V Somanna: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ..!

ಬೆಂಗಳೂರಿನ ಸೂರ್ಯನಗರದಲ್ಲಿ 600 ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು

Last Updated : Mar 20, 2021, 01:58 PM IST
  • ಬೆಂಗಳೂರಿನ ಸೂರ್ಯನಗರದಲ್ಲಿ 600 ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು
  • ವಸತಿ ಸಚಿವ ವಿ.ಸೋಮಣ್ಣ ತಿಳಿಸುವ ಮೂಲಕ, ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ
  • ಹೆಣ್ಣು ಮಕ್ಕಳು ಕುಟುಂಬ ಹಾಗೂ ಸಮಾಜದ ಕಣ್ಣು. ಹೆಣ್ಣು ಮಗು ಹುಟ್ಟಿದರೆ ತಾತ್ಸರದಿಂದ ನೋಡುವ ಕಾಲ ಹೋಯಿತು.
V Somanna: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ..! title=

ಬೆಂಗಳೂರು: ಹೆಣ್ಣು ಮಗು ಹೆತ್ತ ತಾಯಿ, ತಂದೆಗೆ ಯಾವುದೇ ಹೊರೆಯಾಗದೇ ಮತ್ತು ಹೆಣ್ಣು ಶಿಶುಗಳ ಜನನ ಮತ್ತು ಪಾಲನೆಗೆ ಉತ್ತೇಜನ ನೀಡಲು ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಗುತ್ತಿದೆ. ಬೆಂಗಳೂರಿನ ಸೂರ್ಯನಗರದಲ್ಲಿ 600 ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು ಇಡಲಾಗುವುದು ಎಂಬುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸುವ ಮೂಲಕ, ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.

ಇಂದು ಸೆಂಟರ್ ಫಾರ್ ಆಡ್ವೋಕೆಸಿ ಮತ್ತು ರಿಸರ್ಚ್ ಸಿ.ಎಫ್.ಆರ್.ಐ ಮತ್ತು ಗೋವಿಂದರಾಜನಗರ ಮಂಡಲ ಮಹಿಳಾ ಮೋರ್ಚಾ ಸಹಯೋಗದಲ್ಲಿ 500 ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಭಾಂಡ್(Bhagyalakshmi Bond) ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಬಡವರ ಬೇಕಾದ ಸೌವಲತ್ತು ಬಡವರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಮಾನವೀಯತೆಯ ಸಾಕರಮೂರ್ತಿಗಳು ಮಹಿಳೆಯರು. ಹೆಣ್ಣು ಮಕ್ಕಳು ಕುಟುಂಬ ಹಾಗೂ ಸಮಾಜದ ಕಣ್ಣು. ಹೆಣ್ಣು ಮಗು ಹುಟ್ಟಿದರೆ ತಾತ್ಸರದಿಂದ ನೋಡುವ ಕಾಲ ಹೋಯಿತು. ಮಹಿಳೆಯರು ಪುರುಷರಷ್ಟೆ ಶಕ್ತಿವಂತರು ಎಂದು ರೂಪಿಸಿದ್ದಾರೆ. ಬಡತನ ರೇಖೆಯಿಂದ ಕೆಳಗೆ ಇರುವವರ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅವರ ವಿದ್ಯಾಭ್ಯಾಸಕ್ಕೆ ಹಣಕಾಸಿನ ಮುಗ್ಗಟ್ಟು ಬರಬಹುದು ಹತ್ತು ಹಲವು ಅತಂಕದಿಂದ ಕುಟುಂಬ ನಲುಗುತ್ತದೆ. ಹೆಣ್ಣು ಮಗು ಹೆತ್ತ ತಾಯಿ, ತಂದೆಗೆ ಯಾವುದೇ ಹೊರೆಯಾಗದೇ ಮತ್ತು ಹೆಣ್ಣು ಶಿಶುಗಳ ಜನನ ಮತ್ತು ಪಾಲನೆಗೆ ಉತ್ತೇಜನ ನೀಡಲು ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಗುತ್ತಿದೆ ಎಂದರು.

Ramesh Jarkiholi CD Case: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು?

ನಗರದ ಸೂರ್ಯನಗರದಲ್ಲಿ 600ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿ(Womans)ಗೆ ಮೀಸಲು ಇಡಲಾಗುವುದು. ಪ್ರಧಾನಿ ನರೇಂದ್ರಮೋದಿರವರು ಬಡವರಿಗೆ ತಲುಪುವ ಸೌಲಭ್ಯಗಳು ತತಕ್ಷಣ ತಲುಪುವಂತೆ ಮಾಡಬೇಕು ಎಂಬ ಆಶಯ ಇಟ್ಟುಕೊಂಡಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರು, ಇತರೆ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಿಂದ ಉಚಿತ ಬಸ್ ಪಾಸ್ ಸೌಲಭ್ಯ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯ ಯೋಜನೆಗಳು ಮತ್ತು ಸಾಲ ಸೌಲಭ್ಯ, ವಸತಿ ಸೌಲಭ್ಯಗಳು ಸಿಗುತ್ತದೆ. ಹಲವಾರು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

K-Kisan: ರಾಜ್ಯದ ರೈತರು ಕೃಷಿ ಇಲಾಖೆ ಸೌಲಭ್ಯ ಪಡೆಯಲು ಈ ನೋಂದಣಿ ಕಡ್ಡಾಯ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(Department of Women's and Child Development & Social Welfare) ವತಿಯಿಂದ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಹಾಗೂ ಪಡಿತರ ಚೀಟಿ, ವೃದ್ದಾಪ್ಯ ವೇತನ ಪ್ರಮಾಣಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಣಾ ಸಮಾರಂಭ ವಸತಿ ಸಚಿವರಾದ ವಿ.ಸೋಮಣ್ಣರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.

ಹೊರಗುತ್ತಿಗೆ ಆಧಾರದ ನೇಮಕಾತಿಯಿಂದಾಗಿ ಮೀಸಲಾತಿ ನಿರಾಕರಣೆ- ಎಚ್.ಕೆ.ಪಾಟೀಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News