ನವದೆಹಲಿ: ಇತ್ತೀಚಿಗೆ ಗ್ರಾಮ್ಮಿ ಪ್ರಶಸ್ತಿ ಪಡೆದ ಕನ್ನಡಿಗ ರಿಕ್ಕಿ ಕೇಜ್ ಅವರು ಗುರುವಾರದಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
Wow.. speechless! To receive praise from the Hon'ble Prime Minister himself! Thank you @narendramodi ji, I hope I made you proud. You set me on the path of Environmental Consciousness 7 years ago when I won my 1st GRAMMY Award, and here I am today :-) Thanks for your blessings https://t.co/N6krPqVp2G
— Ricky Kej (@rickykej) April 5, 2022
ಈ ಭೇಟಿಯ ನಂತರ ಸ್ವತಃ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ "ಸಂಗೀತದ ಬಗ್ಗೆ ನಿಮ್ಮ ಉತ್ಸಾಹವು ಇನ್ನಷ್ಟು ಬಲಗೊಳ್ಳುತ್ತಿದೆ" ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:Shehbaz Sharif on India: ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಶಹಬಾಜ್ ಷರೀಫ್
Happy to have met you @rickykej! Your passion and enthusiasm towards music keeps getting even stronger. Best wishes for your future endeavours. pic.twitter.com/8kalYNCaK9
— Narendra Modi (@narendramodi) April 14, 2022
ಇದಕ್ಕೆ ಪ್ರತಿಕ್ರಿಯಿಸಿದ ರಿಕ್ಕಿ ಕೇಜ್ ಅವರು "7 ವರ್ಷಗಳ ಹಿಂದೆ ನಾನು ನನ್ನ 1 ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಾಗ ನೀವು ನನ್ನನ್ನು ಪರಿಸರ ಸಂರಕ್ಷಣೆ ಮಾರ್ಗದಲ್ಲಿ ಸಾಗುವಂತೆ ಮಾಡಿದ್ದಿರಿ' ಎಂದು ಅವರು ಪ್ರಧಾನಿ ಮೋದಿಯವರ ಅಭಿನಂದನಾ ಟ್ವೀಟ್‌ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ರಿಕ್ಕಿ ಕೇಜ್ ಅವರು ಇತ್ತೀಚಿಗೆ ಎರಡನೇ ಗ್ರ್ಯಾಮಿಯನ್ನು ಏಪ್ರಿಲ್ 4 ರಂದು ತಮ್ಮ ಆಲ್ಬಮ್ ಡಿವೈನ್ ಟೈಡ್ಸ್‌ಗಾಗಿ ಅತ್ಯುತ್ತಮ ಹೊಸ ಯುಗದ ಆಲ್ಬಂಗಾಗಿ ಗೆದ್ದಿದ್ದರು. ಅವರು ಈ ಹಿಂದೆ ಅತ್ಯುತ್ತಮ ಹೊಸ ಯುಗದ ಆಲ್ಬಮ್ ವಿಭಾಗದಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗಾಗಿ 2015 ರಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.