SSLC exam 2021 : SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ 'ಪ್ರಶ್ನೆಪತ್ರಿಕೆ' ಪ್ರಕಟ : ಇಲ್ಲಿದೆ ಡೌನ್ ಲೋಡ್ ಮಾಡುವ ವಿಧಾನ!

ಪ್ರಸ್ತುತ ಪರೀಕ್ಷಾ ವಿಧಾನವನ್ನು ಸರಳೀಕರಿಸಿ ಎರಡು ದಿನಗಳಿಗೆ ಪರೀಕ್ಷೆಯನ್ನು ಸೀಮಿತಗೊಳಿಸಿ, ಬಹು ಆಯ್ಕೆ ಪ್ರಶ್ನೆ ಮಾದರಿಯಲ್ಲಿ ವಿಷಯವಾರು ಗರಿಷ್ಠ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ.

Last Updated : Jun 16, 2021, 02:36 PM IST
  • ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ
  • ಪ್ರಸ್ತುತ ಪರೀಕ್ಷಾ ವಿಧಾನವನ್ನು ಸರಳೀಕರಿಸಿ ಎರಡು ದಿನಗಳಿಗೆ ಪರೀಕ್ಷೆಯನ್ನು ಸೀಮಿತಗೊಳಿಸಿ
SSLC exam 2021 : SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ 'ಪ್ರಶ್ನೆಪತ್ರಿಕೆ' ಪ್ರಕಟ : ಇಲ್ಲಿದೆ ಡೌನ್ ಲೋಡ್ ಮಾಡುವ ವಿಧಾನ! title=

ಬೆಂಗಳೂರು : ಜುಲೈ 2021ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆಗಳನ್ನು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾಹಿತಿ ಬಿಡುಗಡೆ ಮಾಡಿದ್ದು, ಪ್ರಸಕ್ತ ವರ್ಷ ಕೋವಿಡ್-19 ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ, ಜೂನ್ 2021ರಲ್ಲಿ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಪರೀಕ್ಷಾ ವಿಧಾನವನ್ನು ಸರಳೀಕರಿಸಿ ಎರಡು ದಿನಗಳಿಗೆ ಪರೀಕ್ಷೆಯನ್ನು ಸೀಮಿತಗೊಳಿಸಿ, ಬಹು ಆಯ್ಕೆ ಪ್ರಶ್ನೆ (Multiple Choice Question Based) ಮಾದರಿಯಲ್ಲಿ ವಿಷಯವಾರು ಗರಿಷ್ಠ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ.

ಇದನ್ನೂ ಓದಿ : e-Sahamati App : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 'ಗುಡ್ ನ್ಯೂಸ್'!

ಅದರ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ(Students) ಮತ್ತು ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಶೇಡ್ ಮಾಡುವ ಓಎಂಆರ್ ಗಳ ಮಾದರಿಯನ್ನು ಮಂಡಳಿಯ http://sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ.\

ಇದನ್ನೂ ಓದಿ : Heavy Rain in Karnataka : ಮುಂಗಾರು ಆರ್ಭಟಕ್ಕೆ ರಾಜ್ಯ ತತ್ತರ : ಜೂ.18 ರವರೆಗೂ ಭಾರೀ ಮಳೆ! 

ಈ ಬಗ್ಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಸದರಿ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್(OMR) ಗಳ ಮಾದರಿಯನ್ನು ಡೌನ್ ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುವಾಗುವಂತೆ ಕ್ರಮವಹಿಸಲು ಸೂಚಿಸಿದೆ. ಉಳಿದಂತೆ ಭಾಷಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂಬುದಾಗಿ ತಿಳಿಸಿದೆ.

ಇದನ್ನೂ ಓದಿ : Second PUC Result 2021 : ದ್ವಿತೀಯ PUC ಫಲಿತಾಂಶಕ್ಕೆ 'ರಾಜ್ಯ ಹೈಕೋರ್ಟ್' ತಡೆ!

ಮಾದರಿ ಪ್ರಶ್ನೆಪತ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳೋದು ಹೇಗೆ?

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board)ಯ ಜಾಲತಾಣ http://sslc.karnataka.gov.in ಗೆ ಭೇಟಿ ನೀಡಬೇಕು. ಇಲ್ಲಿ Documents ಎನ್ನುವಲ್ಲಿ ಎಸ್‌ಎಸ್‌ಎಲ್‌ಸಿ ಸೆಲೆಕ್ಟ್ ಮಾಡಿಕೊಳ್ಳಿ ಆಮೇಲೆ Question Papers ಮೇಲೆ Model Question Papers ಓಪನ್ ಆಗಲಿದೆ. ಅದರಲ್ಲಿ MCQ Model Question Papers ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Complaint to ED: ಕೋವಿಡ್ ನಿರ್ವಹಣೆ ನಡುವೆ ಸಿಎಂ ಬಿಎಸ್‌ವೈಗೆ ಎದುರಾಗಿದೆ ಮತ್ತೊಂದು ಸಂಕಷ್ಟ!

ಇದಲ್ಲದೇ ನೇರವಾಗಿ https://sslc.karnataka.gov.in/new-page/SSLCMainExam2021Modelpapers(Multiple%20Choice%20Questions%20OMRbased)/kn# ಈ ಲಿಂಕ್ ಕ್ಲಿಕ್ ಮಾಡುವ ಮೂಲಕವೂ, ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2021ರ ಮಾದರಿ ಪ್ರಶ್ನೆಪತ್ರಿಕೆ (ಬಹು ಆಯ್ಕೆ ಪ್ರಶ್ನೆಗಳು - ಓಎ ಆರ್ ಆಧಾರಿತ)ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News