ಸಮುದ್ರದಲ್ಲಿ ದೋಣಿ ಮುಳುಗಿ 16 ಮಂದಿ ಸಾವು

ಕಾರವಾರದಿಂದ ಸುಮಾರು 6 ಕಿಲೋಮೀಟರ್ ದೂರವಿರುವ ಕೂರ್ಮಗಡ ದ್ವೀಪದಲ್ಲಿ ನಡೆಯುತ್ತಿರುವ ನರಸಿಂಹಸ್ವಾಮಿ ಜಾತ್ರೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. 

Last Updated : Jan 21, 2019, 07:03 PM IST
ಸಮುದ್ರದಲ್ಲಿ ದೋಣಿ ಮುಳುಗಿ 16 ಮಂದಿ ಸಾವು title=
ಸಾಂದರ್ಭಿಕ ಚಿತ್ರ

ಕಾರವಾರ: ಪಾತಿದೋಣಿಯೊಂದು ಮುಗುಚಿದ ಪರಿಣಾಮ 16 ಪ್ರಯಾಣಿಕರು ಮೃತಪಟ್ಟ ಘಟನೆ ಕಾರವಾರದ ಕೊಡಿಭಾಗ ಸಮುದ್ರ ಮಧ್ಯದಲ್ಲಿ ಸೋಮವಾರ ನಡೆದಿದೆ. 

ಕಾರವಾರದಿಂದ ಸುಮಾರು 6 ಕಿಲೋಮೀಟರ್ ದೂರವಿರುವ ಕೂರ್ಮಗಡ ದ್ವೀಪದಲ್ಲಿ ನಡೆಯುತ್ತಿರುವ ನರಸಿಂಹಸ್ವಾಮಿ ಜಾತ್ರೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ ಒಟ್ಟು 24 ಪ್ರಯಾಣಿಕರಿದ್ದ ಎನ್ನಲಾಗಿದ್ದು, 16 ಮೃತ ದೇಹಗಳನ್ನು ಹೊರತೆಗೆಯಲಾಗಿದೆ 

ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ, ಕಾರ್ಯಾಚರಣೆ ಮುಂದುವರೆಸಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಶೋಧಕಾರ್ಯ ನಿಧಾನವಾಗಿ ಸಾಗಿದೆ. ಕರಾವಳಿ ಕಾವಲು ಪಡೆ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Trending News