ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!!

ಕೃಷಿ ಇಲಾಖೆ ಸಹಾಯಕ ನಿದೇಶಕ ಪ್ರವೀಣ್‍ಕುಮಾರ್, ತಾಂತ್ರಿಕ ಮತ್ತು ಕೃಷಿ ಅಧಿಕಾರಿ ಸತೀಶ್ ಹಾಗೂ ಡಿ.ಗ್ರೂಪ್ ನೌಕರ ಅರುಣ್ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ 70-80 ಫೈಲ್ ಗಳ ಬಿಲ್ ಪಾಸ್ ಮಾಡದೇ ಪೆಂಡಿಂಗ್ ಇಟ್ಟಿದ್ದ ಈ ಇಬ್ಬರು ಅಧಿಕಾರಿಗಳು 2.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

Written by - Yashaswini V | Last Updated : Apr 6, 2023, 07:59 AM IST
  • ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ 70-80 ಫೈಲ್ ಗಳ ಬಿಲ್ ಪಾಸ್ ಮಾಡದೇ ಪೆಂಡಿಂಗ್ ಇಟ್ಟಿದ್ದ ಈ ಇಬ್ಬರು ಅಧಿಕಾರಿಗಳು
  • ಫೈಲ್ ಬಿಲ್ ಪಾಸ್ ಮಾಡಲು 2.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು
ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!! title=
Lokayukta

ಚಾಮರಾಜನಗರ: 70-80 ಫೈಲ್ ಗಳನ್ನು ಪೆಂಡಿಂಗ್ ಇಟ್ಟು ಲಂಚಕ್ಕೆ ಬೇಡಿಕೆ ಇಟ್ಟ ಕೃಷಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. 

ಕೃಷಿ ಇಲಾಖೆ ಸಹಾಯಕ ನಿದೇಶಕ ಪ್ರವೀಣ್‍ಕುಮಾರ್, ತಾಂತ್ರಿಕ ಮತ್ತು ಕೃಷಿ ಅಧಿಕಾರಿ ಸತೀಶ್ ಹಾಗೂ ಡಿ.ಗ್ರೂಪ್ ನೌಕರ ಅರುಣ್ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ 70-80 ಫೈಲ್ ಗಳ ಬಿಲ್ ಪಾಸ್ ಮಾಡದೇ ಪೆಂಡಿಂಗ್ ಇಟ್ಟಿದ್ದ ಈ ಇಬ್ಬರು ಅಧಿಕಾರಿಗಳು 2.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ- ಲಂಚ ಪ್ರಕರಣ: ಸಮಾಜ ಕಲ್ಯಾಣ ಇಲಾಖೆ ಎಸ್ಡಿಎ ಲೋಕಾಯುಕ್ತ ಬಲೆಗೆ

ಈ ಸಂಬಂಧ ಟ್ರೇಡರ್ಸ್ ಮಾಲೀಕ  ಕುಮಾರಸ್ವಾಮಿ ಲೋಕಾಗೆ ದೂರು ಕೊಟ್ಟು ಕೃಷಿ ಅಧಿಕಾರಿ 1.5 ಲಕ್ಷ, ಸಹಾಯಕ ನಿರ್ದೇಶಕ 1 ಲಕ್ಷ ಹಣ ಲಂಚ ಕೇಳುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದರು.

ದೂರು ಪಡೆದು ಬಲೆ ಬೀಸಿದ ಲೋಕಾಯುಕ್ತ ಪೊಲೀಸರು  ಎರಡೂವರೆ ಲಕ್ಷ ರೂ. ನಗದು ಪಡೆಯುತ್ತಿದ್ದ ವೇಳೆ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ- ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ

ಲೋಕಾಯುಕ್ತ ಪೊಲೀಸರು ಈ ಸಂಬಂಧ ಆರೋಪಿತರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದು ಕೇಸು ದಾಖಲಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News