BSY Cabinet Expansion : ಕ್ಷಣ ಕ್ಷಣದ ಮಾಹಿತಿ..! ಪದವಿ ಸಿಗದವರ ಪರಿತಾಪ ಹೀಗಿತ್ತು..!

ಮಂತ್ರಿ ಪದವಿ ಸಿಗದವರ ಪರಿತಾಪ ಏನು..? ಕ್ಯಾಬಿನೆಟ್ ಮಿಸ್ ಮಾಡಿಕೊಂಡ ರೇಣುಕಾಚಾರ್ಯ, ಬೋಪಯ್ಯ, ತಿಪ್ಪಾರೆಡ್ಡಿ, ಯತ್ನಾಳ್ ಹೇಳಿದ್ದೇನು..

Written by - Ranjitha R K | Last Updated : Jan 13, 2021, 12:25 PM IST
  • ಸಂಜೆ ಹೊತ್ತಿಗೆ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳ ಸೇರ್ಪಡೆ
  • ಪದವಿ ಸಿಗದ ರೇಣುಕಾಚಾರ್ಯ, ಯತ್ನಾಳ್, ತಿಪ್ಪಾರೆಡ್ಡಿ ಹೇಳಿದ್ದೇನು..?
  • ಅಬಕಾರಿ ಸಚಿವ ಹೆಚ್ ನಾಗೇಶ್ ಜಿದ್ದಿಗೆ ಬೀಳಲು ಕಾರಣಗಳೇನು..?
 BSY Cabinet Expansion : ಕ್ಷಣ ಕ್ಷಣದ ಮಾಹಿತಿ..! ಪದವಿ ಸಿಗದವರ ಪರಿತಾಪ ಹೀಗಿತ್ತು..! title=
ಸಂಜೆ ಹೊತ್ತಿಗೆ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳ ಸೇರ್ಪಡೆ(filephoto)

ಬೆಂಗಳೂರು: ಸಂಕ್ರಾಂತಿ  ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ಕೆಲವರಿಗೆ ಸಿಹಿ, ಇನ್ನು ಕೆಲವರಿಗೆ ಕಹಿ. ಬುಧವಾರ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳು ಸೇರಲಿದ್ದಾರೆ. ಈ ಹೊತ್ತಿನಲ್ಲಿ ಮಂತ್ರಿ ಪದವಿ ಸಿಗದವರ ಪರಿತಾಪ ಏನು..? ಕ್ಯಾಬಿನೆಟ್ ಮಿಸ್ ಮಾಡಿಕೊಂಡ ರೇಣುಕಾಚಾರ್ಯ, ಬೋಪಯ್ಯ, ತಿಪ್ಪಾರೆಡ್ಡಿ, ಯತ್ನಾಳ್ ಹೇಳಿದ್ದೇನು..?ಅಬಕಾರಿ ಸಚಿವ ಹೆಚ್ ನಾಗೇಶ್ ಜಿದ್ದಿಗೆ ಬೀಳಲು ಕಾರಣಗಳೇನು. ಇಲ್ಲಿದೆ  ಕುತೂಹಲಕಾರಿ ಮಾಹಿತಿ

50 ವರ್ಷ ರಾಜಕೀಯ ಮಾಡಿದ್ಧೇ ವೇಸ್ಟ್..
ಯಡಿಯೂರಪ್ಪ (Yadiyurappa) ಕ್ಯಾಬಿನೆಟ್ ಗೆ (Cabinet) ಪ್ರವೇಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ (G H ThippaReddy) ತೀವ್ರ ಹತಾಶೆಯಲ್ಲಿದ್ದಾರೆ.  50 ವರ್ಷ ರಾಜಕೀಯ ಮಾಡಿದ್ದೇನೆ. ಅವೆಲ್ಲಾ ವೇಸ್ಟ್ ಆಗಿದೆ. ಒಂದು ಜನರೇಶನ್ ವ್ಯರ್ಥವಾಗಿ ಹೋಗಿದೆ. ನಮ್ಮ ಭಾಗಕ್ಕೆ ತೀವ್ರಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : Cabinet Crisis : ಸಮಯ ನಿಗದಿಯಾದರೂ ನಿವಾರಣೆಯಾಗದ ಸಮಸ್ಯೆ

