ಮರು ಜೀವ ಪಡೆಯಿತ್ತಿರೋ 2000 ವರ್ಷದ ಹುಣಸೆ ಮರ...!

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಇದ್ದಕ್ಕಿಂದ ಮೂರು ಮರಗಳಲ್ಲಿ ಒಂದು  ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 13, 2023, 04:08 PM IST
  • ಜುಲೈ 7 ರಂದು ಧರೆಗುರುಳಿದ್ದ ಐತಿಹಾಸಿಕ ಸವಣೂರಿನ ದೊಡ್ಡ ಹುಣಸೆಮರ
  • ಮತ್ತೆ ಮರವನ್ನ ನೆಟ್ಟ, ಅರಣ್ಯ ಇಲಾಖೆ ಹಾಗೂ ಕೃಷಿ ವಿಜ್ಣಾನಿಗಳು
  • ಜೆಸಿಬಿ, ಕ್ರೇನ್ ಬಳಸಿ ಮರವನ್ನ ನೆಟ್ಟ ಅಧಿಕಾರಿಗಳು ಜನರಲ್ಲಿ ಸಂಭ್ರಮ
ಮರು ಜೀವ ಪಡೆಯಿತ್ತಿರೋ 2000 ವರ್ಷದ ಹುಣಸೆ ಮರ...! title=

ಹುಣಸೆ ಮರಕ್ಕೆ ಮರುಜೀವ: ಅನಾರೋಗ್ಯಕ್ಕೆ ತುತ್ತಾದ ಮನುಷ್ಯ, ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಸರ್ವೆ ಸಾಮಾನ್ಯ. ಆದರೆ, ನೆಲಕ್ಕುರುಳಿದ ಮರಕ್ಕೆ ಟ್ರೀಟ್ ಮೆಂಟ್ ಮಾಡಿ ಮತ್ತೆ  ಮೊದಲಿದ್ದ ಜಾಗದಲ್ಲಿ ಈಗ ನೆಡಲಾಗಿದೆ. ಹಾಗಾದ್ರೆ ಯಾವುದು ಆ ಮರ? ಯಾಕೆ ಮತ್ತೊಮ್ಮೆ ಮರವನ್ನ ನೆಡಲಾಗಿದೆ. ಮರ ನೆಡುವ ಪ್ರಕ್ರಿಯೆ ಹೇಗಿತ್ತು ಎನ್ನುವ ಕುರಿತು ಇಲ್ಲಿದೆ ಒಂದು ವಿಶೇಷ ವರದಿ... 

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಇದ್ದಕ್ಕಿಂದ ಮೂರು ಮರಗಳಲ್ಲಿ ಒಂದು  ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ. 18 ಮೀಟರ್ ಎತ್ತರ 12 ಮೀಟರ್ ಅಗಲವಾಗಿದ್ದ ಈ ಮರ ಬೀಳುತ್ತಿದ್ದಂತೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಕಳೆದೊಂದು ವಾರದಿಂದ ಮರವನ್ನ  ಮತ್ತೆ ನೆಡುವ ಕಾರ್ಯ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳ ತಂಡ ಸತತವಾಗಿ   ಪರಿಶ್ರಮ ಹಾಕಿ ಮರವನ್ನ ಅದೆ ಸ್ಥಳದಲ್ಲಿ ನೆಟ್ಟಿದ್ದಾರೆ.

ಇದನ್ನೂ ಓದಿ- ಓಲಾ ಊಬರ್‌ಗೆ ಸೆಡ್ಡು ಹೊಡೆದ‌ ನಮ್ಮ ಯಾತ್ರಿ ಆಟೋ ಆ್ಯಪ್

ಮರದ ಬುಡದಲ್ಲಿ ಬೇರುಗಳು ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೆ ಕಾರಣಕ್ಕೆ ಮರದ ಬುಡದಲ್ಲಿ ಕೊಳೆತ ಭಾಗವನ್ನ ಸ್ವಚ್ಚ ಮಾಡಿ ರಾಸಾಯನಿಕಗಳನ್ನ ಸಿಂಪಡಣೆ ಮಾಡಲಾಗಿದೆ. ಭೂಮಿಯಲ್ಲಿ ತೊಡಿರುವ ಗುಂಡಿಯಲ್ಲಿಯು ರಾಸಾಯನಿಕಗಳನ್ನ ಹಾಕಲಾಗಿದೆ. ಮರದ ತೊಂಗೆಗಳನ್ನ ಕತ್ತರಿಸಿ ಸಗಣಿಯನ್ನ ಸಿಂಪಡಣೆ ಮಾಡಿ ಟ್ರೀಟ್ ಮೆಂಟ್ ಮಾಡಲಾಗಿದೆ. ಇದೆಲ್ಲ ಆದ ಬಳಿಕ ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನ ಬಳಸಿಕೊಂಡು ಮರವನ್ನ ಅದೆ ಸ್ಥಳದಲ್ಲಿ ನೆಡಲಾಗಿದೆ.

ಇದನ್ನೂ ಓದಿ- Farming Tips : ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಭಾದೆಗೆ ಇಲ್ಲಿದೆ ಪರಿಹಾರ

ಕಳೆದ ವಾರದ ಬಿದ್ದಿದ್ದ ಸವಣೂರಿನ ದೊಡ್ಡ ಹುಣಸೆ ಮರವನ್ನ ಮತ್ತೆ ನೆಡಲಾಗಿದೆ.  ಮರವನ್ನ ನೆಡುವಲ್ಲಿ ಹಗಲಿರುಳು ಶ್ರಮಿಸಿದ ಅರಣ್ಯ ಇಲಾಖೆ ಹಾಗೂ ಕೃಷಿ  ವಿಜ್ಣಾನಿಗಳಿಗೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಅಭಿನಂಧನೆ ಸಲ್ಲಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News