ಅನ್ನದಾತರ ಕೈಹಿಡಿದ ಕಪ್ಪು ಬಂಗಾರ.. ಕಾಳುಮೆಣಸಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್‌..!

Black pepper : ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದೇ ಕರೆಸಿಕೊಳ್ಳುವ ಕಾಳುಮೆಣಸು ದರ ಈಗ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ರೂಗಳಷ್ಟು ಜಾಸ್ತಿಯಾಗಿದೆ. ಇದರಿಂದ ಬೆಳೆಗಾರರು ದಾಸ್ತಾನು ಮಾಡಿದ್ದ ಬೆಳೆ ಈಗ ಟೆಂಡರ್ ಮಾರುಕಟ್ಟೆಗೆ ಬರುವ ಪ್ರಮಾಣ ಕೂಡ ಹೆಚ್ಚಳವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

Written by - Savita M B | Last Updated : Aug 8, 2023, 07:35 PM IST
  • ಸೋಮವಾರದ ಟೆಂಡರ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಾಳುಮೆಣಸಿಗೆ ಗರಿಷ್ಠ 61,599 ರೂ
  • ಕಾಳುಮೆಣಸು ದರ ಈ ಗರಿಷ್ಠ ಮೊತ್ತಕ್ಕೆ ತೇಜಿ ಆಗಿರುವುದು ಇದೇ ಮೊದಲೇನು ಅಲ್ಲ
  • ಮಾರುಕಟ್ಟೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಕಾಳುಮೆಣಸಿನ ವ್ಯಾಪಾರ ನಡೆಯುತ್ತಿದ್ದು ಬೆಳೆಗಾರರಿಗೆ ಅನುಕೂಲವಾಗಿದೆ.
ಅನ್ನದಾತರ ಕೈಹಿಡಿದ ಕಪ್ಪು ಬಂಗಾರ.. ಕಾಳುಮೆಣಸಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್‌..! title=

ಹೌದು.. ಕಳೆದ 15 ದಿನಗಳ ಹಿಂದಿನವರೆಗೂ ಕ್ವಿಂ. ಗೆ ಗರಿಷ್ಟ 49 ಸಾವಿರ ರೂ. ಹಾಗೂ ಸರಾಸರಿ 45 ಸಾವಿರ  ರೂ. ಆಸುಪಾಸು ದರ ಲಭ್ಯವಾಗುತ್ತಿತ್ತು. ಆದರೆ ಈಗ  ಕ್ವಿಂ.ಗೆ 10 ಸಾವಿರ ರೂ. ಗಳಷ್ಟು ತೇಜಿಯಾಗಿದ್ದು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಕಳೆದ ಎರಡು ವಾರದಲ್ಲಿ ಕ್ರಮೇಣ ಏರಿಕೆಯಾಗುತ್ತಾ ಬಂದ ದರ ಈ ವಾರದ ಪ್ರಾರಂಭಕ್ಕೆ ಕೂಡ ಮುಂದುವರೆದಿದೆ. 

ಸೋಮವಾರದ ಟೆಂಡರ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಾಳುಮೆಣಸಿಗೆ ಗರಿಷ್ಠ 61,599 ರೂ. ಲಭ್ಯವಾಗಿದೆ. ಹಾಗೆಂದು ಕಾಳುಮೆಣಸು ದರ ಈ ಗರಿಷ್ಠ ಮೊತ್ತಕ್ಕೆ ತೇಜಿ ಆಗಿರುವುದು ಇದೇ ಮೊದಲೇನು ಅಲ್ಲ. ಆರು ವರ್ಷಗಳ ಹಿಂದೆ  2017 ರಲ್ಲಿ  ಇದಕ್ಕಿಂತ ಹೆಚ್ಚಿನ ದರ ಲಭ್ಯವಾಗಿತ್ತು. ಅದು ಕೂಡ ಕೆಲ ತಿಂಗಳುಗಳ ಕಾಲ ಮುಂದುವರೆದು ಅದುವರೆಗೆ ದಾಸ್ತಾನು ಮಾಡಿದ ಬೆಳೆಗಾರರು ಖುಷಿ ಪಡುವಂತಾಯಿತು. 

ಆಗ ಸಾಕಷ್ಟು ಬೆಳೆಗಾರರು ದಾಸ್ತಾನು ಮಾಡಿದ್ದ ಕಾಳುಮೆಣಸನ್ನು  ಮಾರುಕಟ್ಟೆಗೆ ತಂದು ವಿಕ್ರಿ ಮಾಡಿ ಉತ್ತಮ ದರ ಪಡೆದಿದ್ದರೆ, ಮತ್ತಷ್ಟು ಬೆಳೆಗಾರರು ಇನ್ನಷ್ಟು ತೇಜಿಯಾಗಬಹುದು ನಿರೀಕ್ಷೆ ಮಾಡುವಂತೆಯೂ ಆಗಿತ್ತು. 

