ 4 ರಾಶಿಯವರ ಜೀವನದಲ್ಲಿ ಪ್ರತಿಯೊಂದು ದುಃಖವೂ ಕೊನೆಗೊಳ್ಳಲಿದೆ

ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ "ಧಾರ್ಮಿಕ ದಿನಾಚರಣೆ" (Religious Day) ಎಂಬ ಬಗ್ಗೆ, ಬ್ಯಾನರ್, ನಾಮಫಲಕ ಅಳವಡಿಸಲಾಗಿದ್ದು, ದೇವಾಲಯದ ಮುಂಭಾಗದಲ್ಲಿ ಕಮಾನಿನ ರೀತಿಯಲ್ಲಿ ದೇವಾಲಯದ ಹೆಸರಿನೊಂದಿಗೆ ರಾಜ್ಯ ಧಾರ್ಮಿಕ ದಿನಾಚರಣೆ" ಎಂದು ವಿಶೇಷವಾಗಿ ನಮೂದಿಸಲಾಗಿದೆ. 
 
ದೇವಾಲಯಗಳ ಮುಂಭಾಗವನ್ನು ತೆಂಗಿನ ಗರಿಗಳಿಂದ ಚಪ್ಪರ, ತಳಿರು ತೋರಣ, ಹೂವಿನ ಅಲಂಕಾರ, ಬಣ್ಣಬಣ್ಣದ ರಂಗೋಲಿ ಮುಂತಾದವುಗಳಿಂದ ಅಲಂಕರಿಸಲಾಗಿದ್ದು, ಯುಗಾದಿ ಹಬ್ಬದ (Ugadi Festival) ದಿನ ಇಂದು ಬೆಳಿಗ್ಗೆ ದೇವರಿಗೆ ವಿಶೇಷವಾಗಿ ಸಂಕಲ್ಪಿಸಿ, ಪ್ರಾರ್ಥಿಸಿ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ.

ಇದನ್ನೂ ಓದಿ- Astrology: ಈ ರಾಶಿಯ ಜನರು ಯಾವುದೇ ಸಂಬಂಧವನ್ನು ತಮ್ಮ ಹೃದಯದಿಂದ ನಿಭಾಯಿಸುತ್ತಾರೆ

ಇನ್ನು ಪ್ರಸಿದ್ಧ ಜ್ಯೋತಿಷಿಯವರಿಂದ ಪಂಚಾಂಗ ಶ್ರವಣ ಮಾಡಿಸಿ, ಪೂಜೆಯ ನಂತರ ಸಿಹಿ ಪ್ರಸಾದವನ್ನು ಜನರಿಗೆ ಹಂಚಲಾಗುವುದು ಹಾಗೂ ದೇವಾಲಯಗಳಲ್ಲಿ ಬೆಳಿಗ್ಗೆ/ಸಂಜೆ ಹರಿಕಥೆ, ಭಜನೆ, ಪ್ರಾರ್ಥನೆ, ಸುಗಮ ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News