ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದೇನು?

ಬೆಳಗ್ಗೆ ಸೆಂಟ್​ ಜೋಸೆಫ್ ಶಾಲೆಯ ಮತಗಟ್ಟೆಗೆ ಆಗಮಸಿದ ಪ್ರಕಾಶ್ ರೈ, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

Last Updated : Apr 18, 2019, 09:47 AM IST
ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದೇನು? title=

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರಾಜ್ ಇಂದು ನಗರದ ಸೆಂಟ್​ ಜೋಸೆಫ್ ಶಾಲೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. 

ಬೆಳಗ್ಗೆ ಸೆಂಟ್​ ಜೋಸೆಫ್ ಶಾಲೆಯ ಮತಗಟ್ಟೆಗೆ ಆಗಮಸಿದ ಪ್ರಕಾಶ್ ರೈ, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿದ್ಯಾಭ್ಯಾಸ ಮಾಡಿದ್ದ ಶಾಲೆಯಲ್ಲಿಯೇ ಮತದಾನ ಮಾಡಿದ್ದೇನೆ. ವಿದ್ಯಾರ್ಥಿಯಾಗಿದ್ದಾಗ ಈ ಶಾಲೆಯ ವೇದಿಕೆಯಲ್ಲಿ ಓದಲ ಬಾರಿಗೆ ನಾಟಕ ಮಾಡಿದ್ದೆ. ಇದೀಗ ಇದೇ ಶಾಲೆಯಲ್ಲಿ ನನ್ನ ರಾಜಕೀಯದ ಮೊದಲ ಸ್ಪರ್ಧೆಗೆ ಮತದಾನವನ್ನೂ ಮಾಡುತ್ತಿದ್ದೇನೆ. ಈ ವಿಚಾರ ಬಹಳ ಖುಷಿ ತಂದಿದೆ. ಇದು ಪ್ರಜಾತಂತ್ರದ ಹಬ್ಬ ಎಂದು ಪ್ರಕಾಶ್ ರಾಜ್ ಹೇಳಿದರು. 

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಕಾಶ್ ರಾಜ್ ಅದ್ಭುತ ನಟನೂ ಹೌದು. ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಮೂಲತಃ ರಂಗಭೂಮಿ ಕಲಾವಿದರು. ಇದೀಗ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಮೈತ್ರಿ ಅಭ್ಯರ್ಥಿ ರಿಝ್ವಾನ್ ಅರ್ಷದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

Trending News