ಬಿಎಸ್‌ವೈ ಸರ್ಕಾರದಲ್ಲಿ ಮೂವರಿಗೆ ಡಿಸಿಎಂ ಪಟ್ಟ: ಯಾರಿಗೆ ಯಾವ ಖಾತೆ!

ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ, ಲಕ್ಷ್ಮಣ್ ಸವದಿಗೆ ಒಲಿದ ಉಪಮುಖ್ಯಮಂತ್ರಿ ಅದೃಷ್ಟ.

Last Updated : Aug 27, 2019, 10:50 AM IST
ಬಿಎಸ್‌ವೈ ಸರ್ಕಾರದಲ್ಲಿ ಮೂವರಿಗೆ ಡಿಸಿಎಂ ಪಟ್ಟ: ಯಾರಿಗೆ ಯಾವ ಖಾತೆ! title=
File Image

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಂಪುಟ ಸದಸ್ಯರಿಗೆ ಕೊನೆಗೂ ಖಾತೆ ಹನ್ಸಿಕೆಯಾಗಿದೆ. ನಿರೀಕ್ಷೆಯಂತೆ ಬಿಎಸ್‌ವೈ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ. 

ಬಿಜೆಪಿ ರಾಜ್ಯ ಘಟಕದ ಹಿರಿಯ ನಾಯಕರ ವಿರೋಧದ ನಡುವೆಯೇ ಗೋವಿಂದ ಕಾರಜೋಳ, ಡಾ. ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿಗೆ ಡಿಸಿಎಂ ಪಟ್ಟ ಹುದ್ದೆ ನೀಡಲಾಗಿದೆ. ಜೊತೆಗೆ ಗೋವಿಂದ ಕಾರಜೋಳಗೆ ಲೋಕೋಪಯೋಗಿ, ಡಾ. ಅಶ್ವತ್ಥನಾರಾಯಣಗೆ ಉನ್ನತ ಶಿಕ್ಷಣ ಹಾಗೂ ಲಕ್ಷ್ಮಣ್ ಸವದಿಗೆ  ಸಾರಿಗೆಯಂಥ ಮಹತ್ವದ ಖಾತೆಗಳನ್ನು ನೀಡಲಾಗಿದೆ.

ಕೊನೆಗೂ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡದ ಸಿಎಂ ಬಿ.ಎಸ್. ಯಡಿಯೂರಪ್ಪ, ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ 17 ಶಾಸಕರಿಗೆ ಯಾವ ಯಾವ ಖಾತೆ ಹಂಚಿದ್ದಾರೆ.

ಇಲ್ಲಿದೆ ಪಟ್ಟಿ...

  1. ಗೋವಿಂದ ಕಾರಜೋಳ- ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ
  2. ಡಾ. ಅಶ್ವತ್ಥ್​ ನಾರಾಯಣ- ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ
  3. ಲಕ್ಷ್ಮಣ ಸವದಿ- ಉಪಮುಖ್ಯಮಂತ್ರಿ, ಸಾರಿಗೆ ಖಾತೆ
  4. ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ 
  5. ಬಸವರಾಜ ಬೊಮ್ಮಾಯಿ- ಗೃಹ ಇಲಾಖೆ
  6. ಆರ್. ಅಶೋಕ್- ಕಂದಾಯ, ಮುಜುರಾಯಿ ಖಾತೆ
  7. ಜಗದೀಶ್ ಶೆಟ್ಟರ್-  ಬೃಹತ್ ಮತ್ತು ಮಧ್ಯಮ ಕೈಗಾರಿಕೆ 
  8. ಬಿ. ಶ್ರೀರಾಮುಲು- ಅರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
  9. ಜೆ.ಸಿ.ಮಾದುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
  10. ಎಸ್​.ಸುರೇಶ್​ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 
  11. ವಿ.ಸೋಮಣ್ಣ- ವಸತಿ ಖಾತೆ
  12. ಸಿ.ಟಿ.ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  13. ಕೋಟಾ ಶ್ರೀನಿವಾಸ ಪೂಜಾರಿ- ಮೀನುಗಾರಿಗೆ, ಬಂದರು ಮತ್ತು ಒಳನಾಡು ಸಾರಿಗೆ
  14. ಸಿ.ಸಿ. ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ ಇಲಾಖೆ
  15. ಎಚ್​​.ನಾಗೇಶ್‌- ಅಬಕಾರಿ ಇಲಾಖೆ
  16. ಪ್ರಭು ಚೌಹಾಣ್‌- ಪಶು ಸಂಗೋಪನೆ
  17. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕ ಸಬಲೀಕರಣ

Trending News