Congress vs BJP: ಬಿಜೆಪಿ-ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ..!

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ ನಡೆದಿದ್ದು, ಎರಡೂ ಪಕ್ಷಗಳು ಗೂಂಡಾಗಿರಿ ಸಂಬಂಧ ಪರಸ್ಪರ ಟ್ವೀಟ್‍ವಾರ್ ನಡೆಸಿವೆ.

Written by - Zee Kannada News Desk | Last Updated : Apr 20, 2022, 07:21 PM IST
  • ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ‘ಗೂಂಡಾಗಿರಿ’ ಟ್ವಿಟರ್ ವಾರ್!
  • ಹಲ್ಲೆ, ಕೊಲೆ, ಅತ್ಯಾಚಾರಗಳೇ ಬಿಜೆಪಿಗರು ಕಲಿತ ಪಾಠ ಎಂದ ಕಾಂಗ್ರೆಸ್
  • ಕೈ ನಾಯಕರು ಕೈ ಎತ್ತುವಲ್ಲಿ ಪ್ರವೀಣರು ಎಂದು ಬಿಜೆಪಿ ತಿರುಗೇಟು
Congress vs BJP: ಬಿಜೆಪಿ-ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ..! title=
‘ಗೂಂಡಾಗಿರಿ’ ಟ್ವಿಟರ್ ವಾರ್!

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ ನಡೆದಿದೆ. ಎರಡೂ ಪಕ್ಷಗಳು ಗೂಂಡಾಗಿರಿ ಸಂಬಂಧ ಪರಸ್ಪರ ಟ್ವೀಟ್‍ವಾರ್ ನಡೆಸಿವೆ. ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದರೆ, ಗೂಂಡಾಗಿರಿಗೆ ಮತ್ತೊಂದು ಹೆಸರೇ ಬಿಜೆಪಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಹಲ್ಲೆ, ಕೊಲೆ, ಅತ್ಯಾಚಾರಗಳೇ ಬಿಜೆಪಿಗರು ಕಲಿತ ಪಾಠ

ಕಾಂಗ್ರೆಸ್ ಟ್ವೀಟ್ ಮಾಡಿದ್ದು, ‘ಗೂಂಡಾಗಿರಿಗೆ ಮತ್ತೊಂದು ಹೆಸರೇ ಬಿಜೆಪಿ. ಕೆಲದಿನಗಳ ಹಿಂದೆ ತಮಗೆ ಸಂಬಂಧವೇ ಇಲ್ಲದ ಶಿಕ್ಷಣ ಸಂಸ್ಥೆಗೆ ತನ್ನ ಗೂಂಡಾಪಡೆಯೊಂದಿಗೆ ನುಗ್ಗಿದ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕಾಲೇಜು ಸಿಬ್ಬಂದಿ ಜಗದೀಶ್‌ಗೌಡ ಎಂಬುವವರಿಗೆ ತೀವ್ರ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಹಲ್ಲೆ, ಕೊಲೆ, ಅತ್ಯಾಚಾರಗಳೇ ಬಿಜೆಪಿಗರು ಕಲಿತ ಪಾಠ’ ಎಂದು ಕುಟುಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ: 5 ವರ್ಷದ ಮಗನನ್ನು ಕೊಂದು ನೇಣಿಗೆ ಶರಣಾದ ತಾಯಿ

‘ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪನವರ ಗೂಂಡಾಗಿರಿಯ ಇತಿಹಾಸ ದೊಡ್ಡದಿದೆ. ಬಿಜೆಪಿಯ ಗೂಂಡಾ ಸಂಸ್ಕೃತಿಯ ನಿಷ್ಠಾವಂತ ಪಾಲಕರಿವರು! ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸುವುದು, ಸುಳ್ಳು ಕೇಸ್ ಹಾಕಿಸುವುದು ಇವರ ನಿತ್ಯದ ಕಾಯಕ. ಜನಸಾಮಾನ್ಯರ ಮೇಲೆ ಹಲ್ಲೆಗೆ ಮುಂದಾಗುವ ಬಿಜೆಪಿ  ನಾಯಕರಿಗೆ ಅಭಿವೃದ್ಧಿಪರ ರಾಜಕಾರಣ ತಿಳಿದೇ ಇಲ್ಲ’ವೆಂದು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.

#ಕಾಂಗ್ರೆಸ್‌ಗೂಂಡಾಗಿರಿ-ಬಿಜೆಪಿ ತಿರುಗೇಟು

‘ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂದು ಕರೆಂಟ್‌ ಕೇಳಿದ ನಾಗರಿಕನಿಗೆ ಜೈಲು ಭಾಗ್ಯ, ಇಂದು ನೀರು ಕೇಳಿದವನಿಗೆ ಕಪಾಳ ಮೋಕ್ಷದ ಭಾಗ್ಯ. ಕೊತ್ವಾಲನ ಶಿಷ್ಯನೇ ಕೆಪಿಸಿಸಿಯ ಅಧ್ಯಕ್ಷನಾಗಿರುವಾಗ ಸೌಜನ್ಯತೆ ಎಂಬ ಪದಕ್ಕೆ ಅರ್ಥ ಇರಲು ಹೇಗೆ ಸಾಧ್ಯ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ದುರ್ಮರಣ

‘ಕೈ ನಾಯಕರು ಕೈ ಎತ್ತುವಲ್ಲಿ ಪ್ರವೀಣರು. ಚುನಾವಣೆ ಸಮಯದಲ್ಲಿ ಮತದಾರರು ಬೇಕು, ಪಕ್ಷದ ಕಾರ್ಯಕರ್ತರು ಬೇಕು, ಆಮೇಲೆ ಇಬ್ಬರಿಗೂ ಸಿಗೋದು ಬರಿ ಕಪಾಳ ಮೋಕ್ಷ. ಕೈ ಹಿಡಿದು ನಡೆಸುವುದು ನಾಯಕರ ಲಕ್ಷಣ, ಕೈ ಎತ್ತುವುದು ಖಳನಾಯಕರ ಲಕ್ಷಣವೇ ಸರಿ’ ಅಂತಾ ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News