ಸಮಾವೇಶಕ್ಕೆ ತಕರಾರಿಲ್ಲ, ಬೈಕ್ ರ್ಯಾಲಿಗೆ ಅನುಮತಿಯಿಲ್ಲ- ಸಿಎಂ

ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರಾ? ಬೈಕ್ ರ್ಯಾಲಿ ಮಾಡಲು ಹೊರಟಿದ್ದಾರೆ. ಸಾಮರಸ್ಯ ಕಾಪಾಡುವ ಬದಲು ಹಾಳು ಮಾಡಲು ಹೊರಟಿದ್ದಾರೆ - ಸಿದ್ದರಾಮಯ್ಯ  

Last Updated : Sep 7, 2017, 12:57 PM IST
ಸಮಾವೇಶಕ್ಕೆ ತಕರಾರಿಲ್ಲ, ಬೈಕ್ ರ್ಯಾಲಿಗೆ ಅನುಮತಿಯಿಲ್ಲ- ಸಿಎಂ title=

ಬೆಂಗಳೂರು: ಬಿಜೆಪಿ ಮಂಗಳೂರು ಚಲೋ ಸಮಾವೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಸಮಾವೇಶ ನಡೆಸುವುದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಬೈಕ್ ರ್ಯಾಲಿ ನಡೆಸಲು ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ.

ಅನುಮತಿ ಕೊಟ್ಟಿರುವ ಸ್ಥಳದಲ್ಲಿ ಸಭೆ ನಡೆಸದೆ ಬೇರೆ ಸ್ಥಳದಲ್ಲಿ ಸಭೆ ನಡೆಸಲು ತೀರ್ಮಾನಿಸಿರುವ ಬಿಜೆಪಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಪಾದಯಾತ್ರೆ ಮಾಡುತ್ತಿದ್ದಾರಾ? ಬೈಕ್ ರ್ಯಾಲಿ ಮಾಡೋಕೆ ಹೊರಟಿದ್ದಾರೆ. ಅವರು ಸಾಮರಸ್ಯ ಕಾಪಾಡುತ್ತಾರಾ? 
ಸಾಮರಸ್ಯ ಹಾಳುಮಾಡೋಕೆ ಹೊರಟಿದ್ದಾರೆ ಎಂದು ಹರಿಹಾಯ್ದಿದ್ದಾರೆ.

Trending News