ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಯುವ ದಸರಾ ಉದ್ಘಾಟನೆಗೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರಿಗೆ ಸಂಸದ ಪ್ರತಾಪ್ ಸಿಂಹ ಅವರಿ ರಾಜ್ಯ ಸರ್ಕಾರದ ಪರವಾಗಿ ಶನಿವಾರ ಅಧಿಕೃತ ಆಹ್ವಾನ ನೀಡಿದರು.
ನಾಲ್ಕು ದಿನಗಳ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಮುಖೇನ ಪಿ.ವಿ.ಸಿಂಧು ಅವರನ್ನು ಯುವ ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಬೆನ್ನಲ್ಲೇ ಶನಿವಾರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಅವರು ಸಿ.ವಿ.ಸಿಂಧು ಅವರನ್ನು ಭೇಟಿಯಾಗಿ ಆಹ್ವಾನ ನೀಡಿದರು.
Ecstatic! Myself n @SPmysuru Rishyanth extended the invitation of Hon. @CMofKarnataka to World Champion @Pvsindhu1 for the inauguration of Yuva Dasara! Thanq Damodar, IPS for all the help. We vl be eagerly waiting to receive Sindhu n her family on Oct 1st. Thank u @VSOMANNA_BJP! pic.twitter.com/8htDvcyy51
— Pratap Simha (@mepratap) September 14, 2019
ಇತ್ತೀಚೆಗೆ ನಡೆದ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಿ.ವಿ. ಸಿಂಧು ಅವರು ಅಕ್ಟೋಬರ್ 1ರಂದು ನಡೆಯಲಿರುವ ಯುವ ದಸರಾ 2019ರ ಉದ್ಘಾಟನೆಗೆ ಆಗಮಿಸಲಿದ್ದಾರೆ.