ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ

ಯಶವಂತಪುರ, ಯುಬಿಸಿಟಿ, ಶಾಂತಿನಗರ, ಮಲ್ಲೇಶ್ವರಂ, ಎಂಜಿ ರಸ್ತೆ, ಮಾಗಡಿ ರೋಡ್, ವಿಜಯನಗರ ಸೇರಿದಂತೆ ನಗರದೆಲ್ಲೆಡೆ ಧಾರಾಕಾರ ಮಳೆ. 

Last Updated : Sep 25, 2017, 10:45 AM IST
ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಶನಿವಾರ ತುಸುಕಾಲ ಸುರಿದು ಧರೆಗೆ ತಂಪೆರೆದು ಹೋಗಿದ್ದ ವರುಣ ನಿನ್ನೆ ತಡರಾತ್ರಿ 1:30 ರ ಸುಮಾರಿಗೆ ಮತ್ತೆ ಆರ್ಭಟಿಸಲು ಪ್ರಾರಂಭಿಸಿದ್ದಾನೆ. ಕೆಲ ದಿನಗಳಿಂದ ಮಳೆ ಭೀತಿ ಇಲ್ಲದೆ ನಿರಾಳಾಗಿದ್ದ ರಾಜಧಾನಿ ಜನರಿಗೆ ಮತ್ತೆ ವರುಣನ ಭೀತಿ ಆರಂಭವಾಗಿದೆ. 

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಯಶವಂತಪುರ ಯುಬಿಸಿಟಿ, ಶಾಂತಿನಗರ, ಮಲ್ಲೇಶ್ವರಂ, ಎಂಜಿ ರೋಡ್ ಹೀಗೆ ವಿಜಯನಗರ ಸೇರಿದಂತೆ ಎಲ್ಲೆಡೆ ವಾಹನ ಸವಾರರಿಗೆ ತೊಡಕುಂಟು ಮಾಡಿತು. ಶಿವಾನಂದ ಸರ್ಕಲ್ ಡಬ್ಬಲ್ ರೋಡ್ ಸೇರಿದಂತೆ ನಗರದ ಹಲವು ರಸ್ತೆಗಳು ನೀರು ನಿಂತು ಕೆರೆಗಳಂತಾಗಿದ್ದವು. 

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಒಂದೇ ದಿನ ನಾಲ್ವರು ಬಲಿಯಾಗಿದ್ದರು. ಒಂದೇ ಕುಟುಂಬದ ಮೂವರ ದುರಂತ ಸಾವಿಗೆ ಕಾರಣವಾಗಿದ್ದ ಮಳೆ ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದೆ. 

Trending News