ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಷೇರುಪೇಟೆಯಲ್ಲಿ ರಕ್ತದೋಕುಳಿಯಾಗಿದ್ದು, ಒಂದೇ ದಿನ ಹೂಡಿಕೆದಾರರ ಸಾವಿರಾರು ಕೋಟಿ ರೂ. ಸಂಪತ್ತು ಕರಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಏಕೆ ಕುಸಿತವಾಗುತ್ತಿದೆ..? ಷೇರುಪೇಟೆಯ Correction ಪ್ರಾರಂಭವಾಗಿದೆಯೇ..? ಈ ರೀತಿಯ ಹಲವಾರು ಪ್ರಶ್ನೆಗಳು ಹೂಡಿಕೆದಾರರನ್ನು ಕಾಡುತ್ತಿವೆ. ಜಾಗತಿಕ ಮಾರುಕಟ್ಟೆಗಳ ಪೈಕಿ ಅಮೆರಿಕನ್ ಮಾರುಕಟ್ಟೆಗಳು ಸುಮಾರು 6 ಪ್ರತಿಶತದಷ್ಟು ಕುಸಿತ ಕಂಡಿದೆ. ಅದೇ ರೀತಿ ಯುರೋಪಿಯನ್ ಮಾರುಕಟ್ಟೆಗಳಾದ ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್ ಸುಮಾರು 5 ಪ್ರತಿಶತದಷ್ಟು ಕುಸಿತವಾಗಿವೆ.
ಇನ್ನು ಏಷ್ಯನ್ ಮಾರುಕಟ್ಟೆಗಳ ಪೈಕಿ ಭಾರತೀಯ ಷೇರುಪೇಟೆ ಕಳೆದೊಂದು ವಾರದಲ್ಲಿ ನಿಫ್ಟಿ 50 ಸುಮಾರು ಶೇ. 2.92ರಷ್ಟು ಕುಸಿತ ಕಂಡಿದ್ದರೆ, ಸೆನೆಕ್ಸ್ ಶೇ.2.61ರಷ್ಟು ಕುಸಿತ ಕಂಡಿದೆ. ಸೋಮವಾರ ಒಂದೇ ದಿನ ನಿಫ್ಟಿ 50 ಶೇ.1.80ರಷ್ಟು ಕುಸಿತವಾಗಿದ್ದರೆ, ಸೆನೆಕ್ಸ್ ಶೇ.1.64ರಷ್ಟು ಕುಸಿತವಾಗಿದೆ. ಇದಲ್ಲದೆ ಜಪಾನ್ ಮಾರುಕಟ್ಟೆ ಸುಮಾರು ಶೇ.5ರಷ್ಟು, ಹಾಂಗ್ ಕಾಂಗ್ ಶೇ.10ರಷ್ಟು, ಕೊರಿಯಾ ಶೇ.10ರಷ್ಟು, ಫಿಲಿಪೈನ್ಸ್ ಶೇ.5ರಷ್ಟು ಹಾಗೂ ಚೀನಾದ ಮಾರುಕಟ್ಟೆಗಳು ಶೇ.3ರಷ್ಟು ಕುಸಿತ ಕಂಡಿವೆ.
