ಸ್ಯಾಂಡಲ್‌ವುಡ್ ಡ್ರಗ್ಸ್ ಧಂಧೆ: ಸೆಲಬ್ರಿಟಿಗಳು ಮಾತ್ರವಲ್ಲ, ರಾಜಕಾರಣಿಗಳ ಮಕ್ಕಳ ಲಿಸ್ಟ್ ಕೂಡ ರೆಡಿ

ಈ ನಡುವೆ ಸಿಸಿಬಿ ಪೊಲೀಸರು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ಕಾರ್ತಿಕ್ ರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Last Updated : Sep 4, 2020, 11:20 AM IST
  • ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಮತ್ತು ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸಿರುವ ಬೃಹತ್ ಡ್ರಗ್ಸ್ ಮಾಫಿಯಾ
  • ಡ್ರಗ್ಸ್ ಮಾಫಿಯಾದಲ್ಲಿ ಈಗ ರಾಜಕಾರಣಿಗಳ ಮಕ್ಕಳು ಕೂಡ ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ
  • ಕಾರ್ತಿಕ್ ರಾಜ್ ಮತ್ತು ರವಿಶಂಕರ್ ನೀಡಿರುವ ಮಾಹಿತಿಗಳನ್ನು ಅಧರಿಸಿ ಸಿಸಿಬಿ ಪೊಲೀಸರು ಹತ್ತು ಮಂದಿ ರಾಜಕಾರಣಿಗಳ ಮಕ್ಕಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ
ಸ್ಯಾಂಡಲ್‌ವುಡ್ ಡ್ರಗ್ಸ್ ಧಂಧೆ: ಸೆಲಬ್ರಿಟಿಗಳು ಮಾತ್ರವಲ್ಲ, ರಾಜಕಾರಣಿಗಳ ಮಕ್ಕಳ ಲಿಸ್ಟ್ ಕೂಡ ರೆಡಿ title=

ಬೆಂಗಳೂರು: ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಮತ್ತು ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸಿರುವ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ‌ (Drugs Mafia) ಈಗ ರಾಜಕಾರಣಿಗಳ ಮಕ್ಕಳು ಕೂಡ ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಗುತ್ತಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಮೊಟ್ಟ ಮೊದಲಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು 'ಕನ್ನಡ ಚಿತ್ರರಂಗದ 15 ಮಂದಿ ನಟ-ನಟಿಯರು ಭಾಗಿಯಾಗಿದ್ದಾರೆ' ಎಂಬ ಮಾಹಿತಿ ನೀಡಿರುವುದಾಗಿ ತಿಳಿದುಬಂತು. ಆ ಸುದ್ದಿ ಬಂದಿದ್ದೇ ತಡ ಕನ್ನಡ ಚಿತ್ರರಂಗದಲ್ಲಿ ಸಂಚಲನ‌ ಶುರುವಾಗಿತ್ತು. ನಂತರ ಚಿತ್ರನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದರು. ಇದಲ್ಲದೆ ಸಂಜನಾ (Sanjana) ಮತ್ತು ಶರ್ಮಿಳಾ ಮಾಂಡ್ರೆ (Sharmila Mandre) ಅವರಿಗೂ ಶೀಘ್ರವೇ ನೊಟೀಸ್ ನೀಡುತ್ತಾರೆ ಎನ್ನಲಾಗುತ್ತಿದೆ.

ಈ ನಡುವೆ ಸಿಸಿಬಿ ಪೊಲೀಸರು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ಕಾರ್ತಿಕ್ ರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರೂ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಹೈ ಪ್ರೊಪೈಲ್ ಪಾರ್ಟಿಗಳ ವಿವರಗಳನ್ನು ನೀಡಿದ್ದಾರೆ. ಆ ಪಾರ್ಟಿಗಳಲ್ಲಿ ಭಾಗಿಯಾಗಿದ್ದವರ ವಿವರಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ನಾನು ಮತ್ತು ರಾಗಿಣಿ ಲೀವಿಂಗ್ ಟುಗೆದರ್ ನಲ್ಲಿದ್ದೇವೆ: ರವಿಶಂಕರ್

ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಮತ್ತು ರಾಗಿಣಿ ದ್ವಿವೇದಿ ಗೆಳೆಯ ರವಿಶಂಕರ್ ಇಬ್ಬರು ನೀಡಿರುವ ವ್ಯಕ್ತಿಗಳ ವಿವರದಲ್ಲಿ ಇನ್ನೊಂದಷ್ಟು ಮಂದಿ ಸೆಲಬ್ರಿಟಿಗಳು ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೂಡ ಇದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬರುತ್ತಿದೆ.

ಕಾರ್ತಿಕ್ ರಾಜ್ ಮತ್ತು ರವಿಶಂಕರ್ ನೀಡಿರುವ ಮಾಹಿತಿಗಳನ್ನು  ಅಧರಿಸಿ ಸಿಸಿಬಿ ಪೊಲೀಸರು ಹತ್ತು ಮಂದಿ ರಾಜಕಾರಣಿಗಳ ಮಕ್ಕಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಆದುದರಿಂದ ಶೀಘ್ರದಲ್ಲೆ  ರಾಜಕಾರಣಿಗಳ ಮಕ್ಕಳಿಗೂ ಬೃಹತ್ ಡ್ರಗ್ಸ್ ಮಾಫಿಯಾ ಕಂಟಕ ಸುತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ

ರಾಜಕಾರಣಿಗಳ ಮಕ್ಕಳು ನಟ-ನಟಿಯರ ಜೊತೆ ಮಾದಕ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಜೊತೆಯಲ್ಲಿ ಮದ್ಯ ಮತ್ತು ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬೆಲ್ಲಾ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆಹಾಕಿದ್ದಾರೆ. ಶೀಘ್ರವೇ ರಾಜಕಾರಣಿಗಳ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡುವ ಸಾಧ್ಯತೆ ಇದೆ.
 

Trending News