ಇದನ್ನೂ ಓದಿ-ಅಧಿಕಾರಿಗಳ ಬಳಿ 6-8 ಲಕ್ಷ ಕಮಿಷನ್ ಆರೋಪ-ಕೃಷಿ ಸಚಿವ ಚಲುವರಾಯಸ್ವಾಮಿ ವಜಾಗೆ ಆಗ್ರಹ

ಆದರೆ ಆಗ ಕೆಲ ತಿಂಗಳುಗಳ ನಂತರ ಇಳಿಕೆ ಕಂಡಿದ್ದ ಕಾಳು ಮೆಣಸಿನ ದರವು ಕ್ವಿಂ.ಗೆ  40- 45 ಸಾವಿರ ರೂಗಳಿಗೆ ಕುಸಿತ ಕಂಡು ಬೆಳೆಗಾರರು ನಿರಾಸೆ ವ್ಯಕ್ತಪಡಿಸುವಂತಾಗಿತ್ತು. ಆದರೆ ಬರೋಬ್ಬರಿ ಆರು ವರ್ಷದ ನಂತರ ಈಗ ಪುನಃ 60 ಸಾವಿರ ರೂಗಳ ಗಡಿಯನ್ನು ದಾಟಿದ ದರ ಈವರೆಗೆ ದಾಸ್ತಾನು ಮಾಡಿದ ಬೆಳೆಗಾರರ ಮಂದಹಾಸಕ್ಕೆ ಕಾರಣವಾಗಿದೆ.

ಕಾಳುಮೆಣಸು ದರ ಮತ್ತೊಮ್ಮೆ 60 ಸಾವಿರ ರೂ. ತೇಜಿ ಆದ ನಂತರ ವಿಕ್ವಿ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಕೂಡ ಈಗ ಸಾಕಷ್ಟು ಹೆಚ್ಚಳವಾಗಿದೆ.ಇದಕ್ಕೂ ಮುಂಚೆ ಟೆಂಡರ್ ಮಾರುಕಟ್ಟೆ ಯಲ್ಲಿ ಕೇವಲ ಕೆಲವೇ ಕ್ವಿಂ.ಗಳಷ್ಟು ಮಾತ್ರ ಆವಕವಾಗುತ್ತಿತ್ತು. ಅದರಲ್ಲೂ ಕೆಲವು ದಿನ ಇಲ್ಲವೇ ಇಲ್ಲ ಎನ್ನುವಂತೆ ಆಗುತ್ತಿತ್ತು. 

ಆದರೆ ಕಳೆದೊಂದು ಹತ್ತು ದಿನಗಳ ಈಚೆಗೆ ಆವಕ ಸಾಕಷ್ಟು ಹೆಚ್ಚಳವಾಗಿದ್ದು ಅಡಕೆ ಮಾರುಕಟ್ಟೆಯಲ್ಲಿ ಕಾಳು ಮೆಣಸು ವಿಕ್ರಿಗೂ ಜಾಗ ಮಾಡಿಕೊಡಬೇಕು ಎನ್ನುವಂತೆ ಆಗಿದೆ. ಆದರೆ ಶಿರಸಿ ಸಹಕಾರಿ ಸಂಘ ಸಂಸ್ಥೆಗಳ ಮಾರುಕಟ್ಟೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಕಾಳುಮೆಣಸಿನ ವ್ಯಾಪಾರ ನಡೆಯುತ್ತಿದ್ದು ಬೆಳೆಗಾರರಿಗೆ ಅನುಕೂಲವಾಗಿದೆ.

ಒಟ್ಟಾರೆ ಆರು ವರ್ಷದ ಹಿಂದಿನ ದರಕ್ಕೆ ಕಾಳುಮೆಣಸು‌ಪುನಃ ತಲುಪಿದ ಬಗ್ಗೆ ಕೃಷಿಕರ ವಲಯದಲ್ಲಿ ಖುಷಿ ಇದ್ದರೂ ಈ ದರ ಇನ್ನಷ್ಟು ತೇಜಿ ಆಗಬಹುದೇ ಎನ್ನುವ  ನಿರೀಕ್ಷೆಗೂ ಕಾರಣವಾಗುತ್ತಿದೆ. ಅಲ್ಲದೆ ಇನ್ನೆಷ್ಟು ದಿನ ಮುಂದುವರಿಯಬಹುದು ಎಂಬ ಪ್ರಶ್ನೆ ಬೆಳೆಗಾರರಲ್ಲಿ ಮೂಡುವಂತೆ ಮಾಡಿದೆ.

ಇದನ್ನೂ ಓದಿ-ವೈಮಾನಿಕ ತರಬೇತಿ ಶಾಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ: ಅಧಿಕಾರಿಗಳಿಗೆ ಸಚಿವ ಬಿ.ನಾಗೇಂದ್ರ ಸೂಚನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News