ಕರಾವಳಿಯಲ್ಲಿ ಕಮಲ ಪಾಳಯದಲ್ಲಿ ಟಿಕೆಟ್ ಪೈಪೋಟಿ

Mangalore BJP Loksabha Ticket: ಕರಾವಳಿ ಪ್ರದೇಶ ದಕ್ಷಿಣ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ವಿಶೇಷ ಅಂದ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಲ್ಲಿ ಅಚ್ಚರಿ ಬೆಳವಣಿಗೆಗಳು ನಡೆದಿವೆ. 

Written by - Zee Kannada News Desk | Last Updated : Feb 18, 2024, 01:56 PM IST
  • ಬಿಜೆಪಿ‌ ಮಾಜಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಟಿಕೆಟ್ ಕೈ ತಪ್ಪುವ ಟಾಕ್
  • ಲೋಕಸಭೆ ಅಖಾಡಕ್ಕೆ ಅಚ್ಚರಿ ಹೆಸರುಗಳ ಬಗ್ಗೆ ಬಿಜೆಪಿ ನಾಯಕರಿಂದ ಪರಾಮರ್ಶೆ
  • ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ, ಅರುಣ್ ಪುತ್ತಿಲ ಬಗ್ಗೆ ಹಿಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ಕರಾವಳಿಯಲ್ಲಿ ಕಮಲ ಪಾಳಯದಲ್ಲಿ ಟಿಕೆಟ್ ಪೈಪೋಟಿ title=

BJP Loksabha Ticket: ಲೋಕಸಭೆ ಚುನಾವಣೆ ಇನ್ನೇನು ಎದುರಾಗುತ್ತಿದೆ.  ಆದರ ಬೆನ್ನಲ್ಲೇ ಹಾಲಿ-ಮಾಜಿಗಳಲ್ಲಿ ಟಿಕೇಟ್ ಬಗ್ಗೆಯೇ ಚರ್ಚೆ ಜೋರಾಗಿದೆ. ಕರಾವಳಿ ಪ್ರದೇಶ ದಕ್ಷಿಣ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ವಿಶೇಷ ಅಂದ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಲ್ಲಿ ಅಚ್ಚರಿ ಬೆಳವಣಿಗೆಗಳು ನಡೆದಿವೆ. 

ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಟಿಕೆಟ್ ಗಾಗಿ ಈ ಬಾರಿ ತಮ್ಮ ಪಕ್ಷದ ಯುವ ಮುಖಂಡರಿಂದ ಪೈಪೋಟಿ ಎದುರಿಸುವಂತಾಗಿದೆ. ಕಟೀಲ್ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಗೆ ಹೈಕಮಾಂಡ್ ಟಿಕೆಟ್ ನೀಡ್ತಾರೋ ಇಲ್ವೋ ಎಂಬ ಟಾಕ್ ಜೋರಾಗಿಯೇ ಇದೆ. ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ್, ಪೊಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಪರ ಹಿಂದು ಕಾರ್ಯಕರ್ತರು ಒವಲು ವ್ಯಕ್ತಪಡಿಸುತ್ತಿದ್ರೆ, ಅರುಣ್ ಪುತ್ತಿಲ, ಸತ್ಯಹಿತ್ ಸೂರತ್ಕಲ್ ಅವರು ಸಹ ಪಕ್ಷದ ನಾಯಕರ ಹಂತದಲ್ಲಿ ಟಿಕೆಟ್ ಗಿಟ್ಟಿಸಲು ತೆರೆಮರೆಯಲ್ಲೇ ಪ್ರಯತ್ನ ನಡೆಸುತ್ತಿದ್ದಾರೆ. 

