KSRTC Employees Strike : ನಾವು ಮುಷ್ಕರ ವಾಪಾಸ್ ಪಡೆದಿಲ್ಲ, ಸರ್ಕಾರದ ನಡೆ ತೃಪ್ತಿತಂದಿಲ್ಲ : ಅನಂತ ಸುಬ್ಬರಾವ್

1-1-2020 ರಿಂದ ಅರಿಯರ್ಸ್ ನಮ್ಮ ಬೇಡಿಕೆ ಇದೆ. ಆದ್ರೆ 1 ಮಾರ್ಚ್ 2023 ರಿಂದ ವೇತನ ಪರಿಷ್ಕರಣೆ ಮಾಡಿದ್ದಾರೆ. 38 ತಿಂಗಳ ಅರಿಯರ್ಸ್ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ. 

Written by - Channabasava A Kashinakunti | Last Updated : Mar 18, 2023, 05:22 PM IST
  • ರಾಜ್ಯ ಸರ್ಕಾರ ಏಕಪಕ್ಷೀಯ ತೀರ್ಮಾನ ನಮಗೆ ಇಷ್ಟ ಆಗಿಲ್ಲ
  • ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಆಕ್ರೋಶ
  • ಶ್ರೀನಿವಾಸ ಮೂರ್ತಿ ಕಮಿಟಿಗೆ ಈ ಅರಿಯರ್ಸ್ ವಿಚಾರ ವಹಿಸಿರೋದು ಸರಿಯಿಲ್ಲ
KSRTC Employees Strike : ನಾವು ಮುಷ್ಕರ ವಾಪಾಸ್ ಪಡೆದಿಲ್ಲ, ಸರ್ಕಾರದ ನಡೆ ತೃಪ್ತಿತಂದಿಲ್ಲ : ಅನಂತ ಸುಬ್ಬರಾವ್ title=

ಬೆಂಗಳೂರು : ರಾಜ್ಯ ಸರ್ಕಾರ ಏಕಪಕ್ಷೀಯ ತೀರ್ಮಾನ ನಮಗೆ ಇಷ್ಟ ಆಗಿಲ್ಲ. 60 ವರ್ಷದಲ್ಲಿ ಇರದ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಂತ ಸುಬ್ಬರಾವ್, 1-1-2020 ರಿಂದ ಅರಿಯರ್ಸ್ ನಮ್ಮ ಬೇಡಿಕೆ ಇದೆ. ಆದ್ರೆ 1 ಮಾರ್ಚ್ 2023 ರಿಂದ ವೇತನ ಪರಿಷ್ಕರಣೆ ಮಾಡಿದ್ದಾರೆ. 38 ತಿಂಗಳ ಅರಿಯರ್ಸ್ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ!

ಶ್ರೀನಿವಾಸ ಮೂರ್ತಿ ಕಮಿಟಿಗೆ ಈ ಅರಿಯರ್ಸ್ ವಿಚಾರ ವಹಿಸಿರೋದು ಸರಿಯಿಲ್ಲ. ಥರ್ಡ್ ಪಾರ್ಟಿ ಎಂಟ್ರಿ ಇದನ್ನ ಒಪ್ಪಲು ಸಾಧ್ಯವಿಲ್ಲ. ಇದು ಸರ್ಕಾರದ ಅಧಿಕ ಪ್ರಸಂಗತನವಾಗಿದೆ. ಬೇಸಿಕ್ 3% ಇನ್ಕ್ರಿಮೆಂಟ್ ಕೇಳಿದ್ವಿ ಅದರ ಬಗ್ಗೆ ಮಾತಾಡಿಲ್ಲ. ನಾವೀಗ ಮತ್ತೆ ಕೆಎಸ್​ಆರ್​ಟಿಸಿ ಆಡಳಿತ ಮಂಡಳಿ ಮೀಟ್ ಆಗ್ತಿವಿ. ಮತ್ತೆ ನಮ್ಮ ಬೇಡಿಕೆ ಇಡ್ತಿವಿ. ಅವರ ತೀರ್ಮಾನಕ್ಕೆ ಕಾಯ್ತಿವಿ. ನಾವು ಮುಷ್ಕರ ವಾಪಾಸ್ ಪಡೆದಿಲ್ಲ. ಅಲ್ಲದೆ, ಸರ್ಕಾರದ ನಡೆ ತೃಪ್ತಿತಂದಿಲ್ಲ. ಹೀಗಾಗಿ ನಾವು ಮುಷ್ಕರ ವಾಪಾಸ್ ಪಡೆದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Karnataka Congress : ಸಚಿವ ಸೋಮಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News