ಪ್ರೀತಿಯ ಜೋಡಿಗೆ ಪೋಷಕರೇ ವಿಲನ್: ಬದುಕುವ ಅವಕಾಶಕ್ಕೆ ಅಂಗಲಾಚುತ್ತಿರುವ ನವಜೋಡಿ...!

ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವತಿ ಶಾಂತವ್ವ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಂಜುನಾಥ್ ನಡುವೆ 2 ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು.

Written by - Zee Kannada News Desk | Last Updated : Jan 25, 2022, 01:33 PM IST
  • ಪ್ರೀತಿಸಿ ಮದುವೆಯಾದ ಯುವ ಪ್ರೇಮಿಗಳಿಗೆ ವಿಲನ್ ಆದ ಪೋಷಕರು
  • ಮದುವೆಯಾದ ಸರ್ಟಿಫಿಕೇಟ್ ಹಿಡಿದು ಪೊಲೀಸ್ ಠಾಣೆಗೆ ಮೆಟ್ಟಿಲೇರಿದ ಪ್ರೇಮಿಗಳು
  • ಪೋಷಕರಿಂದ ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಲವ್ ಬರ್ಡ್ಸ್ ಮನವಿ
ಪ್ರೀತಿಯ ಜೋಡಿಗೆ ಪೋಷಕರೇ ವಿಲನ್: ಬದುಕುವ ಅವಕಾಶಕ್ಕೆ ಅಂಗಲಾಚುತ್ತಿರುವ ನವಜೋಡಿ...! title=
ಪ್ರೀತಿಸಿ ಮದುವೆಯಾದವರಿಗೆ ಪೋಷಕರೇ ವಿಲನ್!

ಹುಬ್ಬಳ್ಳಿ: ಪ್ರೀತಿಗೆ ಕಣ್ಣಿಲ್ಲ ಅಂತಾರೆ… ಪ್ರೀತಿ ಎಲ್ಲವನ್ನೂ ಮೀರಿದ್ದು ಅನ್ನೋದು ಪ್ರೇಮಿಗಳ ಭಾವನೆ. ಇಂತಹ ಪ್ರೀತಿಗೆ ಸದ್ಯ ಪೋಷಕರ ವಿರೋಧ ಹೆಚ್ಚಾಗಿದೆ. ಪ್ರೀತಿಸಿ ಮದುವೆ(Love marriage)ಯಾಗಿದ್ದ ಯುವ ಪ್ರೇಮಿಗಳಿಗೆ ಇಲ್ಲಿ ಪೋಷಕರೆ ವಿಲನ್ ಆಗಿದ್ದಾರೆ. ಅಷ್ಟಕ್ಕೂ ಈ ಪ್ರೇಮಿಗಳಿಗೆ ವಿರೋಧ ಮಾಡಿದ್ದಾದರೂ ಯಾಕೆ ಗೊತ್ತಾ..?  

ಹೀಗೆ ಮದುವೆಯಾದ ಸರ್ಟಿಫಿಕೇಟ್ ಹಿಡಿದು ನಿಂತಿರುವ ಇವರು ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾದ ಪ್ರೇಮಿಗಳು(Newly-Married Couple). ಮೂಲತಃ ಧಾರವಾಡ ಜಿಲ್ಲೆ(Dharwad District)ಯವರಾದ ಇವರಿಬ್ಬರು ಸದ್ಯ ಪೋಷಕರಿಂದ ಆತಂಕಕ್ಕೆ ಒಳಗಾಗಿ ನಮ್ಮ ಜೀವ ಉಳಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವತಿ ಶಾಂತವ್ವ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಂಜುನಾಥ್ ನಡುವೆ 2 ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಇಬ್ಬರು ಒಬ್ಬರಿಗೊಬ್ಬರು ಬಿಟ್ಟಿರಿಲಾರದ ಹಾಗೆ ಪ್ರೀತಿಸಿದ್ದರು. ನಂತರ ಮನೆಯವರಿಗೂ ಸಹ ಪ್ರೀತಿಯ ವಿಷಯವನ್ನು ಹೇಳಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದ ಹಿನ್ನೆಲೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೂ ಸಹ ಇವರಿಬ್ಬರೂ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಗೆಲ್ಲುವುದಕ್ಕೆ ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಕನಸು: ಸಿದ್ದರಾಮಯ್ಯಗೆ ತಿವಿದ ಬಿಜೆಪಿ

ಇನ್ನೂ ಇವರಿಬ್ಬರೂ ಮದುವೆಯಾಗಿ ಬರೋಬ್ಬರಿ 5 ತಿಂಗಳೇ ಕಳೆದಿದೆ. ಮದುವೆಯಾದಗಿನಿಂದ ಹೆಣ್ಣಿನ ಮನೆಯವರಿಂದ ನಿತ್ಯ ಜೀವ ಬೆದರಿಕೆ ಬರುತ್ತಿವೆ ಅಂತೆ. ಏನೇ ಆದರೂ ಹುಡುಗನನ್ನು ಮಾತ್ರ ಬಿಡುವುದಿಲ್ಲ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರಂತೆ. ಹೀಗಾಗಿ ಸದ್ಯ ನೊಂದಿರುವ ಪ್ರೇಮಿಗಳು ನಮ್ಮ ಜೀವವನ್ನು ಉಳಿಸಿ ಅಂತಾ ಪೊಲೀಸ್ ಠಾಣೆ(Police Protection) ಮೆಟ್ಟಿಲೆರಿದ್ದಾರೆ. ಜಾತಿಯ ಕಾರಣಕ್ಕೆ ಪ್ರೇಮಿಗಳ ಮದುವೆಗೆ ವಿರೋಧ ಹೆಚ್ಚಿದ್ದು, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಅಂತಾ ಕೇಳಿಕೊಳ್ಳುತ್ತಿದ್ದಾರೆ. ಕಳೆದೊಂದು ವಾರದಿಂದ ಪ್ರೇಮಿಗಳಿಬ್ಬರಿಗೂ ಜೀವ ಬೆದರಿಕೆ ಹೆಚ್ಚಾದಂತೆ ಪೊಲೀಸರು ನಮ್ಮನ್ನು ಕಾಪಾಡಬೇಕು ಅಂತಾ ಅಂಗಲಾಚಿದ್ದಾರೆ.

ಒಟ್ಟಾರೆ ಪ್ರೀತಿಯೇ ಎಲ್ಲ ಅಂದುಕೊಂಡಿದ್ದ ಈ ಯುವ ಪ್ರೇಮಿಗಳಿಗೆ(Love Birds) ಮನೆಯವರೇ ವಿಲನ್ ಗಳಾಗಿದ್ದು, ನಮ್ಮನ್ನು ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಅನ್ನೋದೇ ಇವರ ಬೇಡಿಕೆಯಾಗಿದೆ. ಆದರೆ ಜಾತಿ ಕಾರಣಕ್ಕೆ ಪೋಷಕರು ಇವರ ಪ್ರೀತಿಗೆ ಅಡ್ಡಿಯಾಗಿದ್ದು, ಎಲ್ಲಿ ನಮಗೆ ತೊಂದರೆ ನೀಡುತ್ತಾರೋ ಅನ್ನೋ ನಿತ್ಯಭಯ ಇವರನ್ನು ಕಾಡುತ್ತಿದೆ.

ಇದನ್ನೂ ಓದಿ: Corona In School Children: ಕೆ‌.ಆರ್.ಪೇಟೆ ತಾಲೂಕಿನ ಶಾಲೆಗಳಲ್ಲಿ ಕೊರೊನಾ ಆರ್ಭಟ : ಪೋಷಕರ ಆತಂಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News