ಇದನ್ನೂ ಓದಿ: "ನಮ್ಮ ಗ್ಯಾರಂಟಿಯನ್ನು ಕದ್ದು 'ಮೋದಿ ಗ್ಯಾರಂಟಿ' ಎಂದು ಭಜನೆ ಮಾಡುತ್ತಿದ್ದಾರೆ"

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಹೊಸ ಮುಖದ ನಿರೀಕ್ಷೆಯಲ್ಲಿದ್ದಾರೆಯೇ.? ಇದಕ್ಕೆ ಪ್ರಮುಖ ಕಾರಣವಾದರೂ ಏನು ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿರುವುದು ಸತ್ಯ. 

ಕಟೀಲ್ ಕರಾವಳಿಯಲ್ಲಿ ಹಿಂದೂ ಬ್ರ್ಯಾಂಡ್ ಮಂಕಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿವೆ. ಪ್ರವೀಣ್ ನೆಟ್ಟಾರು ಅವರ ಹತ್ಯೆಯಾದ ಬಳಿಕ ಕಟೀಲ್ ವಿರುದ್ಧ ಹಿಂದು ಕಾರ್ಯಕರ್ತರಲ್ಲಿ ಅಸಮಾಧಾನ ಬಹಿರಂಗವಾಗಿಯೇ ಕಂಡಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು ಹಿಂದು ಕಾರ್ಯಕರ್ತರ ರಕ್ಷಣೆಗೆ ನಿಲ್ಲಲಿಲ್ಲ ಎಂಬ ನೋವು ಹಿಂದು ಕಾರ್ಯಕರ್ತರಲ್ಲಿದೆ. ಹೀಗಾಗಿಯೇ ಕರಾವಳಿ ಕುಡ್ಲದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಬೇರೆಯದ್ದೇ ಚಿಂತನೆ ನಡೆಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ರಾಷ್ಟ್ರೀಯತೆ, ಸಾಮಾಜಿಕ ಹಾಗೂ  ಹಿಂದೂಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ತಮ್ಮದೇ ವರಸೆಯಲ್ಲಿ ವರಿಷ್ಠರೆದುರು ಬೇಡಿಕೆ ಇಡುತ್ತಿದ್ದಾರೆ. ಕಟೀಲ್ ಗೆ ಬಿಜೆಪಿ ಟಿಕೆಟ್ ತಪ್ಪಿಸಲು ಸಾಧ್ಯವೇ ಎಂದು ಅನಿಸಿದರೂ, ತೆರೆಮರೆಯಲ್ಲಿ ಸದ್ದಿಲ್ಲದೇ ಒಂದಷ್ಟು ಅಚ್ಚರಿ ಬೆಳೆವಣಿಗೆಗಳು ನಡೆಯುತ್ತಿರುವುದು ಸ್ಪಷ್ಟ.