‘ ಹಣೆಬರೆಹ ಯಾರಲ್ಲಿ ಹೇಳಿಕೊಳ್ಳಬೇಕು’ :
ಸಿಎಂ ರಾಜಕೀಯ ಕಾರ್ಯದರ್ಶಿ  ರೇಣುಕಾಚಾರ್ಯ (Renukacharya) ಅವರಿಗೂ ಕ್ಯಾಬಿನೆಟ್ ಮಿಸ್ ಆಗಿದೆ. ಸಹಜವಾಗಿ ಆಕ್ರೋಶ ಕಟ್ಟೆ ಒಡೆದಿದೆ.  ನಮ್ಮ ಹಣೆಬರೆಹ ಯಾರಲ್ಲಿ ಹೇಳಿಕೊಳ್ಳಬೇಕು. ನಮ್ಮ ಭಾಗಕ್ಕೆ ಅನ್ಯಾಯವಾಗಿದೆ. ಮಂತ್ರಿ ಪದವಿಗಾಗಿ (Ministry)ಲಾಬಿ ಮಾಡಿಲ್ಲ. ಸೋತಾಗಲೂ 63 ಸಾವಿರ ಮತ ಪಡೆದಿದ್ದೆ. ಬೇಸರವಾಗಿದೆ. ಸಮಯ ಬಂದಾಗ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ

ಕ್ಷೇತ್ರದಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ.:
ಮಾಜಿ ಸ್ಪೀಕರ್ ಕೆ ಜೆ ಬೋಪಯ್ಯ (Bhopaaiha) ಅವರಿಗೂ ತೀವ್ರ ನಿರಾಸೆಯಾಗಿದೆ.   ಆದರೆ, ಆಕ್ರೋಶದ ಪದಗಳನ್ನು ಹೊರಹಾಕಿಲ್ಲ. ಸಹಜವಾಗಿ ನಿರಾಸೆಯಾಗಿದೆ, ಆದರೂ ಕ್ಷೇತ್ರದಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಜ. 16ರಿಂದ 2 ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ Amit Shah

‘ಕರೆನ್ಸಿ ಖಾಲಿ, ಯಾವುದೇ ಕಾಲ್ ಬಂದಿಲ್ಲ’
ಯಡಿಯೂರಪ್ಪ ಟೀಕಾಕಾರರ ಗುಂಪಿನಲ್ಲಿ ಸೇರಿ ಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಮುಖದಲ್ಲೂ ನಿರಾಸೆ ಎದ್ದು ಕಾಣುತ್ತಿದೆ. ನನ್ನ ಕರೆನ್ಸಿ (Currency)ಖಾಲಿ ಆಗಿದೆ. ಬೆಂಗಳೂರಿನಿಂದ ನನಗೆ ಯಾವುದೇ ಕಾಲ್ ಬಂದಿಲ್ಲ. ಬೆಂಗಳೂರಿನಲ್ಲಿ ನನಗೇನೂ ಕೆಲಸವಿಲ್ಲ. ಬೆಂಗಳೂರಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. 

ಜಿದ್ದಿಗೆ ಬಿದ್ದರಾ ಅಬಕಾರಿ ಸಚಿವ..?
ಯಡಿಯೂರಪ್ಪ ಸಂಪುಟದಿಂದ ಅಬಕಾರಿ ಸಚಿವ ಹೆಚ್ ನಾಗೇಶ್ (H Nagesh) ಹೊರಬೀಳುವುದು ಬಹುತೇಕ ಖಚಿತವಾಗಿದೆ. ಆದರೆ, ಖುರ್ಚಿ ಬಿಡಲು ಹೆಚ್ ನಾಗೇಶ್ ಸುತಾರಾಂ ಒಪ್ಪಿಲ್ಲ. ರಾಜೀನಾಮೆ ನೀಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಹಿರಿಯ ಸಚಿವರು ಹೆಚ್ ನಾಗೇಶ್ ಮನವೊಲಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News