ಕಂಬಳಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಕಂಬಳಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಪೇಟಾ ಅರ್ಜಿಯನ್ನು ಮತ್ತೆ ಸುಪ್ರಿಂಕೋರ್ಟ್ ನಿರಾಕರಿಸಿದ್ದು ಈಗ ಅದರ ವಿಚಾರಣೆಯನ್ನು ಮಾರ್ಚ 14ಕ್ಕೆ  ಮುಂದೊಡಿದೆ.

Last Updated : Feb 12, 2018, 02:48 PM IST
ಕಂಬಳಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ title=

ನವದೆಹಲಿ: ಕಂಬಳಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಪೇಟಾ ಅರ್ಜಿಯನ್ನು ಮತ್ತೆ ಸುಪ್ರಿಂಕೋರ್ಟ್ ನಿರಾಕರಿಸಿದ್ದು ಈಗ ಅದರ ವಿಚಾರಣೆಯನ್ನು ಮಾರ್ಚ 14ಕ್ಕೆ  ಮುಂದೊಡಿದೆ.

ಮುಖ್ಯನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ನೇತೃತ್ವದ ತ್ರೀ ಸದಸ್ಯ ಪೀಠದಿಂದ ಅರ್ಜಿಯ ವಿಚಾರಣೆ ನಡೆಯಿತು. ಈ ವಿಚಾರಣೆಯ ವೇಳೆಯಲ್ಲಿ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಕಂಬಳ ಗ್ರಾಮೀಣ ಕ್ರೀಡೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಂತಹ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿದೆ, ಆದ್ದರಿಂದ ಅವರ  ಒಪ್ಪಿಗೆಗಾಗಿ ಸರ್ಕಾರ ಕಾಯುತ್ತಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು. ನಂತರ ಎರಡು ವಾದಗಳನ್ನು ಆಲಿಸಿದ ಸುಪ್ರಿಂಕೋರ್ಟ್ ನ ತ್ರೀಸದಸ್ಯ ಪೀಠ ಮಾರ್ಚ 14 ಕ್ಕೆ ಕಂಬಳದ ವಿಚಾರಣೆಯನ್ನು ಮುಂದೊಡಿದೆ.  

Trending News