Modal Virupakshappa: ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ  ಪೋಸ್ಟರ್.

ಕೆಎಸ್‌ಡಿಎಲ್‌ ಟೆಂಡರ್‌ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ  ಪೋಸ್ಟರ್‌ ಅಭಿಯಾನ ಶುರುವಾಗಿದೆ. ಬೆಂಗಳೂರಿನ ಹಲವೆಡೆ  ʼಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಲಾಗಿದೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ ಎಂದು ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ.

Written by - VISHWANATH HARIHARA | Last Updated : Mar 7, 2023, 10:19 AM IST
  • ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ ಆರೋಪಿ ಕಂಡರೆ 100 ಕರೆ ಮಾಡಿ ಎಂದು ಪೋಸ್ಟರ್
  • ವಿರೂಪಾಕ್ಷಪ್ಪ ವಿರುದ್ಧ ಪೋಸ್ಟರ್‌ ಅಭಿಯಾನ
  • ಒಟ್ಟು 8.12 ಕೋಟಿ ಹಣವನ್ನು ವಶಕ್ಕೆ
Modal Virupakshappa: ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ  ಪೋಸ್ಟರ್. title=

ಬೆಂಗಳೂರು: ಕೆಎಸ್‌ಡಿಎಲ್‌ ಟೆಂಡರ್‌ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ  ಪೋಸ್ಟರ್‌ ಅಭಿಯಾನ ಶುರುವಾಗಿದೆ. ಬೆಂಗಳೂರಿನ ಹಲವೆಡೆ  ʼಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಲಾಗಿದೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ ಎಂದು ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: Sumalatha Ambarish: ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕನ್ಫರ್ಮ್ ಆಯ್ತಾ?

ಎ1 ಆರೋಪಿ ಮಿಸ್ಸಿಂಗ್. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಲೋಕಾಯುಕ್ತ ತನಿಖೆಗೆ ಸಹಾಯ ಮಾಡಿ.ನಿಮಗೆ ಎಲ್ಲಾದ್ರೂ ಸಿಕ್ಕಿದ್ರೆ 40% ಸರ್ಕಾರಕ್ಕೆ ಕಾಲ್ ಮಾಡಿ.ಹೈಟ್ 5.9 ಅಡಿ, ವಯಸ್ಸು 72 ವರ್ಷ,ಕೊನೆ ಲೋಕೆಷನ್ ಸಿಎಂ ಆಫೀಸ್, ನಾಪತ್ತೆಯಾಗಿರುವ ದಿನಾಂಕ 4-03-23 ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.ಹುಡುಕಿ ಕೊಟ್ಟು ಲೋಕಾಯುಕ್ತ ತನಿಖೆಗೆ ಸಹಕರಿಸುವಂತೆ ಪೋಸ್ಟರ್ ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Siddaramaiah: ʼಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷʼ-ಮಾಜಿ ಸಿಎಂ ಸಿದ್ದರಾಮಯ್ಯ

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ  ಪುತ್ರ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್‌ ಮತ್ತು ಹಲವರನ್ನು ಈ ಸಂಬಂಧ ಬಂಧಿಸಲಾಗಿತ್ತು. ಪ್ರಶಾಂತ್‌ನನ್ನು ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಒಟ್ಟು 8.12 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಲೋಕಾ ಟ್ರ್ಯಾಪ್ ನಂತರ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News