ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣವು ಮತ್ತೊಮ್ಮೆ ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಅವರು, ‘ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬ್ ಸ್ಫೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬು ಸ್ಪೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು.#ManagaluruBlast
1/2— Siddaramaiah (@siddaramaiah) November 20, 2022
‘ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟದ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು ಆಟೋ ಸ್ಫೋಟ ಉಗ್ರರ ಕೃತ್ಯ: ಡಿಜಿಪಿ ಪ್ರವೀಣ್ ಸೂದ್
ಮಂಗಳೂರು ಬಾಂಬು ಸ್ಪೋಟ ಮತ್ತೊಮ್ಮೆ ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.
ಈ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ
ಕೇಳಿಕೊಳ್ಳುತ್ತಿದ್ದೇನೆ.#MangaluruBlast
2/2— Siddaramaiah (@siddaramaiah) November 20, 2022
ಇದು ಉಗ್ರರ ಕೃತ್ಯವೆಂದ ಡಿಜಿಪಿ ಪ್ರವೀಣ್ ಸೂದ್
ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಉಗ್ರರ ಕೃತ್ಯವೆಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಸ್ಫೋಟ ಪ್ರಕರಣ ಸಂಬಂಧ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇದು ಆಕಸ್ಮಿಕ ಸ್ಫೋಟವಲ್ಲ, ಉಗ್ರ ಕೃತ್ಯವಾಗಿದೆ. ಸ್ಫೋಟದ ಸಂಭವಿಸಿದ ಸಂದರ್ಭ ಸುತ್ತಮುತ್ತಲೂ ಜನರಿಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ತೀವ್ರ ತನಿಖೆ ಆರಂಭಿಸಿದೆ’ ಎಂದು ಹೇಳಿದ್ದಾರೆ.
ಸ್ಫೋಟದ ವಿಡಿಯೋ ವೈರಲ್
#Mangaluru Fire broke out from auto rickshaw injuring driver and passenger. Cause of the fire yet to be ascertained.
Fire broke out from passenger's bag:City police commissioner N Shashi Kumar @XpressBengaluru @ramupatil_TNIE @santwana99 @compolmlr @vinndz_TNIE pic.twitter.com/ajsTdwZZhu— Divya Cutinho_TNIE (@cutinha_divya) November 19, 2022
ಮಂಗಳೂರಿನ ನಾಗುರಿಯಿಂದ ಪಂಪ್ ವೆಲ್ ಕಡೆಗೆ ಸಂಚರಿಸುತ್ತಿದ್ದ ಆಟೋದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ದಾರಿ ಮಧ್ಯೆ ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ ಮತ್ತು ಆಟೋ ಚಾಲಕನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ಹೊಡೆತಕ್ಕೆ ಆಟೋದ ಒಳಭಾಗವು ಸಂಪೂರ್ಣ ಸುಟ್ಟು ಕರಕಲಾಗಿದೆ. ಆಟೋ ಸ್ಫೋಟಗೊಂಡಿರುವ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆಟೋ ರಿಕ್ಷಾದೊಳಗೆ ಸ್ಪೋಟ ನಡೆದಿದ್ದು ಆಕಸ್ಮಿಕವಲ್ಲ, ಇದೊಂದು ಉಗ್ರ ಕೃತ್ಯ : ಡಿಜಿಪಿ ಪ್ರವೀಣ್ ಸೂದ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.