ಇದನ್ನೂ ಓದಿ: Share Market Closing: ಹೂಡಿಕೆದಾರರ ಭಾರಿ ಮಾರಾಟ ಪ್ರಕ್ರಿಯೆಯ ಹಿನ್ನೆಲೆ ಗೋತಾ ಹೊಡೆದ ಷೇರುಪೇಟೆ
ಭಾರತೀಯ ಮಾರುಕಟ್ಟೆಗೆ ಭರವಸೆಯ ಕಿರಣವೆಂದರೆ ಈ ತಿಂಗಳು ಕಚ್ಚಾ ತೈಲವು ಶೇ.10ರಷ್ಟು ಕಡಿಮೆಯಾಗಿದೆ. ಸರಕು ಮಾರುಕಟ್ಟೆ ಬಗ್ಗೆ ಹೇಳುವುದಾದರೆ 2022ರ ಏಪ್ರಿಲ್ನಿಂದ ಇಂದಿನವರೆಗೆ ಚಿನ್ನ ದುರ್ಬಲವಾಗಿ ವಹಿವಾಟು ನಡೆಸುತ್ತಿದೆ. ಈ ತಿಂಗಳಲ್ಲಿಯೇ ಹಳದಿ ಲೋಹ ಶೇ.4ರಷ್ಟು ಕಡಿಮೆಯಾಗಿದೆ. ಏಪ್ರಿಲ್ನಿಂದ ಚಿನ್ನವು ಶೇ.16ರಷ್ಟು ಕಡಿಮೆಯಾಗಿದೆ. ಅದೇ ರೀತಿ 2022ರ ಏಪ್ರಿಲ್ನಿಂದ ಬೆಳ್ಳಿ ಶೇ.26ರಷ್ಟು ಕಡಿಮೆಯಾಗಿದೆ.
ಕ್ರಿಪ್ಟೋ ಕರೆನ್ಸಿ ಅಂತಿಮವಾಗಿ $20,000 Support Level ಅನ್ನು ಬ್ರೇಕ್ ಮಾಡಿದೆ. ಮುಂದೆ ಇದರ ವಹಿವಾಟು ಯಾವ ಮಟ್ಟಕ್ಕೆ ಹೋಗುತ್ತಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಹಾಗಾದ್ರೆ ಈ ಜಾಗತಿ ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವೇನು? ಆರ್ಥಿಕ ಹಿಂಜರಿತ, ಸಾಲದ ಬಡ್ಡಿದರ ಏರಿಕೆ ಮತ್ತು ರಷ್ಯಾ-ಉಕ್ರೇನ್ ಯುದ್ಧ ಪರಿಸ್ಥಿತಿಯೇ ಇದಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಡೀ ಜಾಗತಿಕ ಮಾರುಕಟ್ಟೆ ವಿಶೇಷವಾಗಿ ಯುರೋಪಿಯನ್ ಮಾರುಕಟ್ಟೆ ಮತ್ತು ಭಾರತೀಯ ಮಾರುಕಟ್ಟೆ, ಅಮೆರಿಕ ತೀವ್ರ ಹಣದುಬ್ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪರಿಸ್ಥಿತಿಯು ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಕಳೆದ 1 ದಶಕದ ವಿತ್ತೀಯ ನೀತಿ ಮತ್ತು ಕೋವಿಡ್ ಸಾಂಕ್ರಾಮಿಕದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಕರೆನ್ಸಿ ಮಾರುಕಟ್ಟೆಗಳು ಮತ್ತು ಬಾಂಡ್ ಮಾರುಕಟ್ಟೆಗಳು ಬಿಸಿ ಎದುರಿಸುತ್ತಿವೆ.
ಇದನ್ನೂ ಓದಿ: Car Buying Tips: ಕಾರು ಖರೀದಿಸಲು ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ
ಪ್ರಪಂಚದಾದ್ಯಂತ Negative ಸೆಂಟಿಮೆಂಟ್ ಇರುವುದರಿಂದ ಹೂಡಿಕೆದಾರರು ತುಸು ಎಚ್ಚರಿಕೆ ವಹಿಸುವುದು ಸೂಕ್ತವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗುಣಮಟ್ಟದ ಸ್ಟಾಕ್ಗಳನ್ನು ಖರೀದಿಸಲು ಉತ್ತಮ ರಿಯಾಯಿತಿ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ತಮ್ಮ ಬಳಿ ದುಡ್ಡು ಇಟ್ಟುಕೊಂಡು ಕಾಯಿರಿ ಎಂದು ಸಲಹೆ ನೀಡಿದ್ದಾರೆ.
Sagar U.S, SVNK College of Commerce & Management
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.