ಮೈಸೂರು ದಸರಾ 2022 : ಗಜಪಡೆಯ ಸಾರಥಿ ಅಭಿಮನ್ಯುವಿಗೆ ಇಂದಿನಿಂದ ತಾಲೀಮು ಶುರು

Mysuru Dasara 2022 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ದಸರಾ ಗಜಪಡೆಯ ಸಾರಥಿ ಅಭಿಮನ್ಯುವಿಗೆ ಇಂದಿನಿಂದ ಭಾರ ಹೊರಿಸಿ ತಾಲೀಮು ಶುರು ಮಾಡಲಾಗಿದೆ.

Written by - Chetana Devarmani | Last Updated : Aug 18, 2022, 12:31 PM IST
  • ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022
  • ದಸರಾ ಗಜಪಡೆಯ ಸಾರಥಿ ಅಭಿಮನ್ಯುವಿಗೆ ತಾಲೀಮು ಶುರು
  • ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿಗೆ ವಿಶೇಷ ಪೂಜೆ
ಮೈಸೂರು ದಸರಾ 2022 : ಗಜಪಡೆಯ ಸಾರಥಿ ಅಭಿಮನ್ಯುವಿಗೆ ಇಂದಿನಿಂದ ತಾಲೀಮು ಶುರು title=
ತಾಲೀಮು

Mysuru Dasara 2022 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ದಸರಾ ಗಜಪಡೆಯ ಸಾರಥಿ ಅಭಿಮನ್ಯುವಿಗೆ ಇಂದಿನಿಂದ ಭಾರ ಹೊರಿಸಿ ತಾಲೀಮು ಶುರು ಮಾಡಲಾಗಿದೆ. ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಅಭಿಮನ್ಯುವಿನ ಬೆನ್ನಿಗೆ ಗಾದಿ ನಮ್ದಾ ಕಟ್ಟಿ ತಾಲೀಮು ಮಾಡಸಲಾಯಿತು. ಮೊದಲಿಗೆ ವಿಶೇಷ ಪೂಜೆ ನೆರವೇಸಿ ಬಳಿಕ ಭಾರ ಹೊರುವ ತಾಲೀಮು ಆರಂಭ ಮಾಡಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ರಿಂದ ಅಭಿಮನ್ಯುವಿಗೆ ವಿಶೇಷ ಪೂಜೆ ನೆರವೇರಲಾಯಿತು.

ಇದನ್ನೂ ಓದಿ: Mudhol hound: ಪ್ರಧಾನಿ ಮೋದಿಯವರ SPG ತಂಡಕ್ಕೆ ಸೇರಿದ ಮುಧೋಳ ಶ್ವಾನ

ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾಗಿ ಸಾಗಲಿರುವ ಚೈತ್ರಾ ಮತ್ತು ಕಾವೇರಿಯನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ನೆರವೇರಿಸಿದರು. ಡಿಸಿಎಫ್‌ ಕರಿಕಾಳನ್ ಸಮ್ಮುಖದಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿಗೆ ವಿಶೇಷ ಪೂಜೆ ಸಲ್ಲಿಸದರು. ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನಿರಿಸಿ ಭಾರ ಹೊರುವ ತಾಲೀಮಿಗೆ ಚಾಲನೆ ನೀಡಿದರು. ಇಂದು ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನು ಹೊತ್ತು ಅಭಿಮನ್ಯು ಸಾಗಿದನು. ಆರಂಭದಲ್ಲಿ 500 ಕೆ ಜಿ ಯಷ್ಟು ಭಾರ ಹೊರಿಸಿ ನಡೆಯಲಿರುವ ತಾಲೀಮು ನಡೆಸಲಾಯಿತು. ಮೊದಲ ದಿನವಾದ ಇಂದು ಕೂಡ ಗಾದಿ ನಮ್ದಾ ಮರಳಿನ ಮೂಟೆ ಸೇರಿದಂತೆ ಒಟ್ಟಾರೆಯಾಗಿ 500 ಕೆ ಜಿ ಭಾರ ಹೊರಿಸಿ ತಾಲೀಮು ನಡೆಸಲಾಯಿತು.

ದಿನ ಕಳೆದಂತೆ ಹಂತ ಹಂತವಾಗಿ ಭಾರ ಹೆಚ್ಚಿಸುತ್ತಾ 750 ಕೆ ಜಿ ತೂಕದ ಚಿನ್ನದ ಅಂಬಾರಿಯನ್ನು ಸುಲಲಿತವಾಗಿ ಹೊತ್ತು ಸಾಗಲು ಅಂಬಾರಿ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಣಿಗೊಳಿಸಲಿದ್ದಾರೆ. ಇಂದು ಬೆಳಿಗ್ಗೆ ಪೂಜೆ ನೆರವೇರಿದ ಬಳಿಕ ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟ ಅಭಿಮನ್ಯು ಅಂಡ್ ಟೀಮ್ ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಾಗಿ ಬನ್ನಿಮಂಟಪ ತಲುಪಿದ ನಂತರ ಮತ್ತೆ ಅರಮನೆ ಆವರಣಕ್ಕೆ ವಾಪಸ್ ಆದರು.

ಇದನ್ನೂ ಓದಿ:KG Halli : ಕೆಜಿ ಹಳ್ಳಿ ಕಾಲೇಜು ವಿದ್ಯಾರ್ಥಿ ಕೊಲೆ ಕೇಸ್ : ಹತ್ಯಗೆ ಬಳಸಿದ ವೆಪನ್‌ ನೋಡಿ ಪೊಲೀಸರೆ ಶಾಕ್‌!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News