ಬರಹಗಾರರಿಗಾಗಿ ಇಲ್ಲಿದೆ ಸುವರ್ಣ ಅವಕಾಶ.. ಸ್ಕ್ರಿಪ್ಟ್ ಬರೆದು ಹಣ ಗೆಲ್ಲಿ !

Movie Script: ಬಣ್ಣದ ಲೋಕ ಅಂದ್ರೇನೆ ಹಾಗೆ ಅದೆಷ್ಟೋ ಜನ ಸಿನಿಮಾ ಮಾಡೋ ಕನಸು ಕಟ್ಟಿಕೊಂಡು ಮನೆಯವರನ್ನು ಎದುರುಹಾಕಿಕೊಂಡು ಬೆಂಗಳೂರಿಗೆ ಬರ್ತಾರೆ. ಅದ್ರಲ್ಲಿ ಗೆಲ್ಲೋದು ಯಾರೋ ಒಬ್ರೋ ಇಬ್ರೋ ಮಾತ್ರ. ಆದ್ರೆ ಈಗ ಆ ಟೆನ್ಶನ್ ಬೇಡ. ಯಾಕೆ ಅಂತೀರಾ ಈ ಸ್ಟೋರಿ ಓದಿ... 

Written by - Zee Kannada News Desk | Last Updated : Jun 9, 2024, 11:33 AM IST
  • ನೀವು ಒಳ್ಳೆ ಕಥೆ ಬರೀತಿರಾ? ಎಲ್ಲಿ ಪಬ್ಲಿಷ್ ಮಾಡ್ಬೇಕು ಅಂತ ಗೊತ್ತಿಲ್ವಾ? ಹಾಗಾದ್ರೆ ಚಿಂತೆಬೇಡಿ.
  • ಆರೋಹ ಪ್ರೊಡಕ್ಷನ್ಸ್ ಹೊಸ ಚಿತ್ರದ ಕಥೆ ಬರೆಯಲು ಪ್ರತಿಭಾವಂತ ಬರಹಗಾರರಿಗೆ ಆಹ್ವಾನ ನೀಡಿದೆ.
  • ಸೆಲೆಕ್ಟ್ ಆದ ಕಥೆ ಬಹುಮಾನ ಪಡೆಯಲಿದೆ.
ಬರಹಗಾರರಿಗಾಗಿ ಇಲ್ಲಿದೆ ಸುವರ್ಣ ಅವಕಾಶ.. ಸ್ಕ್ರಿಪ್ಟ್ ಬರೆದು ಹಣ ಗೆಲ್ಲಿ !  title=

Movie Script: ಬಣ್ಣದ ಲೋಕ ಅಂದ್ರೇನೆ ಹಾಗೆ ಅದೆಷ್ಟೋ ಜನ ಸಿನಿಮಾ ಮಾಡೋ ಕನಸು ಕಟ್ಟಿಕೊಂಡು ಮನೆಯವರನ್ನು ಎದುರುಹಾಕಿಕೊಂಡು ಬೆಂಗಳೂರಿಗೆ ಬರ್ತಾರೆ. ಅದ್ರಲ್ಲಿ ಗೆಲ್ಲೋದು ಯಾರೋ ಒಬ್ರೋ ಇಬ್ರೋ ಮಾತ್ರ. ಆದ್ರೆ ಈಗ ಆ ಟೆನ್ಶನ್ ಬೇಡ. ಯಾಕೆ ಅಂತೀರಾ ಈ ಸ್ಟೋರಿ ಓದಿ... 

ನೀವು ಒಳ್ಳೆ ಕಥೆ ಬರೀತಿರಾ? ಎಲ್ಲಿ ಪಬ್ಲಿಷ್ ಮಾಡ್ಬೇಕು ಅಂತ ಗೊತ್ತಿಲ್ವಾ? ಹಾಗಾದ್ರೆ ಚಿಂತೆಬೇಡಿ. 'ಕಾಂಗರೂ' ಸಿನಿಮಾದ ನಿರ್ಮಾಣ ಸಂಸ್ಥೆಯಾದ ಆರೋಹ ಪ್ರೊಡಕ್ಷನ್ಸ್ (Aroha Productions) ಹೊಸ ಚಿತ್ರದ ಕಥೆ ಬರೆಯಲು ಪ್ರತಿಭಾವಂತ ಬರಹಗಾರರಿಗೆ ಆಹ್ವಾನ ನೀಡಿದೆ. ಒಳ್ಳೆ ಕಥೆ ಬರೆದವವರಿಗೆ ಸೂಪರ್ ಬಹುಮಾನ ಗೆಲ್ಲವ ಅವಕಾಶ ಕೂಡ ಇದೆ.

ಇದನ್ನೂ ಓದಿ: ಕಮರ್ಷಿಯಲ್ ಸಕ್ಸಸ್ ಕಾಣದಿದ್ದರೂ, ಜನರ ಮನ ಗೆದ್ದ ʻಕೆರೆಬೇಟೆʼ

ನಿಮ್ಮ ಶಾಲೆ ಅಥವಾ ಕಾಲೇಜಿನ ಅನುಭವದ ಮೇಲೆ ಕಥೆಯನ್ನು ಬರೆಯಬೇಕು. ಈ ಕಥೆ ಮೂರು ಪುಟಗಳ ಒಳಗೆ ಇರಬೇಕು. ನೀವು ಬರೆದ ಕಥೆಯನ್ನು ಇಮೈಲ್(E-Mail) ಅಥವಾ ವಾಟ್ಸ್ಅಪ್(WhatsApp) ಮೂಲಕ ಕಳುಹಿಸಬಹುದು. ಸೆಲೆಕ್ಟ್ ಆದ ಕಥೆ ಬಹುಮಾನ ಪಡೆಯಲಿದೆ. 

ಮೊದಲನೇ ಬಹುಮಾನ ₹1 ಲಕ್ಷ ಮತ್ತು ಎರಡನೇ ಬಹುಮಾನವಾಗಿ ₹50,000 ನೀಡಲಾಗುವುದು. ಟಾಪ್ 10 ಉತ್ತಮ ಕಥೆಗಳಿಗೆ ತಲಾ ₹25,000 ಬಹುಮಾನ ಕೊಡಲಾಗುವುದು. ಸಿನಿಮಾ ಒಂದಕ್ಕೆ ಈ ಕಥೆಯನ್ನು ಬಳಸಿಕೊಳ್ಳಲಾಗುತ್ತದೆ. ಆದಕಾರಣ ಬರಹಕ್ಕೆ ತಕ್ಕ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?

ಬೆಸ್ಟ್ ಕಥೆ ಬರೆಯುವ ಬರಹಗಾರರು ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಕೂಡ ಗಿಟ್ಟಿಸಿಕೊಳ್ಳಲಿದ್ದಾರೆ. ನಿಮ್ಮ ಲೇಖನವನ್ನ ಕಳುಹಿಸಬೇಕಾದ ನಂ. 9844460128 ಅಥವಾ ಈ kishore.megalamane@gmail.com ಇಮೈಲ್ ಗೆ ಕಳುಹಿಸಬಹುದು.

Trending News