ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ಟೈಮ್ ಲೈನ್

                               

Last Updated : Oct 27, 2017, 09:59 AM IST
ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ಟೈಮ್ ಲೈನ್ title=

* ಜುಲೈ 7, 2016 : ಮಡಿಕೇರಿಯ ಲಾಡ್ಜ್ ನಲ್ಲಿ(ರೂಮ್ ನಂಬರ್ 315) ನೇಣು ಬಿಗಿದುಕೊಂಡು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ.

- ಆತ್ಮಹತ್ಯೆಗೂ ಮುನ್ನ ಸ್ಥಳೀಯ ಚಾನೆಲ್ ವೊಂದರ ಮೂಲಕ ವಿಡಿಯೋ ಡೆತ್ ಸ್ಟೇಟ್ ಮೆಂಟ್. 
ಗುಪ್ತಚರ ಎಡಿಜಿಪಿ ಎ.ಎಂ. ಪ್ರಸಾದ್ ಹಾಗೂ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಹಾಗೂ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಆರೋಪ.

* ಜುಲೈ 8: ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆ.ಜೆ. ಜಾರ್ಜ್ ಹೇಳಿಕೆ.

- ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕರ್ನಾಟಕ ಸರ್ಕಾರ.

* ಗಣಪತಿ ಮೇಲಿದ್ದ ಆರೋಪ, ಕೇಸ್ ಬಗ್ಗೆ ಮಾಧ್ಯಮಗಳಲ್ಲಿ ವರದಿ. ಯಶವಂತಪುರ ಎನ್ಕೌಂಟರ್, ಮಡಿವಾಳ ಹಾಗೂ ರಾಜಗೋಪಾಲ ನಗರ ಠಾಣೆಯಲ್ಲಿ ಕರ್ತವ್ಯ ಲೋಪ ಆರೋಪ.

* ಜುಲೈ 9 : ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಕಾಫಿತೋಟದಲ್ಲಿ ಕೊಡವ ಸಮಯದಾಯದ ಸಂಪ್ರದಾಯದಂತೆ ಎಂ.ಕೆ. ಗಣಪತಿ ಅಂತ್ಯಕ್ರಿಯೆ. 

- ಸಚಿವ ಕೆ.ಜೆ. ಜಾರ್ಜ್ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ. 

- ಆತ್ಮಹತ್ಯೆಗೂ ಮುನ್ನ ರೂಮಿನಲ್ಲಿ ಎರಡು ಬಾರಿ ಗುಂಡು ಹಾರಿಸಿದ್ದು ಏಕೆ? ಡೆತ್ ನೋಟ್ ಬರೆದಿಟ್ಟರೆ ಅದು ಎಲ್ಲಿದೆ? ಎಂಬ ಪ್ರಶ್ನೆ. 

* ಜುಲೈ 10 : ಮಂಗಳೂರಿನಲ್ಲಿದ್ದಾಗ ಮಾನಸಿಕ ಖಿನ್ನತೆ, ತಲೆನೋವು, ಮರೆವು ಕಾಯಿಲೆಗಾಗಿ ಡಾ. ಕಿರಣ್ ಕುಮಾರ್ ರಿಂದ ಗಣಪತಿ ಚಿಕಿತ್ಸೆ ಪಡೆದಿದ್ದ ಬಗ್ಗೆ ವರದಿ.

* ಜುಲೈ 11 : ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಗಣಪತಿ ಪತ್ನಿ ಪಾವನಾ ಹಾಗೂ ಪುತ್ರ ನೇಹಾಲ್ ಪ್ರತ್ಯೇಕ ದೂರು. ಎಫ್ಐಆರ್ ದಾಖಲಿಸಲು ಮುಂದಾಗದ ಪೊಲೀಸರು.

- ನಂತರದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಾಗೂ ಗಣಪತಿ ಆತ್ಮಹತ್ಯೆ ಬಗ್ಗೆ ಎಐಸಿಸಿ ವರದಿ ಕೇಳಿತು. ಅಲ್ಲದೇ,  ವಿಧಾನಸಭೆ ಅಧಿವೇಶನದಲ್ಲೂ ಗಣಪತಿ ಆತ್ಮಹತ್ಯೆ ಬಗ್ಗೆ ಚರ್ಚೆ, ಕೋಲಾಹಲ ಉಂಟಾಗಿತ್ತು. ಆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರ್ಜ್ ಬೆಂಬಲಕ್ಕೆ ನಿಂತರು.

- ಸಿಐಡಿ ಎಡಿಜಿಪಿ ಪ್ರತಾಪ್ ರಿಂದ ತನಿಖೆ, ಮಂಗಳೂರಿನ ಡಾ. ಕಿರಣ್ ರಿಂದ ಮಾಹಿತಿ ಸಂಗ್ರಹ. ಮಡಿಕೇರಿ ಲಾಡ್ಜ್ ಹಾಗೂ ಮನೆಗೆ ಭೇಟಿ.

