ಜಾಗ ಬಿಡುವ ವಿಚಾರಕ್ಕೆ ಕಿರಿಕ್.. ಕುಡಿದ ಮತ್ತಿನಲ್ಲಿ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ (Man attacked by Beer bottle) ಹೊಡೆದವನನ್ನು ಪೊಲೀಸರು ಬಂಧಿಸಿದ್ದಾರೆ. 

Written by - Malathesha M | Edited by - Chetana Devarmani | Last Updated : Feb 24, 2022, 09:31 PM IST
  • ಜಾಗ ಬಿಡುವ ವಿಚಾರಕ್ಕೆ ಕಿರಿಕ್
  • ಕುಡಿದ ಮತ್ತಿನಲ್ಲಿ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ
  • ಈ ಸಂಬಂಧ ಅನಿಲ್ ಎಂಬಾತನನ್ನು ಬಂಧನ
ಜಾಗ ಬಿಡುವ ವಿಚಾರಕ್ಕೆ ಕಿರಿಕ್.. ಕುಡಿದ ಮತ್ತಿನಲ್ಲಿ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ title=
ಬೆಂಗಳೂರು

ಬೆಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ (Man attacked by Beer bottle) ಹೊಡೆದವನನ್ನು ಪೊಲೀಸರು ಬಂಧಿಸಿದ್ದಾರೆ. 

ಜೆ.ಪಿ‌ ನಗರದಲ್ಲಿರುವ ಸಿದ್ದೇಶ್ವರ ಚಿತ್ರ ಮಂದಿರ ಬಳಿಯ ಗುರು ಬಾರ್ ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.

ಕುಡಿದು ಏರಿಯಾದಲ್ಲೆಲ್ಲ ಕಿರಿಕ್ ಮಾಡಿಕೊಳ್ತಿದ್ದ. ಬಾರ್ ನಲ್ಲಿ ತನ್ನ ಸಹಚರರ ಜತೆ ಸೇರಿ ಕುಡಿದು ಹಣ ಕೊಡದೇ ಎಸ್ಕೇಪ್ ಆಗ್ತಿದ್ದ ಎಂದು ಆರೋಪಿಸಲಾಗಿದೆ. 

ಬಾರ್ ನವರು ಹಣ ಕೇಳಿದ್ರೆ ಐದು ನಿಮಿಷ ಬರುತ್ತೇನೆ ಎಂದು ಹೇಳಿ ಎಸ್ಕೇಪ್ ಆಗುತ್ತಿದ್ದನಂತೆ. ಕಾರ್ಡ್ ಕೊಡ್ತಿನಿ ಇರಿ ಎಂದು ಬಿಲ್ಡಪ್ ಕೊಡ್ತಿದ್ದನಂತೆ. ಆದರೆ ಸಾವಿರಾರು ರೂಪಾಯಿ ಬಿಲ್ ಮಾಡಿ ಕೊಡದೆ ಪರಾರಿಯಾಗಿದ್ದಾನೆ.

ಬಾಬಾ ವೈನ್ಸ್ ನಲ್ಲಿ ಕುಡಿದು ಮೂರು ಸಾವಿರ ಬಿಲ್ ಮಾಡಿದ್ದ ಅನಿಲ್, ಹಣ ಕೇಳಿದ್ದಕ್ಕೆ ಐದು ನಿಮಿಷ ಬರುತ್ತೇನೆ ಎಂದು ಪಕ್ಕದ ಗುರು ಬಾರ್ ಹತ್ತಿರ ಬಂದಿದ್ದಾನೆ. ಅಲ್ಲಿ ಜಾಗ ಬಿಡುವ ವಿಚಾರಕ್ಕೆ ಮತ್ತೋರ್ವ ವ್ಯಕ್ತಿ ಜೊತೆ ಕಿರಿಕ್ ತೆಗೆದಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ಅನಿಲ್ ಬಿಯರ್ ಬಾಟಲಿಯಿಂದ ಫರ್ವೇಜ್ ಖಾನ್ ಎಂಬಾತನ ತಲೆಗೆ ಹೊಡೆದಿದ್ದಾನೆ ಎಂದು ಹೇಳಲಾಗಿದೆ. 

ಈ ಸಂಬಂಧ ಆರೋಪಿ ಅನಿಲ್ ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ: Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News