Salaar Movie : ಶುರುವಾಯ್ತು  'ಸಲಾರ್‌' ಶೂಟಿಂಗ್ : ಮೊದಲ ದಿನವೇ ಪ್ರಶಾಂತ್‌ ನೀಲ್‌ಗೆ ಬಿಗ್ ಶಾಕ್!

'ಕೆಜಿಎಫ್' ಚಾಪ್ಟರ್‌ 2 ಭರ್ಜರಿ ಹಿಟ್‌ ಕಂಡು, ಸಾವಿರ ಕೋಟಿ ಕ್ಲಬ್‌ ಸೇರಿದ ಬಳಿಕ 'ಸಲಾರ್‌' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ನೀಲ್. ಆದರೆ ಹೀಗೆ 'ಸಲಾರ್‌' ಶೂಟಿಂಗ್‌ ಶುರು ಮಾಡಿದ ಮೊದಲ ದಿನವೇ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ‌ ಬಿಗ್ ಶಾಕ್‌ ಸಿಕ್ಕಿದೆ.

Written by - Malathesha M | Last Updated : May 25, 2022, 04:10 PM IST
  • ಜಗತ್ತಿಗೇ ಕನ್ನಡ ಸಿನಿಮಾಗಳ ಖದರ್‌ ತೋರಿಸಿದ 'ಕೆಜಿಎಫ್-2' ನಿರ್ದೇಶಕ ನೀಲ್‌
  • 'ಕೆಜಿಎಫ್' ಚಾಪ್ಟರ್‌ 2 ಭರ್ಜರಿ ಹಿಟ್‌
  • 'ಸಲಾರ್‌' ಶೂಟಿಂಗ್‌ ಶುರು ಮಾಡಿದ ಮೊದಲ ದಿನವೇ ಪ್ರಶಾಂತ್‌ ನೀಲ್‌ ಗೆ‌ ಬಿಗ್ ಶಾಕ್‌
Salaar Movie : ಶುರುವಾಯ್ತು  'ಸಲಾರ್‌' ಶೂಟಿಂಗ್ : ಮೊದಲ ದಿನವೇ ಪ್ರಶಾಂತ್‌ ನೀಲ್‌ಗೆ ಬಿಗ್ ಶಾಕ್! title=

ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದು, ಜಗತ್ತಿಗೇ ಕನ್ನಡ ಸಿನಿಮಾಗಳ ಖದರ್‌ ತೋರಿಸಿದ 'ಕೆಜಿಎಫ್-2' ನಿರ್ದೇಶಕ ನೀಲ್‌ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. 'ಕೆಜಿಎಫ್' ಚಾಪ್ಟರ್‌ 2 ಭರ್ಜರಿ ಹಿಟ್‌ ಕಂಡು, ಸಾವಿರ ಕೋಟಿ ಕ್ಲಬ್‌ ಸೇರಿದ ಬಳಿಕ 'ಸಲಾರ್‌' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ನೀಲ್. ಆದರೆ ಹೀಗೆ 'ಸಲಾರ್‌' ಶೂಟಿಂಗ್‌ ಶುರು ಮಾಡಿದ ಮೊದಲ ದಿನವೇ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ‌ ಬಿಗ್ ಶಾಕ್‌ ಸಿಕ್ಕಿದೆ.

ಅಂದಹಾಗೆ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಅದೆಷ್ಟು ಖಡಕ್‌ ಅಂದ್ರೆ, ಅವರು ತಮ್ಮ ಶೂಟಿಂಗ್‌ ಜಾಗದಿಂದ ಒಂದೇ ಒಂದು ಫೋಟೋ ಕೂಡ ಲೀಕ್‌ ಆಗೋದಕ್ಕೆ ಬಿಡೋದೆ ಇಲ್ಲ. 'ಕೆಜಿಎಫ್' ಶೂಟಿಂಗ್‌ ಸಂದರ್ಭದಲ್ಲೂ ಇದೇ ರೀತಿ ಒಂದು ಫೋಟೋ ಕೂಡ ಅನುಮತಿ ಇಲ್ಲದೆ ಹೊರಗೆ ಹೋಗಲು ಬಿಟ್ಟಿರಲಿಲ್ಲ ಡೈರೆಕ್ಟರ್ ಪ್ರಶಾಂತ್‌ ನೀಲ್‌ ‌ಅವರು. ಆದರೆ 'ಸಲಾರ್‌' ಶೂಟಿಂಗ್‌ ಶುರು ಮಾಡಿದ ಮೊದಲ ದಿನವೇ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ಶಾಕ್‌ ಸಿಕ್ಕಿದ್ದು, 'ಸಲಾರ್‌' ಶೂಟಿಂಗ್‌ ಜಾಗದ ಫೋಟೋ ಒಂದು ಲೀಕ್‌ ಆಗಿದೆ.