* ಜುಲೈ 12 : ಬಿಜೆಪಿಯಿಂದ ಪ್ರತಿಭಟನೆ. ಸಿಬಿಐ ತನಿಖೆಗೆ ವಹಿಸಲು ಆಗ್ರಹ ಪಡಿಸಿದರು. ಸಿಎಂ ಬಯಸಿದರೆ ಒಂದು ನಿಮಿಷದಲ್ಲೇ ರಾಜೀನಾಮೆ ನೀಡುತ್ತೇನೆ. ಆದರೆ, ನನಗೂ ಈ ಕೇಸಿಗೂ ಸಂಬಂಧವಿಲ್ಲ ಎಂದು ಕೆ.ಜೆ. ಜಾರ್ಜ್ ಸದನದಲ್ಲಿ ಸ್ಪಷ್ಟನೆ ನೀಡಿದರು.

* ಜುಲೈ 13 : ಕೆ.ಜೆ. ಜಾರ್ಜ್  ರಾಜೀನಾಮೆ ನೀಡುತ್ತಿಲ್ಲ ಎಂದು ಲಿಖಿತ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ.

- ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರದಿಂದ ನ್ಯಾಯಾಂಗ ತನಿಖೆಯ ಘೋಷಣೆ.

- ಸರ್ಕಾರದ ಕ್ರಮ ಖಂಡಿಸಿ, ಬಿಜೆಪಿ, ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ.

* ಜುಲೈ 14 : ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕೊಡಗು ಬಂದ್.

- ಸದನದಲ್ಲಿ ಸ್ಪೀಕರ್ ಸಂಧಾನ ವಿಫಲ, ವಿಪಕ್ಷಗಳಿಂದ ಅಹೋರಾತ್ರಿ ಧರಣಿ ಮುಂದುವರಿಕೆ.

* ಜುಲೈ 15 : ಪೊಲೀಸ್ ಇಲಾಖೆಯಿಂದ ಗಣಪತಿಗೆ ಕಿರುಕುಳವಾಗಿಲ್ಲ - ಎಡಿಜಿಪಿ ಎ.ಎಂ. ಪ್ರಸಾದ್ ಹೇಳಿಕೆ.

- ಕೆ.ಜೆ. ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್.

- ಸಿಐಡಿ ವರದಿ ಸೋರಿಕೆ ಸುದ್ದಿಯನ್ನು ಅಲ್ಲಗೆಳೆದ ಸಿಎಂ ಸಿದ್ದರಾಮಯ್ಯ.

* ಜುಲೈ 16:  ನ್ಯಾಯಾಂಗ ತನಿಖೆಗೆ ನ್ಯಾ.ಕೆ.ಎನ್.ಕೇಶವನಾರಾಯಣ ನೇಮಕ.  

* ಜುಲೈ 17, 2016 : ಸೋಮವಾರಪೇಟೆಯ ರಂಗಸಮುದ್ರದಲ್ಲಿ ಗಣಪತಿ 11 ನೇ ದಿನ ಕಾರ್ಯಗಳು. ನ್ಯಾಯಾಂಗ ತನಿಖೆ ಬದಲು ಸಿಬಿಐ ತನಿಖೆಗೆ ಕುಟುಂಬದವರ ಆಗ್ರಹ.

* ಜುಲೈ 18: ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಜೆ. ಜಾರ್ಜ್, ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲ.

- ಮೊದಲ ಬಾರಿಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಎಡಿಜಿಪಿ ಪ್ರಣಬ್ ಮೊಹಂತಿ. ಮಡಿಕೇರಿ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೆ.
 
- ಗಣಪತಿ ಪುತ್ರ ನೇಹಲ್ ಅವರ ಅರ್ಜಿ ಪುರಸ್ಕರಿಸಿದ ನ್ಯಾ. ಅನ್ನಪೂರ್ಣೆಶ್ವರಿ. ಕೆ.ಜೆ. ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಲು ತನಿಖಾಧಿಕಾರಿಗಳಿಗೆ ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯದಿಂದ ಆದೇಶ. 

* ಜುಲೈ 19: ಮಾಜಿ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಮಡಿಕೇರಿ ಪೊಲೀಸರು ಮಂಗಳವಾರ ಪ್ರಾಥಮಿಕ ತನಿಖಾ ವರದಿ. ಪ್ರಕರಣದಲ್ಲಿ ಜಾರ್ಜ್ ಅವರು ಮೊದಲ ಆರೋಪಿ ಎಂದು ವರದಿ ಸಲ್ಲಿಕೆ. 

* ಆಗಸ್ಟ್ 23, 2017: ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾದ ಲೋಪದ ಆರೋಪ. ಗಣಪತಿ ಬಳಸುತ್ತಿದ್ದ ಪೆನ್ ಡ್ರೈವ್, ಮೊಬೈಲ್ ಫೋನ್ ಗಳ ಮಾಹಿತಿ ಅಳಿಸಿರೋ ಆರೋಪ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿದ್ದರು ಎಂಬ ಅಂಶ ವರದಿ. 

* ಸೆಪ್ಟೆಂಬರ್ 05, 2017: ಗಣಪತಿ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಆದೇಶ. ಮೂರು ತಿಂಗಳಿನೊಳಗೆ ವರದಿ ನೀಡುವಂತೆ ತನಿಖಾಧಿಕಾರಿಗಳಿಗೆ ಸೂಚನೆ.

* ಅಕ್ಟೋಬರ್ 26, 2017: ಪ್ರಕರಣ ಸಂಬಂಧ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲು.

Trending News