Pejawar Swamiji : 'ಪೇಜಾವರ ಮಠಕ್ಕೆ ಈ ಜಾಗವನ್ನು ರಾಮಭೂಜ ಎನ್ನುವಂತ ರಾಜರು ದಾನ ಕೊಟ್ಟಿರೋದು'

ಯಾರೇ ಯಾವುದೇ ಹೇಳಿಕೆಯನ್ನು ಕೊಡಬಹುದು. ಆದರೆ, ಅಂತಹ ಹೇಳಿಕೆ ಕೊಡಬೇಕಾದರೆ ಅದಕ್ಕೂ ಮುಂಚೆ ಅದಕ್ಕೆ ಸೂಕ್ತವಾದಂತ ಒಂದು ಆಧಾರ ಕೊಟ್ಟರೆ ಆ ಮಾತಿಗೆ ಬೆಲೆ ಇರುತ್ತದೆ ಎಂದು ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಪೇಜಾವರ ಮಠಕ್ಕೆ ಮುಸ್ಲಿಮರು ಜಾಗ ಕೊಟ್ಟ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

Written by - Channabasava A Kashinakunti | Last Updated : Mar 8, 2023, 03:39 PM IST
  • ಪೇಜಾವರ ಮಠಕ್ಕೆ ಮುಸ್ಲಿಮರು ಜಾಗ ಕೊಟ್ಟ ಹೇಳಿಕೆ ವಿಚಾರ
  • ಒಂದು ಆಧಾರ ಕೊಟ್ಟರೆ ಆ ಮಾತಿಗೆ ಬೆಲೆ ಇರುತ್ತದೆ
  • ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
Pejawar Swamiji : 'ಪೇಜಾವರ ಮಠಕ್ಕೆ ಈ ಜಾಗವನ್ನು ರಾಮಭೂಜ ಎನ್ನುವಂತ ರಾಜರು ದಾನ ಕೊಟ್ಟಿರೋದು' title=

ತುಮಕೂರು : ಯಾರೇ ಯಾವುದೇ ಹೇಳಿಕೆಯನ್ನು ಕೊಡಬಹುದು. ಆದರೆ, ಅಂತಹ ಹೇಳಿಕೆ ಕೊಡಬೇಕಾದರೆ ಅದಕ್ಕೂ ಮುಂಚೆ ಅದಕ್ಕೆ ಸೂಕ್ತವಾದಂತ ಒಂದು ಆಧಾರ ಕೊಟ್ಟರೆ ಆ ಮಾತಿಗೆ ಬೆಲೆ ಇರುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಪೇಜಾವರ ಮಠಕ್ಕೆ ಮುಸ್ಲಿಮರು ಜಾಗ ಕೊಟ್ಟ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪೇಜಾವರ ಶ್ರೀಗಳು, ಆಧಾರ ರಹಿತವಾಗಿ ಏನು ಬೇಕಾದರೂ ಹೇಳಬಹುದು ಆಧಾರ ರಹಿತ ಹೇಳಿಕೆಯನ್ನು ಚರ್ಚೆಗೆ ತೆಗೆದುಕೊಳ್ಳುತ್ತಾರೆ ಎಂದರೆ ಅದು ಅರ್ಥಹೀನ ಎನ್ನುವುದು ನನ್ನ ಭಾವನೆ.  ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣಮಠದ ಸನ್ನಿಧಾನ ಇರಬಹುದು. ಇದಕ್ಕೆ ಜಾಗವನ್ನು ರಾಮಭೂಜ ಎನ್ನುವಂತ ರಾಜರು ದಾನ ಕೊಟ್ಟಿರೋದು. ಇದಕ್ಕೆ ದಾಖಲೆ ಇದೆ, ಶಿಲಾ ಶಾಸನಗಳಿವೆ. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಯುವ ಕಾಂಗ್ರೆಸ್ ಮುಖಂಡ ರೈ ಈ ಹೇಳಿಕೆ ಕೊಟ್ಟಿದ್ದಾರೆ. ಗಂಗಾ ನದಿಯ ತಟದಲ್ಲಿ ತುರುಷ್ಕ ರಾಜ ಮದ್ವಾಚಾರ್ಯರಿಗೆ ಭೂಮಿ ಕೊಟ್ಟಿದ್ದರು. ಅದನ್ನು ತಪ್ಪಾಗಿ ಅರ್ಥೈಸಿ ಕೊಂಡು ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Karnataka bandh : ನಾಳಿನ ರಾಜ್ಯ ಬಂದ್ ಕರೆ ಹಿಂಪಡೆಯಲು ಕಾಂಗ್ರೆಸ್ ನಿರ್ಧಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News