ಬೆಂಗಳೂರು : ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಸಿಲುಕಿ ಸಿಐಡಿ ಕಸ್ಟಡಿಯಲ್ಲಿರುವ ಎಡಿಜಿಪಿ ಅಮೃತ್ ಪೌಲ್ ರಾತ್ರಿ ಊಟ ಮಾಡದೆ ರಂಪಾಟ ಮಾಡಿದ್ದಾರೆ. ಅಲ್ಲದೆ, ಸಿಐಡಿ ತನಿಖೆಯಲ್ಲಿ ಏನನ್ನೂ ಹೇಳದೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಪಟ್ಟು ಹಿಡದಿದ್ದಾರೆ.
ಅಮೃತ್ ಪೌಲ್ ಸೆಕ್ಷನ್ 164 ಅಡಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶದ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹಠ ಹಿಡದಿದ್ದಾರೆ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರೆ ಸರ್ಕಾರದ ಸಚಿವರು, ಹಿಂದಿನ ಗೃಹ ಸಚಿವರು, ಮಾಜಿ ಸಿಎಂ ಪುತ್ರನ ಬಣ್ಣ ಬಯಲಾಗಲಿದೆ ಎಂಬ ಭೀತಿ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಶೀಘ್ರದಲ್ಲೇ KSRTC ಬಸ್ ಟಿಕೆಟ್ ದರ ಪರಿಷ್ಕಣೆ ಸಾಧ್ಯತೆ?
ಈ ಬಗ್ಗೆ ಮಾತನಾಡಿರುವ ಅಮೃತ್ ಪೌಲ್, ಸರ್ಕಾರದ ಸಚಿವರು, ಸಿಎಂ ಅವರ ಸಹಕಾರವಿಲ್ಲದೆ ಇದನ್ನೆಲ್ಲಾ ಹೇಗೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಪಿಎಸ್ಐ ಹಗರಣ ಮ್ಯಾಜಿಸ್ಟ್ರೇಟ್ ಮುಂದೆ ಎಡಿಜಿಪಿ ಹೇಳಿಕೆ ದಾಖಲಿಸಿದರೆ ಸರ್ಕಾರದ ಬುಡಕ್ಕೆ ಬರುವ ಸಾಧ್ಯತೆ ಇದೆ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಎಲ್ಲರ ಬಣ್ಣ ಬಯಲು ಮಾಡುತ್ತಾನೆ ಎಂದು ವಾರ್ನಿಂಗ್ ನೀಡಿದ್ದಾರೆ.
ಅಮೃತ್ ಪಾಲ್ ಹಠದಿಂದ ಸರ್ಕಾರಕ್ಕೆ ಗಂಡಾತರ :
ಹಿಂದಿನ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಪುತ್ರ, ಹಿಂದಿನ ಡಿಸಿಎಂ ಅಶ್ವಥ್ ನಾರಾಯಣ್, ನಾಲ್ಕಕ್ಕೂಹೆಚ್ಚು ಸಚಿವರು, ಶಾಸಕರು ಪ್ರಕರಣದಲ್ಲಿ ಸಿಲುಕುವ ಭೀತಿ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಸಂಧಾನಕ್ಕೆಂದು ಕರೆದು ಸಾವಿನ ದಾರಿ ತೋರಿಸಿದ ಹಂತಕರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