Robbery: ಸಿಗರೇಟ್‌ ಶೋಕಿಗಾಗಿ ಮಾಜಿ ಸಿಎಂ ಮನೆ ಬಳಿ ಕಳ್ಳತನಕ್ಕೆ ಯತ್ನ: ಓರ್ವ ಬಂಧನ

ಇಂದಿರಾನಗರದಿಂದ ಕದ್ದ ಬೈಕಿನಲ್ಲಿ ಬಂದ ಆರೋಪಿಗಳು ಸಿಗರೇಟ್ ಶೋಕಿಗೆ ಹಣ ಹೊಂದಿಸಲು ಕೆಲ ಅಂಗಡಿಗಳಲ್ಲಿ ಲೂಟಿ ಮಾಡಲು ಯತ್ನಿಸಿದ್ದಾರೆ. ಅಂತೆಯೇ ಆರ್‌ಎಂವಿ 2ನೇ ಹಂತದ ಸ್ಟಾರ್ ಬಕ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತೆರೆದಿದ್ದರಾದರೂ ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದಾರೆ. 

Written by - Zee Kannada News Desk | Last Updated : Apr 6, 2022, 10:36 AM IST
  • ಸಿಗರೇಟ್‌ ಶೋಕಿಗಾಗಿ ಮಾಜಿ ಸಿಎಂ ಮನೆ ಬಳಿ ಕಳ್ಳತನಕ್ಕೆ ಯತ್ನ
  • ಪೊಲೀಸರ ಅತಿಥಿಯಾದ ಓರ್ವ ಆರೋಪಿ
  • ಸದಾಶಿವ ನಗರ ಪೊಲೀಸರಿಂದ ಆರೋಪಿಯ ತೀವ್ರ ವಿಚಾರಣೆ
Robbery: ಸಿಗರೇಟ್‌ ಶೋಕಿಗಾಗಿ ಮಾಜಿ ಸಿಎಂ ಮನೆ ಬಳಿ ಕಳ್ಳತನಕ್ಕೆ ಯತ್ನ: ಓರ್ವ ಬಂಧನ title=
Robbery

ಬೆಂಗಳೂರು : ಸಿಗರೇಟ್‌ ಶೋಕಿಗಾಗಿ ಮಾಜಿ ಸಿಎಂ (Ex-Chief Minister)ಒಬ್ಬರ ಮನೆ ಸಮೀಪದಲ್ಲೇ  ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಇದೀಗ ಗ್ಯಾಂಗ್‌ನಲ್ಲಿದ್ದ ಓರ್ವ ಆರೋಪಿಯಬನ್ನು ಸದಾಶಿವನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಇದನ್ನು ಓದಿ: Viral Video: ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೀತು ಬೀದಿಕಾಳಗ..!

ರೋಹಿತ್ ಗಿರಿ ಬಂಧಿತ ಆರೋಪಿ. ಇಂದಿರಾನಗರದಿಂದ ಕದ್ದ ಬೈಕಿನಲ್ಲಿ ಬಂದ ಆರೋಪಿಗಳು ಗುಂಪು ಸಿಗರೇಟ್ ಶೋಕಿಗೆ ಹಣ ಹೊಂದಿಸಲು ಕೆಲ ಅಂಗಡಿಗಳಲ್ಲಿ ಲೂಟಿ ಮಾಡಲು ಯತ್ನಿಸಿದ್ದಾರೆ. ಅಂತೆಯೇ ಆರ್‌ಎಂವಿ 2ನೇ ಹಂತದ ಸ್ಟಾರ್ ಬಕ್ಸ್ ಶಾಪ್(Star Bucks)​ಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತೆರೆದಿದ್ದರಾದರೂ ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ತೆರಳಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇದನ್ನು ಓದಿ: KGF 2: ತೂಫಾನ್ ಬಳಿಕ ರಿಲೀಸ್‌ ಆಗ್ತಿದೆ ಮತ್ತೊಂದು ಲಿರಿಕಲ್‌ ಸಾಂಗ್‌!

ಸದ್ಯ ಸದಾಶಿವನಗರ ಪೊಲೀಸರು (Police) ಗ್ಯಾಂಗ್‌ನಲ್ಲಿದ್ದ ಪ್ರಮುಖ ಆರೋಪಿ ರೋಹಿತ್‌ ಗಿರಿ ಎಂಬಾತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News