ರಾಯಚೂರು : ಗ್ರಾಮಸ್ಥರು ಗುಡ್ಡದಲ್ಲಿದ್ದ ಚಿರತೆ ಮರಿಯನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿಸಿರುವ ಘಟನೆ ಜಿಲ್ಲೆ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಇದೇ ನೀರಮಾನ್ವಿ ಗುಡ್ಡದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದಿದ್ದರು. ಆದರೆ ಮತ್ತೊಂದು ಚಿರತೆ ಇರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು, ಗುಡ್ಡದ ಸಮೀಪ ಕುರಿ ಹಿಂಡಿನ ಹತ್ತಿರ ಎರಡು ಚಿರತೆ ಮರಿಗಳು ಬಂದಿದ್ದನ್ನು ಕುರಿಗಾಯಿಗಳು ನೋಡಿದ್ದರು. ಚಿರತೆ ಮರಿಗಳು ಇರುವುದನ್ನು ಕಂಡು ಬಲೆ ಹಾಕಿದಾಗ ಒಂದು ಚಿರತೆ ಮರಿ ಸೆರೆ ಸಿಕ್ಕಿತ್ತು, ಮತ್ತೊಂದು ಚಿರತೆ ಮರಿ ಎಸ್ಕೇಪ್ ಹೋಗಿತ್ತು. ಸೆರೆ ಸಿಕ್ಕ ಮರಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ನೀರಮಾನ್ವಿ ಸುತ್ತಲಿನ ಗ್ರಾಮಸ್ಥರು ಗುಡ್ಡದಲ್ಲಿ ಇನ್ನೆರಡು ಚಿರತೆ ಇರುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಆಶ್ರಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ; ಬಡವರಿಗೆ ಸೇರಬೇಕಿದ್ದ ಮನೆಗಳು ಶಾಸಕರ ಬೆಂಬಲಿಗರ ಪಾಲು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.