'ನಡೆದಾಡುವ ದೇವರು' ಇನ್ನಿಲ್ಲ, ನಾಳೆ ಸಂಜೆ 4:30 ಕ್ಕೆ ಕ್ರಿಯಾ ಸಮಾಧಿ

ಇಂದು ಬೆಳಿಗ್ಗೆ 11:44ಕ್ಕೆ ಶಿವೈಕ್ಯರಾದ ಶ್ರೀಗಳು

Last Updated : Jan 21, 2019, 03:13 PM IST
'ನಡೆದಾಡುವ ದೇವರು' ಇನ್ನಿಲ್ಲ, ನಾಳೆ ಸಂಜೆ 4:30 ಕ್ಕೆ ಕ್ರಿಯಾ ಸಮಾಧಿ title=

ತುಮಕೂರು: ನಡೆದಾಡುವ ದೇವರೇ ಎಂದೇ ಕರೆಸಿಕೊಳ್ಳುವ ತುಮಕೂರು ಸಿದ್ಧಗಂಗಾ ಮಠದ 111 ವರ್ಷದ ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಇಂದು 11.45ಕ್ಕೆ ಶಿವೈಕ್ಯರಾಗಿದ್ದಾರೆ. 

ತ್ರಿವಿಧ (ಅನ್ನ, ಅಕ್ಷರ,ಜ್ಞಾನ) ದಾಸೋಹಿ, ಕಾಯಕ ಯೋಗಿ, ಕರ್ನಾಟಕ ರತ್ನ ಡಾ|| ಶ್ರೀ ಶ್ರೀ. ಶಿವಕುಮಾರ ಮಹಾಸ್ವಾಮಿ ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿ, 12ನೇ ಶತಮಾನದ ಯುಗಪುರುಷ, ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದ ಶ್ರೀಗಳು, ಸಿದ್ದಗಂಗಾ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠವನ್ನು ಮುನ್ನೆಡೆಸಿದ್ದರು.

ಶ್ರೀ ಮಠವು ಯಾವುದೋ ಒಂದು ಜಾತಿಗೆ, ಪಂಥಕ್ಕೆ, ಧರ್ಮಕ್ಕೆ ಸೀಮಿತವಾಗದೇ  ಎಲ್ಲಾ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ಪರಮಪೂಜ್ಯರು ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿದವರಾಗಿದ್ದರು.
ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಶ್ರೀ ಗಳು ಕಾರಣವಾಗಿದ್ದರು.  ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನ್ನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು. 

Trending News