ಸ್ಥಳೀಯ ಮಟ್ಟದಲ್ಲಿ ಹಿಂದೂಪರ ಕೆಲಸ ಮಾಡುತ್ತಿರುವ ಬ್ರಿಜೇಶ್ ಚೌಟ ಹಾಗೂ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಈರ್ವರ ಬಗ್ಗೆ ಬಿಜೆಪಿ ಹಿಂದು ಕಾರ್ಯಕರ್ತರು ಒಲವು ತೋರುತ್ತಿದ್ದಾರೆ. ಕಾರಣ ಹಿಂದು ಕಾರ್ಯಕರ್ತರ ಹತ್ಯೆಯಾದಾಗ ಅವರ ಕುಟುಂಬದ ನೆರವಿಗೆ ಧಾವಿಸಿದವರು ಮಹೇಶ್ ವಿಕ್ರಮ್ ಹೆಗ್ಡೆ. ರಾಷ್ಟ್ರೀಯತೆ, ಸಿದ್ಧಾಂತಕ್ಕಾಗಿ ಪೋಸ್ಟ್ ಕಾರ್ಡ್ ಆರಂಭಿಸಿ ಗಮನ ಸೆಳೆದಿದ್ದ ಹೆಗ್ಡೆ, ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನ ನಡೆಸಿ ನೊಂದ ಕುಟುಂಬಗಳಿಗೆ ಆರ್ಥಿಕ ನೆರವು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಹತ್ಯೆಗಿಡಾದ ಹರ್ಷ ಅವರ ಕುಟುಂಬಕ್ಕೆ 86 ಲಕ್ಷ, ಪ್ರವೀಣ್ ನೆಟ್ಟಾರ ಕುಟುಂಬಕ್ಕೆ 38 ಲಕ್ಷ ರೂ ಹರಿದು ಬಂದಿತ್ತು.  ಕುಟುಂಬದವರ ಖಾತೆಗೆ ನೇರವಾಗಿ ಹಣ ಜಮಾ ಮಾಡಿಸುವ ಪಾರದರ್ಶಕ ಅಭಿಯಾನಗಳನ್ನ ವಿಕ್ರಮ್ ಹೆಗ್ಡೆ ನಡೆಸಿದ್ದರು. ವಿಶೇಷವಾಗಿ ಕಲ್ಲಡ್ಕ್ ಪ್ರಭಾಕರ್ ಅವರ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಮಧ್ಯಾಹ್ನದ ಬಿಸಿ ಉಟಕ್ಕೆ ಸರ್ಕಾರ ಅನುದಾನ ಕಡಿತ ಮಾಡಿದಾಗ ಭೀಕ್ಷಾಂದೇಹಿ ಎಂಬ ಅಭಿಯಾನ ದೊಡ್ಡ ಯಶಸ್ಸು ಕಂಡಿತ್ತು.‌

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ 

ಇನ್ನು ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಬೆರತು ಪಕ್ಷದ ಕಾರ್ಯಚಟುವಟಿಯಲ್ಲಿ ನಿರತರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ, ಈ ಬಾರಿ ಪ್ರಬಲವಾಗಿ ಕೇಳಿ ಬಂದಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಚೌಟ ಅವರ ಪರವು ಕಾರ್ಯಕರ್ತರು ಒಲವು ವ್ಯಕ್ತಪಡಿಸುತ್ತಿದ್ದಾರೆ. 

ಹಿಂದುತ್ವದ ಮೇಲೆಯೇ ಚುನಾವಣೆ ನಡೆಯುವ ಮಂಗಳೂರಿನಲ್ಲಿ ಜಾತಿವಾರು ರಾಜಕಾರಣ ಅಷ್ಟೊಂದು ಪ್ರಭಾವ ಬೀರಿಲ್ಲ. ಆದರೂ ಒಂದು ವೇಳೆ ಕಟೀಲ್ ಬದಲು ಬಿಜೆಪಿ, ಬಂಟ ಸಮುದಾಯದ ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಗೆ ಟಿಕೇಟ್ ನೀಡಿದರೆ ಕಾಂಗ್ರೆಸ್ ಈಡಿಗ-ಬಿಲ್ಲವ ಸಮುದಾಯದ ವಿನಯ ಕುಮಾರ್ ಸೊರಕೆಯನ್ನ ಕಣಕ್ಕಿಳಿಸಲು ತಂತ್ರ ಹೆಣೆಯುತ್ತಿದೆ. ಕಟೀಲ್ ಅವರಿಗೆ ಟಿಕೆಟ್ ಕೈ ತಪ್ಪುವುದನ್ನೇ ಎದುರು ನೋಡ್ತಿರುವ ಕೈ ಪಾಳೆಯ ಈ ಬಾರಿ ಚುನಾವಣೆಯಲ್ಲಿ ಒಂದಿಷ್ಟು ಸ್ಟಾಟರ್ಜಿಗಳ ಮಾಡುತ್ತಿದೆ. ಈ ಹಿಂದೆ ಬಂಟ ಸಮುದಾಯದ ಮಿಥುನ್ ರೈ ಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಈ ಬಾರಿ ತನ್ನ ತಂತ್ರವನ್ನು ಬದಲಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News