ಇದನ್ನೂ ಓದಿ : Wedding Photos : 17 ವರ್ಷ ಲಿವ್ ಇನ್ ನಲ್ಲಿದ್ದು, 54ನೇ ವಯಸ್ಸಿನಲ್ಲಿ ಮದುವೆಯಾದ ಈ ಬಾಲಿವುಡ್ ಜೋಡಿ!

ನೀಲ್‌ಗೆ ಶಾಕ್..!

ಹೌದು, ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಮೇಕಿಂಗ್‌ ವಿಧಾನವೇ ಡಿಫರೆಂಟ್‌. ಹೀಗಾಗಿ ತಮ್ಮ ಸಿನಿಮಾಗಳ ಶೂಟಿಂಗ್‌ ಫೋಟೋಸ್‌ ಲೀಕ್‌ ಆಗೋದಕ್ಕೆ ಪ್ರಶಾಂತ್‌ ನೀಲ್‌ ಬಿಡೋದೆ ಇಲ್ಲ. ಆದರೆ 'ಸಲಾರ್‌' ಶೂಟಿಂಗ್‌ ಫೋಟೋ ಒಂದು ಲೀಕ್‌ ಆಗಿದ್ದು, ಯಂಗ್‌ ರೆಬೆಲ್ ಪ್ರಭಾಸ್‌ ಅವರು ಶೂಟಿಂಗ್‌ನಲ್ಲಿ ಭಾಗವಹಿಸಿರುವ ಚಿತ್ರ ಎಲ್ಲೆಲ್ಲೂ ವೈರಲ್‌ ಆಗುತ್ತಿದೆ. ಇದರ ಜೊತೆಗೆ  'ಸಲಾರ್‌'‌ನ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿವೆ. ಇಷ್ಟುದಿನಗಳ ಕಾಲ 'ಸಲಾರ್‌' ಅಪ್‌ಡೇಟ್‌ಗೆ ಕಾಯುತ್ತಿದ್ದವರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ.

'ಸಲಾರ್‌' ಶೂಟಿಂಗ್‌ ಸ್ಥಳದ ಫೋಟೋ ಲೀಕ್‌ ಆಗಿರುವ ಬಗ್ಗೆ ಇದುವರೆಗೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಸಿನಿಮಾ ತಂಡದಿಂದ ಸಿಕ್ಕಿಲ್ಲ. ಆದರೆ ಪ್ರಭಾಸ್‌ ಅಭಿಮಾನಿಗಳು ಮಾತ್ರ ಈ ಫೋಟೋ ನೋಡಿ ಫುಲ್‌ ಥ್ರಿಲ್‌ ಆಗಿದ್ದು, ಶೂಟಿಂಗ್‌ ಸೆಟ್‌ಗೆ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲದೆ ಸಿನಿಮಾ ಹೇಗಿರಬೇಡ ಅನ್ನೋ ಲೆಕ್ಕಾಚಾರವನ್ನೂ ಅಭಿಮಾನಿಗಳು ಶುರುಮಾಡಿದ್ದಾರೆ. ಒಟ್ಟಾರೆ ಹೇಳೋದಾದ್ರೆ ಪ್ರಶಾಂತ್‌ ನೀಲ್‌ ಅವರ 'ಸಲಾರ್‌' ಸಿನಿಮಾ ಮತ್ತೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡೋ ಮುನ್ಸೂಚನೆ ನೀಡಿದ್ದು, ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ : Aishwarya Rai: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ!!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News