Special Train: ಅ.22, 29ರಂದು ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅ.22 ಹಾಗೂ ಅ.29ರಂದು ಬೆಂಗಳೂರು-ಕಲಬುರಗಿ ಮಧ್ಯೆ ವಿಶೇಷ ಓಡಿಸಲು ನಿರ್ಧರಿಸಿದೆ.

Written by - Prashobh Devanahalli | Edited by - Puttaraj K Alur | Last Updated : Oct 20, 2022, 04:18 PM IST
  • ದೀಪಾವಳಿ ಹಬ್ಬಕ್ಕೆ ರೈಲ್ವೆಗಳಲ್ಲಿ ಪ್ರಯಾಣ ದಟ್ಟಣೆ ಸಾಧ‍್ಯತೆ
  • ಬೆಂಗಳೂರು-ಕಲಬುರಗಿ ನಡುವೆ ಹಬ್ಬದ ವಿಶೇಷ ರೈಲು ಸಂಚಾರ
  • ದೀಪಾವಳಿಗೆ ಹಬ್ಬಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ ನೈರುತ್ಯ ರೈಲ್ವೆ
Special Train: ಅ.22, 29ರಂದು ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು title=
ಹಬ್ಬದ ವಿಶೇಷ ರೈಲು ಸಂಚಾರ

ಕಲಬುರಗಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅ.22 ಹಾಗೂ ಅ.29ರಂದು ಬೆಂಗಳೂರು-ಕಲಬುರಗಿ ಮಧ್ಯೆ ವಿಶೇಷ (06557-06558) ಓಡಿಸಲು ನಿರ್ಧರಿಸಿದೆ.

ಇದನ್ನೂ ಓದಿ: Dhanteras 2022: ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಮಾರುತಿ ಆಲ್ಟೊ CNG ಕಾರು..!

ಅ.22 ಹಾಗೂ 29ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡಲಿರುವ ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ ಮೂಲಕ ರಾತ್ರಿ 11ಕ್ಕೆ ಕಲಬುರಗಿ ತಲುಪಲಿದೆ.

ಇದನ್ನೂ ಓದಿ: PF ಖಾತೆದಾರರಿಗೆ ಸಿಹಿ ಸುದ್ದಿ : ಸರ್ಕಾರದಿಂದ ನಿಮ್ಮ ಖಾತೆಗೆ ಬರಲಿದೆ ₹81,000

ಅಂದು ರಾತ್ರಿ 11.30ಕ್ಕೆ ಕಲಬುರಗಿಯಿಂದ ಹೊರಡಲಿರುವ ರೈಲು ಇದೇ ಮಾರ್ಗವಾಗಿ ಬೆಳಗ್ಗೆ 11ಕ್ಕೆ ಬೆಂಗಳೂರು ತಲುಪಲಿದೆ ಎಂದು ವರದಿಯಾಗಿದೆ. ದೀಪಾವಳಿ ಹಬ್ಬಕ್ಕೆ ಲಕ್ಷಾಂತರ ಜನರು ತಮ್ಮ ತಮ್ಮ ಊರುಗಳಿಗೆ ರೈಲಿನ ಮೂಲಕ ಪ್ರಯಾಣಿಸಲಿದ್ದಾರೆ. ಹೀಗಾಗಿ ರೈಲುಗಳಲ್ಲಿ ಸಂಚಾರ ದಟ್ಟನೆ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೈರುತ್ಯ ರೈಲ್ವೆ ವಿಭಾಗವು ಹಬ್ಬಕ್ಕೆ ವಿಶೇಷ ರೈಲು ಬಿಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News